ಬ್ರಿಟಿಷ್ ವಿದ್ವಾಂಸರು ಮತ್ತು ಸ್ವಾತಂತ್ಯೋತ್ತರ ಕಾಲದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರ ಸ್ವಾತಂತ್ರ್ಯ ಹೋರಾಟದ ನೈಜ ಇತಿಹಾಸವನ್ನು ಮರೆಮಾಜಿ, ತಪ್ಪು ಇತಿಹಾಸವನ್ನೇ ಯುವ ಪೀಳಿಗೆಯ ತಲೆಯಲ್ಲಿ ತುಂಬಿತು. ನೈಜ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಪ್ರಾಮಾಣಿಕ ಅನಾವರಣ ಹಾಗೂ ಗಂಭೀರ ಅಧ್ಯಯನ ನಡೆಯಲೇ ಇಲ್ಲ. ತಮಗೆ ಬೇಕಾದಂತೆ ನೈಜ ಇತಿಹಾಸವನ್ನು ತಿರುಚಿ, ಭಾರತದ ಹೋರಾಟದ ಇತಿಹಾಸವನ್ನು ಕಾಂಗ್ರೆಸ್ ಇತಿಹಾಸವಾಗಿ ಶಾಲಾ-ಕಾಲೇಜು-ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ಮಸ್ತಿಷ್ಕದಲ್ಲಿ ತುರುಕಲಾಯಿತು. ಇದೊಂದು ಕಾಂಗ್ರೆಸ್ ಸರಕಾರದ ಅನುಚಿತ, ಅಸಂಬದ್ಧ ಹಾಗೂ ಅಹಂಕಾರದ ಕ್ರಮವೇ ಆಗಿತ್ತು ಏ. ಓ.ಹೂಮ್ ಎಂಬ ವಿದೇಶೀಯನಿಂದ ಸ್ಥಾಪನೆಗೊಂಡು ಇಟಿಷರನ್ನು ಓಲೈಸುವುದಕ್ಕಾಗಿಯೇ ಹುಟ್ಟಿದ ಕಾಂಗ್ರೆಸ್‌ಗೆ ಈಗಲೂ ಭಾರತ ನಿಷ್ಠೆಗಿಂತ ವಿದೇಶಿ ನಿಷ್ಠೆಯೇ ಹೆಚ್ಚು ಎನ್ನುವುದು ಪದೇಪದೇ ಸಾಬೀತಾಗುತ್ತಲೇ ಇದೆ. ಕಾಂಗ್ರೆಸ್ ಕರಾಳ ಇತಿಹಾಸ ಮುಂದುವರೆಯುತ್ತಲೇ ಇದೆ. ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಕಾಂಗ್ರೆಸ್ ನಡೆಸಿದ ಅಪಸವ್ಯಗಳ ಇತಿಹಾಸವನ್ನು ಆಧಾರಸಹಿತ ಈ ಕೃತಿಯಲ್ಲಿ ಆದಷ್ಟೂ ಸರಳವಾಗಿ ವಿಶ್ಲೇಷಿಸಲಾಗಿದೆ.