ಬದುಕಿಗೆ? ಅಂದು ಅವಳ ಕಾರಣದಿಂದಲೇ ಸಮ್ಯಕ್ ನಿಂದ ಸಂಬಂಧ ಕಡಿದುಕೊಂಡೆ. ಇಂದು ಅವಳು ಕರೆದಿದ್ದಕ್ಕೆ ಮತ್ತದೇ ಹಳೆಯ ಜಾಗಕ್ಕೆ ಹೋಗುತ್ತಿದ್ದೇನೆ. ನಾವು ಭೇಟಿಯಾಗೋ ಪ್ರತಿ ವ್ಯಕ್ತಿಯೂ ಯಾವುದೋ ಉದ್ದೇಶಕ್ಕೆ ನಮಗೆ ಸಿಕ್ಕಿರುತ್ತಾರೆ ಅಂತಾರಲ್ಲ? ನಿಜವೇ? ಇರಲಾರದು. ನಮಗಾಗಿ ಯಾರು ಹೀಗೆಲ್ಲಾ ಪ್ಲಾನ್ ಮಾಡುತ್ತಾರೆ! ಎಲ್ಲವೂ ಕೋ-ಇನಸಿಡೆನ್ಸ್ ಅಷ್ಟೇ. ಲೈಫ್ ಇಸ್ ಅ ಕಲೆಕ್ಷನ್ ಆಫ್ ರಾಂಡಮ್ ಇನ್ಸಿಡೆನ್ಸ್ ಹೆಚ್ಚಿನ ಅರ್ಥಗಳನ್ನು ನಾವೇ ಕಂಡುಕೊಂಡು ಅದರೊಳಗೊಂದು ಸಣ್ಣ ಥ್ರಿಲ್ ಅನುಭವಿಸುತ್ತಿರುತ್ತೇವೆ ಮೇ ಬಿ?...