ಇದುವರೆಗೂ ಯಾರೂ ಮುಟ್ಟದ ಕ್ಷೇತ್ರವೊಂದರ ಅನುಭವ ಕಥನ ಓದಲು ಸಿದ್ಧರಾಗಿ! ಆಫ್ಘಾನಿಸ್ತಾನವೆಂಬ ಕೌತುಕ ರಾಷ್ಟ್ರದ, ಹೊರಜಗತ್ತಿಗೆ ನಿಲುಕದ ಅನೂಹ್ಯ ಲೋಕವೊಂದರ ಅನಾವರಣ.
ಪುಸ್ತಕದ ಈ ಹತ್ತೂ ಕಥೆಗಳು ನನ್ನದೇ ಬಾಲ್ಯದಿಂದ ರೂಪು ತಳೆದಂತಹವು. ಒಂದಲ್ಲಾ ಒಂದು ರೀತಿಯಲ್ಲಿ ನನ್ನನ್ನು ತೀವ್ರವಾಗಿ ಕಾಡಿದ ಕಥೆಗಳಿವು. ಬಾಲ್ಯಕಾಲದ ನನ್ನೂರಿನ, ನನ್ನ ಬೀದಿಯ, ಕೇರಿಯ ಆತ್ಮಪ್ರಜ್ಞೆ ಈ ಕಥೆಗಳು, ಇವು ನಿಜಕ್ಕೆ ನಿಜ, ಕಲ್ಪನೆಗೆ ಕಲ್ಪನೆಯಂತಹದ್ದೇ ರೂಪಕಗಳು. ಇವು ಕೇವಲ ನನ್ನ ಬಾಲ್ಯದ ಕಥೆಗಳಾಗಿರದೆ, ಪುಟ್ಟ-ಪಟ್ಟಣಗಳಲ್ಲಿ ಬೆಳೆದ ನನ್ನಂಥ ಅನೇಕರು ತಮ್ಮ ಬಾಲ್ಯವನ್ನು ಸಮೀಕರಿಸಿಕೊಳ್ಳಬಹುದಾದ ಕಥೆಗಳು. ಇವು ಮಕ್ಕಳ ಕಥೆಗಳೂ ಹೌದು, ದೊಡ್ಡವರ ಕಥೆಗಳೂ ಹೌದು! ಎಲ್ಲಾ ವಯಸ್ಸಿನವರಿಗೂ ದಕ್ಕುವ ಹಾಗೆ, ನನಗೆ ಒಲಿದಿರುವ ಸರಳ ಭಾಷೆಯಲ್ಲಿ ಕಥೆಗಳನ್ನು ನಿರೂಪಿಸುವ ಪ್ರಯತ್ನ ಮಾಡಿದ್ದೇನೆ. ಕಥೆಯು, ಸರಳವಾದ ಭಾಷೆ ಮತ್ತು ನಿರೂಪಣೆಯಲ್ಲಿದ್ದರೆ ಮಕ್ಕಳೂ ಕೂಡ ಸಲೀಸಾಗಿ ಓದಬಹುದೆಂಬ ಸಣ್ಣ ಉದ್ದೇಶವೂ ಇದರ ಹಿಂದಿದೆ.