ಜ ಕನ್ನಡವೆಂದರೆ ಬರಿ ನುಡಿಯಲ್ಲ. ಕನ್ನಡ ಒಂದು ಸಮೃದ್ಧ ಜನಮಾನಸದ ಜೀವ ಚೈತನ್ಯ. ನವೆಂಬರ್ ಒಂದರಂದು ಭಾವ ಅಲ್ಲ. ಆವಾಹಿಸಿಕೊಳ್ಳುವ ನಿತ್ಯವೂ ನಮ್ಮಲ್ಲಿ ಹರಿಯುತ್ತಿರಬೇಕು. ಪ್ರತಿನಿತ್ಯ ಕನ್ನಡದ ಏನಾದರೂ ಒಂದು ಹೊಸ ಸಂಗತಿ ತಿಳಿದುಕೊಳ್ಳಬೇಕು. ಕನ್ನಡ ಲೋಕದ ಅಗಾಧತೆಯನ್ನು, ವಿಸ್ಮಯಗಳನ್ನೂ ಸರಳವಾಗಿ ತಿಳಿದುಕೊಳ್ಳಬೇಕು. ಪುಟ್ಟ ಪುಟ್ಟ ಹೆಜ್ಜೆ ಇಟ್ಟರೆ, ನಂತರ ಕನ್ನಡ ತಾನೇ ನಮ್ಮನ್ನು ತುಂಬಿಕೊಳ್ಳುತ್ತದೆ. ಹಾಗೆ ಕನ್ನಡವನ್ನೇ ಮನಸಲ್ಲಿ ತುಂಬಿಕೊಂಡಾಗ, ಉಳಿಸುವ, ಬೆಳೆಸುವ. ಹೋರಾಡುವ ಪ್ರಶ್ನೆಯೇ ಬರುವುದಿಲ್ಲ. ಎಲ್ಲೆಲ್ಲೂ ಕನ್ನಡಮ್ಮನೇ ಕಾಣುತ್ತಾಳೆ. ಅವಳೇ ನಮ್ಮನ್ನು ಅಪ್ಪಿಕೊಳ್ಳುತ್ತಾಳೆ. ಹಾಗೆ ದಿನಕ್ಕೆ ಒಂದು ಕನ್ನಡ ಚಿಂತನೆ ಕೊಡುವ, ಕನ್ನಡದ ವಿಸ್ಮಯಗಳನ್ನು ಪರಿಚಯಿಸುವ ನಿತ್ಯ ಕನ್ನಡ ಚಿಂತನೆಯ ಪುಸ್ತಕ ಇದು.