| Category: | ಕನ್ನಡ |
| Sub Category: | ಅಂಕಣ ಬರಹಗಳು |
| Author: | ಮೌನೇಶ್ ಜಟ್ಟೆಪ್ಪ ಕಂಬಾರ ಕರಕಿಹಳ್ಳಿ | Mounesha Jatteppa Kambara Karakihalli |
| Publisher: | ನಂದಿತ ಪ್ರಕಾಶನ ಮೈಸೂರು | Nandita Prakashana Mysuru |
| Language: | Kannada |
| Number of pages : | |
| Publication Year: | 2025 |
| Weight | |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಸಾಹಿತ್ಯವೆಂದರೆ ತಾಯಿ, ತಾಯಿ ಗುಣ ಎಂತಹುದೆಂದರೆ ತನ್ನ ಐದೂ ಮಕ್ಕಳನ್ನು ಸಮನಾಗಿ ಪ್ರೀತಿಸಿದರೂ ಒಂದು ಮಗುವಿನ ಮೇಲೆ ಒಂದು ಗುಲಗಂಜಿ ಗಾತ್ರದಷ್ಟಾದರೂ ಹೆಚ್ಚು ಕಾಳಜಿ ತೋರುತ್ತಾಳೆ. ಕಾರಣ ಆ ಮಗು ಎಲ್ಲರಂತೆ ಸಮಬಲವಾಗಿರುವುದಿಲ್ಲ, ಹಾಗಾಗಿ ಅದೇ ತಾಯಿ ಗುಣ. ಅಂಥ ಗುಣ ಸಾಹಿತ್ಯದ್ದು. ಯಾರು ಸಮಾಜದಲ್ಲಿ ಅಂಚಿಗೆ ಸರಿಸಲ್ಪಟ್ಟಿದ್ದಾರೋ ಅವರ ಕುರಿತು ಹೆಚ್ಚು ಚಿಂತಿಸುತ್ತದೆ. ಹಾಗೆ 'ಕಣ್ಣೀರು ಕರಗುವ ಮುನ್ನ' ನವವಸಾಹತ್ತರದ ಈ ಹೊತ್ತಿನಲ್ಲೂ ಹೆಣ್ಣು ಇನ್ನೂ ವಿವಾಹ ಕುಟುಂಬ ಸಮಾಜವೆಂಬ ಸಂಸ್ಥೆಗಳೊಳಗೆ ಪಂಜರದ ಸರಳುಗಳನ್ನು ಒಳಗಿನಿಂದಲೇ ಹೇಗೆ ಸರಿಸುತ್ತಾ ಸಲಸುತ್ತಾ ತಾನು ಆಕಾಶದೆತ್ತರಕ್ಕೆ ಹಾರಬಲ್ಲೆ ಎಂಬುದನ್ನು ತೋರಿಸಬಹುದು ಎಂಬ ಆಶಾವಾದವನ್ನು ಉದ್ದೀಪಿಸುವ ಕಥನ 'ಕಣ್ಣೀರು ಕರಗುವ ಮುನ್ನ'.
ಮೌನೇಶ್ ಇದನ್ನು ತುಂಬಾ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ. ವಿಭಾಗದಲ್ಲೂ ಸುಮ್ಮನೆ ಕುಳಿತುಕೊಳ್ಳವ ಮನು ಒಳಗೆ ಇಂತಹ ಅನೇಕ ಕಥೆಗಳೇ ಸುಳಿದಾಡುತ್ತಿರುತ್ತವೇನೋ!
ಇಷ್ಟು ಚಿಕ್ಕ ವಯಸ್ಸಿಗೆ ಸಮಾಜವನ್ನು ಸಮಾಜವನ್ನು ಹೀಗೆ ಗ್ರಹಿಸಬಹುದು ಎಂದಾದರೆ ಮೌನೇಶ್ ನಾಳೆ ಈ ಸಮಾಜಕ್ಕೆ ಶ್ರೇಷ್ಠ ವ್ಯಕ್ತಿಯಾಗುತ್ತಾನೆ. ಈ ಶಿಕ್ಷಣ, ಓದುವಿನ ಆಶಯ ಅದೇ ತಾನೆ. ಅಂತಹ ವಿದ್ಯಾರ್ಥಿಗೆ ಪಾಠ ಹೇಳಿಕೊಟ್ಟ ಹೆಮ್ಮೆಯೆನಗೆ. ಶಿಷ್ಯನನ್ನು ಪ್ರೀತಿಯಿಂದ, ಅಭಿಯಾನದಿಂದ ಶುಭ ಹಾರೈಸುತ್ತೇನೆ, ಇನ್ನಷ್ಟು ಕೃತಿಗಳ ನಿರೀಕ್ಷೆಯಲ್ಲಿ.
ಕ್ರಾಂತಿ ಸಿಂಹ ಖ್ಯಾತ ಸಾಹಿತಿಗಳು ಮಂಡ್ಯ
ಮೌನೇಶ್ ಜಟ್ಟೆಪ್ಪ ಕಂಬಾರ ಕರಕಿಹಳ್ಳಿ | Mounesha Jatteppa Kambara Karakihalli |
0 average based on 0 reviews.