
Category: | ಕನ್ನಡ |
Sub Category: | ಪುರಾಣ -ಧಾರ್ಮಿಕ - ತತ್ವಶಾಸ್ತ್ರ |
Author: | Anantharamu T R |
Publisher: | ಅಂಕಿತ ಪುಸ್ತಕ | Ankita Pustaka |
Language: | Kannada |
Number of pages : | |
Publication Year: | 2025 |
Weight | 400 |
ISBN | |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ನಾಡು-ನುಡಿಗೆ ಸಂಬಂಧಿಸಿದ ಯಾವುದೇ ವಿಷಯವನ್ನು ಚರ್ಚೆಗೆ ಆಯ್ದು ಕೊಳ್ಳುವುದು ಸವಾಲಿನ ಸಂಗತಿ, ಇದರ ಹಿಂದೆ ಭಾವನಾತ್ಮಕ ಸಂಗತಿಗಳಿರುತ್ತವೆ. ಈ ಕುರಿತ ಯಾವುದೇ ಚರ್ಚೆಯೂ ಈ ಕಾರಣದಿಂದಲೇ ತೊಡಕಿಗೆ ಸಿಲುಕುತ್ತದೆ. ಕನ್ನಡಿಗರ ನಾಡದೇವತೆ ಎಂದು ಪರಿಗಣಿತಳಾಗಿರುವ ಭುವನೇಶ್ವರಿಯ ಕುರಿತ ಟಿ.ಆರ್.ಅನಂತರಾಮು ಅವರ ಈ ಕೃತಿ ತನ್ನ ಸ್ವರೂಪದಲ್ಲಿಯೇ ಈ ಸವಾಲನ್ನು ಮೀರಿದೆ ಎನ್ನುವುದು ನನಗೆ ಬಹಳ ಮಹತ್ವದ ಸಂಗತಿ ಎನ್ನಿಸುತ್ತದೆ. ಇದು ಚಾರಿತ್ರಿಕ ಕೃತಿ, ಆದರೆ ಸಾಂಸ್ಕೃತಿಕ ಒಳನೋಟಗಳನ್ನು ಇಟ್ಟುಕೊಂಡೇ ವಿವರಗಳನ್ನು ದಾಖಲಿಸುತ್ತದೆ. ದಾಖಲಿಸುವಾಗಲೂ ಭಾವಾವೇಶವಿಲ್ಲದೆ ಸತ್ಯ ನಿಷ್ಠವಾಗಿ ದಾಖಲಿಸುವುದರ ಜೊತೆಗೆ ಎಲ್ಲಿಯೂ ಇದೇ ಸರಿ ಎಂಬ ತರ್ಕಕ್ಕೆ ಜಾಗ ನೀಡದೆ ಮುಕ್ತ ಚರ್ಚೆಗೆ ಅವಕಾಶವನ್ನಿಟ್ಟುಕೊಂಡೇ ಮುಂದೆ ಸಾಗಿದೆ. ಹೀಗಾಗಿ ವಿವರಗಳು ಎಲ್ಲಿಯೂ ಚದುರದೆ ಕೃತಿಯ ಕೇಂದ್ರಪ್ರಜ್ಞೆ ನಿಖರವಾಗಿ ಸಾಧಿತವಾಗಿದೆ. ಈ ಕೃತಿಯಲ್ಲಿ ನನಗೆ ಬಹಳ ಮುಖ್ಯವೆನ್ನಿಸುವುದು ಔಚಿತ್ಯ ಪ್ರಜ್ಞೆ ಯಾವ ವಿಷಯ, ಎಷ್ಟು