#
nil
ಕಾವ್ಯದಂತೆ, ಸಣ್ಣಕಥೆಯಲ್ಲೂ ಲಕ್ಷಣರಾವ್ ಸದ್ಯ ಬಂಡಾಯಗಳ ಹಣೆಪಟ್ಟಿಗೆ ದಕ್ಕುವವರಲ್ಲ, ನವ್ಯದ ಅಂತರ್ಮುಖಿಕೆ, ಅಂತಃಪ್ರಶ್ನೆ, ಪ್ರಜ್ಞಾಪ್ರವಾಹತಂತ್ರ ಇದೇ ಮೊದಲಾದವು ಇವರ ಕಥೆಗಳಲ್ಲಿ ಕಾಣುವುದಿಲ್ಲ ಸಾಮಾಜಿಕ ಕಳಕಳಿಗಿಂತ ಭಿನ್ನ, ಅಂದರೆ ಸಾಮಾಜಿಕ ಸಮಸ್ಯೆಗಳಿಂದ ವಿಮುಖರು ಎಂದಲ್ಲ, ಸಾಮಾಜಿಕ ಸಮಸ್ಯೆಗಳು, ಕ್ರೂರ ವ್ಯವಸ್ಥೆ ಇವುಗಳ ಒತ್ತಡದಲ್ಲಿ, ದಮನಕಾರಿ ನಿಲುವುಗಳಲ್ಲಿ ಮನುಷ್ಯ ಸಂಬಂಧಗಳು, ಪ್ರೀತಿ ವಿಶ್ವಾಸಗಳು ಹೇಗೆ ನಲುಗಿಹೋಗುತ್ತಿವೆ ಎಂಬುದು ಲಕ್ಷಣರಾವ್ ಅವರ ಸೃಜನಶೀಲ ಮನಸ್ಸಿನ ಮುಖ್ಯ ಕಾಳಜಿಯಾಗಿದೆ. ಪ್ರೀತಿ, ಗಂಡು-ಹೆಣ್ಣಿನ ಪ್ರೀತಿ, ಜೀವನಪ್ರೀತಿ - ಇವು ವ್ಯವಸ್ಥೆಯ ಕ್ರೂರ ಹಿಡಿತದಲ್ಲಿ ನಲುಗಬಾರದು. ನಿಷೇಧ ಮೊದಲಾದ ನಕಾರಾತ್ಮಕ ಪ್ರವೃತ್ತಿಗಳಲ್ಲಿ ಪ್ರೀತಿ ಮುರುಟಿಹೋಗಬಾರದು ಎಂಬ ಆರೋಗ್ಯಕರ ಜೀವನದೃಷ್ಟಿ ಲಕ್ಷಣರಾವ್ ಅವರ ಕಥೆಗಳ ಹಿಂದಿನ ಮುಖ್ಯ ಮಾನವೀಯ ದನಿಯಾಗಿದೆ. ಲಕ್ಷಣರೊಳಗಿನ ಕವಿಯ ಆರೋಗ್ಯಕರ ಜೀವನದೃಷ್ಟಿ, ಸ್ಪಷ್ಟ ವಿಚಾರಗಳ ಜೊತೆಗೆ ಅವರ ಗದ್ಯವು ವಾಚ್ಯವಾಗದೆ ಧ್ವನಿಪೂರ್ಣವಾಗಿ ಕಾವ್ಯಕ್ಕೆ ಹತ್ತಿರವಾಗುತ್ತದೆ. ಜಿ.ಎಸ್.ಆಮೂರರು ಹೇಳಿರುವಂತೆ ಪ್ರಾಮಾಣಿಕತೆ, ತೀವ್ರತೆ ಮತ್ತು ಹೊಸದೃಷ್ಟಿ ಲಕ್ಷಣರಾವ್ ಅವರ ಕಾವ್ಯದ ಮುಖ್ಯ ಗುಣಗಳಾಗಿರುವಂತೆ ಕಥೆಗಳ ಮುಖ್ಯ ಗುಣವೂ ಆಗಿದೆ: ಶಕ್ತಿಯೂ ಆಗಿದೆ.
