nil
#
ರತಿಯು ಬೇಲಿ ದಾಟಿ ನಾಲ್ಲು ದಾಪು ನಡೆದು ಬಾವಿ ತಲುಪಿ ಕಟ್ಟೆಯ ಹಸಿರು ಮೆತ್ತೆ ಮೇಲೆ ಕುಳಿತಳು. ಪಾಚಿಯನ್ನು ನೇವರಿಸಿದಳು. ಸಮಾಧಾನವೆನ್ನಿಸಿತು. ನೀರಿನ ಮೇಲೈಯು ಗಾಳಿಗೆ ಕಂಪಿಸುತ್ತ ತರಂಗಗಳು ಹುಟ್ಟಿ, ಬೆಳೆದು, ಮತ್ತೆ ಹುಟ್ಟಿ ಬೆಳೆದು ಅಂತರ್ಧಾನ ಆಗುವುದನ್ನು ನೋಡತೊಡಗಿದಳು. ಅದೊಂದು ಮುಗಿಯದ ವರ್ತುಲವಾಗಿ ಯಾವುದು ಶುರು, ಎಲ್ಲಿಗೆ ಕೊನೆ ಎಂದು ಅವಳಿಗೆ ಬಗೆಹರಿಯಲಿಲ್ಲ. ಬಿಸಿಲು ಇಳಿಯುತ್ತಿತ್ತು. ಕುಳಿತಿದ್ದ ರತಿ ಎದ್ದಳು. ಅವಳು ಇನ್ನೂ ನೀರಿನ ಮೈಯನ್ನೇ ನೋಡುತ್ತಿದ್ದಳು. ತಿಳಿಬಣ್ಣದ ನೀರು ಮರದ ನೆರಳು, ಸಂಜೆಯ ಛಾಯೆಯ ಜೊತೆ ಸೇರಿಕೊಂಡು ಕಪ್ಪಾಗಿ ಕಾಣುತ್ತಿತ್ತು. ರತಿಯ ಕಣ್ಣಿಗೆ ಗಳಿಗೆ ಗಳಿಗೆಗೂ ಆ ಕಪ್ಪು ಗಾಡವಾಗುತ್ತ ಹೋದಂತೆನಿಸಿ, ಒಂದು ಹಂತದಲ್ಲಿ ಎಲ್ಲ ಕಡೆ ಕಪ್ಪು ಆವರಿಸಿಕೊಂಡುಬಿಟ್ಟಿತು. ಆ ಕ್ಷಣ ಸುತ್ತಲ ಶಬ್ದಗಳೂ ಸದ್ದಡಗಿ, ಕತ್ತಲ ಸುರಂಗದೊಳಗೆ ಹೋಗುತ್ತಿರುವ ಅನುಭವವಾಯಿತಷ್ಟೆ,
ಅಂಬೇಡ್ಕರ್ ಹೆಸರಿನ ಬದಲು ದೈವದ ಸ್ಮರಣೆ ಮಾಡಿದರೆ ಸೌಭಾಗ್ಯ ಕೂಡಿಬರಲಾರದು. ಕಾಣದ ದೈವಕ್ಕಿಂತ ಕೈಹಿಡಿದು ನಡೆಸುವ ಧೀಮಂತ ನಾಯಕ ಮತ್ತು ಆದರ್ಶ ಮೌಲ್ಯಗಳ ಸಾಕಾರಮೂರ್ತಿ ಬಾಬಾ ಸಾಹೇಬರು. ಅವರನ್ನು ಪರಿಚಯಿಸುವ ಗ್ರಂಥಗಳ ಮಹಾಪೂರಕ್ಕೆ ಈಗಾಗಲೇ ಸಾರವತ್ತಾಗಿ ನೆಲ್ಸನ್ ಮಂಡೇಲಾ ಜೀವನ ಚರಿತ್ರೆಯನ್ನು ನೀಡಿರುವ ಡಾ. ಎಂ. ವೆಂಕಟಸ್ವಾಮಿಯವರ ನೂತನ ಮೌಲಿಕ ಕೃತಿಯ ಸೇರ್ಪಡೆಯಾಗುತ್ತಿದೆ. ನಮ್ಮ ಸಾಂಸ್ಕೃತಿಕ - ಆರ್ಥಿಕ - ಸಾಮಾಜಿಕ ಸವಾಲುಗಳನ್ನೆದುರಿಸಲು ಡಾ. ಅಂಬೇಡ್ಕರ್ ಅವರ ಚಿಂತನೆ ಮತ್ತು ಹೋರಾಟಗಳನ್ನು ವಿಹಂಗಮ ಶೈಲಿಯಲ್ಲಿ ಪ್ರಸ್ತುತ ಕೃತಿಯು ಕಟ್ಟಿಕೊಡುತ್ತದೆ. ಬಾಬಾ ಸಾಹೇಬರ ಜೀವನ, ಹೋರಾಟ, ವಿದ್ವತ್ತು, ಕಳಕಳಿ ಮುಂತಾದವು ನಮಗಿಂದು ದಾರಿದೀಪ. ಸನಾತನವೆಂಬ ಹೊರೆಗೆ ಪರ್ಯಾಯಗಳಲ್ಲಿ ಅಂಬೇಡ್ಕರ್ ಅವರ ಚಿಂತನೆ ಮತ್ತು ಹೋರಾಟ ಅನನ್ಯವಾದುವು. ಡಾ. ಜಿ. ರಾಮಕೃಷ್ಣ
ಅಹಿಂಸೆ, ಅಪರಿಗ್ರಹ ಮತ್ತು ಅನೇಕಾಂತವಾದದಂಥ ಅನನ್ಯ ಬೋಧನೆಗಳ ಮೂಲಕ ಇಡೀ ಜಗತ್ತಿಗೆ ಶಾಂತಿಯ ದಾರಿ ತೋರಿಸಿದ ಜೈನ ಧರ್ಮವು ಭಾರತದ ಪುರಾತನ ಧರ್ಮಗಳಲ್ಲಿ ಒಂದು. ಭಾರತದ ಇತರ ಮತ್ತು ಪಾಶ್ಚಾತ್ಯ ಧರ್ಮಗಳ ತುಲನೆಯಲ್ಲಿ ಜೈನ ಧರ್ಮದ ಉನ್ನತ ಸ್ಥಾನಮಾನ ಗುರುತಿಸುವ ಈ ಪುಸ್ತಕ ಕನ್ನಡದ ಓದುಗರಿಗೆ ಒಂದು ಅಪೂರ್ವ ಕೊಡುಗೆ. ಜೈನ ಧರ್ಮದಲ್ಲಿ ೬೩ ಜನ ಶಲಾಕಾ ಪುರುಷರಿದ್ದಾರೆ. ಅದಕ್ಕಾಗಿಯೇ ಈ ಕೃತಿ ೬೩ ಅಧ್ಯಾಯಗಳಲ್ಲಿ ವಿಸ್ತರಿಸಿದೆ. ಜೈನ ಧರ್ಮದಲ್ಲಿ ಮತ್ತು ಧರ್ಮಗಳಲ್ಲಿ ಆಸಕ್ತಿ ಇರುವ ಯಾರೇ ಆದರೂ ಈ ಕೃತಿಯನ್ನು ಓದಬೇಕು. ದೇವದತ್ತ ಪಟ್ಟನಾಯಕರ ಈ ಅದ್ಭುತ ಕೃತಿಯನ್ನು ಪದ್ಮರಾಜ ದಂಡಾವತಿಯವರು ಅಷ್ಟೇ ಅನುಪಮವಾಗಿ ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ
ಸಿ ವಿ ಜಯಣ್ಣ , ವಿ ಸಿ ರುದ್ರಾಣಿ , ಏನ್ ಎಂ ನಾಗರಾಜಯ್ಯ
Showing 1771 to 1800 of 5053 results