ಬರಬೇಕು ಎನ್ನುವ ಖಚಿತ ಗ್ರಹಿಕೆ ಲೇಖಕರಿಗಿದೆ. ಹೀಗಾಗಿ ಇಡೀ ಕೃತಿ ತನ್ನ ಸುಸಂಬದ್ಧತೆಯನ್ನು ಕಾಪಾಡಿಕೊಂಡಿದೆ. ಉದಾಹರಣೆಗೆ ಭುವನೇಶ್ವರಿಯನ್ನು ತಾಂತ್ರಿಕ ದೇವತೆ ಎಂದು ಪರಿಗಣಿಸಿರುವ ವಿವರಗಳನ್ನು ಮಾಖಲಿಸುವಾಗ, ಈ ಕೃತಿಗೆ ಅನಗತ್ಯ ಎನಿಸುವ ಹಿನ್ನೆಲೆಯಲ್ಲಿ ವಿಶ್ಲೇಷಣೆಗೆ ವಿಜಯನಗರ ಅರಸರು, ಮೈಸೂರು ಒಡೆಯರು ಭುವನೇಶ್ವರಿಯನ್ನು ಗ್ರಹಿಸಿಕೊಂಡ ಕ್ರಮಗಳ ವಿಶ್ಲೇಷಣೆ ಇಂತಹ ಚೌಕಟ್ಟಿನಲ್ಲಿಯೇ ಇದೆ, ಕಾರಣಾಂತರಗಳಿಂದ ಸಾಂಸ್ಕೃತಿಕ ಅವಸ್ಥೆಗೆ ಗುರಿಯಾದ ಸಕ್ಕರೆ ಬಾಳಾಚಾರ್ಯರು, ಅಂದಾನಪ್ಪ ದೊಡ್ಡಮೇಟಿಯಂತಹ ಕಾರಣಪುರುಷರು ಭುವನೇಶ್ವರಿಯ ಹಿನ್ನೆಲೆಯಲ್ಲಿ ಯಲ್ಲಿ ನೀಡಿರುವ ನೀಡಿರುವ ಕೊಡುಗೆ ವಿವರಗಳೊಂದಿಗೆ ಸಮಂಜಸವಾಗಿ ಇಲ್ಲಿ ದಾಖಲಾಗಿರುವುದು ಒಂದು ರೀತಿಯಲ್ಲಿ ಪೊಯಟಿಕ್ ಜಸ್ಟೀಸ್ ಎನ್ನಬಹುದು. ಇತಿಹಾಸದ ಕೃತಿಯೊಂದು ಸಾಂಸ್ಕೃತಿಕ ಮಹತ್ವವನ್ನೂ ಪಡೆಯುವುದು ಬಹಳ ಸವಾಲಿನ ಕೆಲಸ. ಸೂಕ್ಷ್ಮವಾಗಿ ಯೋಚಿಸಿದರೆ ಎರಡೂ ವಿಭಿನ್ನ ಪರಿಕಲ್ಪನೆಗಳು, ಟಿ.ಆರ್.ಅನಂತರಾಮು ಅವರು ಎರಡನ್ನೂ ಒಟ್ಟಿಗೆ ತಂದಿರುವುದು ಮಾತ್ರವಲ್ಲ ಎರಡೂ ಕ್ಷೇತ್ರಕ್ಕೂ ನ್ಯಾಯವನ್ನು ಸಲ್ಲಿಸಿದ್ದಾರೆ. ಸಮಕಾಲೀನ ಸಂದರ್ಭದಲ್ಲಿ ಇದು ಬಹಳ ಮುಖ್ಯವಾದ ಸಂಗತಿಯಾಗಿ ಕಾಣುತ್ತದೆ. ಈ ಕಾರಣದಿಂದಲೇ ಇದು ಕನ್ನಡಿಗರೆಲ್ಲರೆ ಮನೆಯಲ್ಲಿ ಇರಲೇ ಬೇಕಾದ ಕೃತಿ ಎಂದು ಯಾವ ಸಂಕೋಚವೂ ಇಲ್ಲದೆ ಹೇಳಬಹುದಾಗಿದೆ. ಎನ್.ಎಸ್. ಶ್ರೀಧರ ಮೂರ್ತಿ
Anantharamu T R |
0 average based on 0 reviews.