
nil
Category: | ಕನ್ನಡ |
Sub Category: | ಆರೋಗ್ಯ, ವೈದ್ಯಕೀಯ, ಮನೋವೈದ್ಯಕೀಯ |
Author: | Rudresh B T |
Publisher: | |
Language: | |
Number of pages : | |
Publication Year: | |
Weight | |
ISBN | |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
nil
Rudresh B T |
ಕರ್ನಾಟಕ ಹೋಮಿಯೊಪತಿಗೆ ಅನ್ವರ್ಥನಾಮ ನಾಡೋಜ ಡಾ. ಬೆಳವಾಡಿ ತಿಪ್ಪೇಸ್ವಾಮಿ ರುದ್ರೇಶ್, ಇವರೊಬ್ಬ ಅಂತಾರಾಷ್ಟ್ರೀಯ ಖ್ಯಾತಿಯ ಹೋಮಿಯೊಪತಿ ವೈದ್ಯರು. ಆಪ್ತ ಸಮಾಲೋಚಕ, ಅಪ್ಪಟ ಗ್ರಾಮೀಣ ಪ್ರತಿಭೆ, ಇವರ ಜೀವನಗಾಥೆ ಒಂದು ರಸಭರಿತ, ಕಾದಂಬರಿ. ಬಹುಮುಖಿ ವ್ಯಕ್ತಿತ್ವದ ಅವರ ಬದುಕು ಒಬ್ಬ ಯಶಸ್ವಿ ಸಾಧಕನ ಬದುಕು. ದಿವ್ಯನಿರ್ಲಕ್ಯಕ್ಕೆ ಒಳಗಾಗಿದ್ದ. ಹೋಮಿಯೋಪತಿ ವೈದ್ಯಕೀಯ ಪದ್ಧತಿಯನ್ನು ಮನರುಜ್ಜಿವನಗೊಳಿಸಿದ ಸಾಹಸಿ. ಸದಾ ಕ್ರಿಯಾಶೀಲರಾಗಿರುವ ಅವರ ಕಾರ್ಯಕ್ಷಮತೆ ವರ್ತಮಾನದ ಮಾದರಿ. ಎಂ.ಡಿ. ಚಿಕ್ಕಮಗಳೂರು ಜಿಲ್ಲೆ ಬೆಳವಾಡಿ ಗ್ರಾಮದ ದಿ. ತಿಪ್ಪೇಸ್ವಾಮಿ ಮತ್ತು ಶಾಂತಮ್ಮ ದಂಪತಿಗಳ ಹಿರಿಯ ಪುತ್ರರಾದ ರುದ್ರೇಶ್ (ಹೋಮಿಯೊಪತಿ) ಪದವೀಧರರು. ಮುಂಬೈ ಅಲೋಪತಿ ಆಸ್ಪತ್ರೆಯಲ್ಲಿ ಅ.ಎಂ.ಓ ಆಗಿ, ಸರ್ಕಾರಿ ಹೋಮಿಯೋಪತಿ ಕಾಲೇಜಿನಲ್ಲಿ ಉಪನ್ಯಾಸಕರಾಗಿಯೂ ದುಡಿದ ಅಧ್ಯಯನಶೀಲ ಅನುಭವಿ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಸೆನೆಟ್ ಮತ್ತು ಸಿಂಡಿಕೆಟ್ ಗಳ ಸದಸ್ಯರಾಗಿ, ಬೋರ್ಡ್ ಆಫ್ ಸ್ಟಡೀಸ್ ನ ಸದಸ್ಯರಾಗಿ, ವಿವಿಧ ವಿಶ್ವವಿದ್ಯಾನಿಲಯಗಳ ಪರೀಕ್ಷಕರಾಗಿ ಸಲ್ಲಿಸಿರುವ ಸೇವೆ ಅನನ್ಯ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಕಾರ್ಯಾಗಾರಗಳಲ್ಲಿ ನೂರಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಿರುವ ಸಂಶೋಧಕ, ಗ್ರೀಸ್ ದೇಶಕ್ಕೆ ಆಹ್ವಾನಿತರಾಗಿ ಮೂವತ್ತೆರಡು ರಾಷ್ಟ್ರಗಳ ಪ್ರತಿನಿಧಿಗಳಿಗೆ ಉಪನ್ಯಾಸ ನೀಡಿದ ಹಿರಿಮೆ ಇವರದ್ದು. ನೂರೆಂಟು ದೇಶಗಳ ವೈದ್ಯರು ಮತ್ತು ರೋಗಿಗಳೊಂದಿಗೆ ಛಾಟ್ ಮಾಡಿ ಸಂವಹನಿಸುವ ಸಂಪನ್ಮೂಲ ವ್ಯಕ್ತಿ. |
0 average based on 0 reviews.