ಇದು ಕಡಲ ತೀರದ ಹುಡುಗ ಮತ್ತು ಬಯಲು ಸೀಮೆಯ ಹುಡುಗಿಯರ ನಡುವಿನ ಒಂದು ನವಿರಾದ ಪ್ರೇಮ ಕಥೆ. ಹದಿಹರೆಯವನ್ನು ಆಗಷ್ಟೇ ದಾಟಿರುವ ಆದರೆ ಬದುಕಿನ ಬಗ್ಗೆ ಇನ್ನೂ ಪ್ರೌಢರಾಗಬೇಕಾದ ಯುವ ಮನಸುಗಳ ಪ್ರೇಮಕಥೆ.
ಕೊಡಗಿನ ಆಂತರ್ಯದಲ್ಲಿ ಹುದುಗಿದ್ದ ಅರಣ್ಯಾಧಿಕಾರಿಯೊಬ್ಬರ ಜೀವನಗಾಥೆ. ಮಲೆನಾಡಿನ ಬದಲಾದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಗೆ ಹಿಡಿದ ಕೈಗನ್ನಡಿ.
ವೈ ಎನ್ ಮಧುಸೂಧನ 1987ರಲ್ಲಿ, ಜನಿಸಿದ ಮಧುಸೂಧನ್ ವೈ ಎನ್ ಮೂಲತಃ ತುಮಕೂರು ಜಿಲ್ಲೆ ಸಿರಾ ತಾಲೂಕಿನ ಯರಗುಂಟೆ ಗ್ರಾಮದವರು.ತುಮಕೂರಿನ ನವೋದಯ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ, ಇವರ ಚೊಚ್ಚಲ ಕೃತಿ ಕಾರೇಹಣ್ಣು" ಕಥಾ ಸಂಕಲನವು 2019ರ 'ಈ ಹೊತ್ತಿಗೆ' ಕಥಾ ಸಂಕಲನ ಪ್ರಶಸ್ತಿಗೆ ಭಾಜನವಾಗಿದೆ. 'ಬಹುರೂಪಿ'ಯಿಂದ ಪ್ರಕಟವಾಗುತ್ತಿರುವ `ಫೀಫೋ' ಮಧು ಅವರ ಎರಡನೆಯ ಕಥಾ ಸಂಕಲನ.
ಫೀನಿಕ್ಸ್ ಎಂದಾಕ್ಷಣ ಮನಸ್ಸಿನಲ್ಲಿ ಮೂಡುವ ಕಾಲ್ಡನಿಕವೂ ಪೌರಾಣಿಕವೂ ಆದ ಪಕ್ಷಿಯಿದೆಯಲ್ಲಾ ಅದರ ನಿಜ ಸ್ವರೂಪದ ಭಾವವನ್ನು ಜಂಚಿಸುವ ಸಾಮರ್ಥ್ಯವಿರುವ ಪುಸ್ತಕವಿದು. ಬೆಂಕಿಯಲ್ಲಿ ಸುಟ್ಟು ಕರಕಲಾಗುತ್ತಿದ್ದರೂ ತನ್ನ ಬೂದಿಯಿಂದಲೇ ಮರಳಿ ಚೈತನ್ಯವನ್ನು ಪಡೆದು ಉಲ್ಲಾಸದಿಂದ ಬದುಕುವ ಪಕ್ಷಿಯು ಇಲ್ಲಿನ ಅನೇಕ ಪಾತ್ರಗಳನ್ನು, ಅವರ ಬದುಕನ್ನೂ ಪ್ರತಿಜಂಚಿಸುತ್ತದೆ.
Showing 2881 to 2910 of 5159 results