
Category: | ಕನ್ನಡ |
Sub Category: | ಲೇಖನಗಳು, ಪ್ರಬಂಧಗಳು |
Author: | ಸಂದೇಶ್ ಎಚ್ ನಾಯ್ | Sandesh H Nayaka |
Publisher: | pustaka mane |
Language: | Kannada |
Number of pages : | |
Publication Year: | 2025 |
Weight | 400 |
ISBN | 1970-01-906606-9-5 |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಸಂದೇಶ್ ಎಚ್ ನಾಯ್
'ಲಘುವಾಗೆಲೆ ಮನ...' ಎಂದರು ಪು.ತಿ.ನ. ಸಂದೇಶ್ ಎಚ್ ನಾಯ್ ಅವರ ಈ ಚೊಚ್ಚಲ ಕೃತಿಯ ಪ್ರತಿಯೊಂದು ಪು.ತಿ.ನೋ-ಅರ್ಥಾತ್ ಪುಟ ತಿರುಗಿಸಿ ನೋಡಿದರೆ, ಮನಸ್ಸನ್ನು ಲಘುವಾಗಿಸಬಲ್ಲ, ಮುಖದಲ್ಲಿ ನಗು ಮೂಡಿಸಬಲ್ಲ ಬರಹಗಳೇ ನಿಮಗೆ ಸಿಗುತ್ತವೆ. ಮನಸ್ಸು ದೇಹಗಳೆರಡನ್ನೂ ಹಗುರವಾಗಿಟ್ಟುಕೊಳ್ಳುವುದು ಇಂದಿನ ಅಗತ್ಯವೂ ಹೌದೆನ್ನಿ
ಕನ್ನಡದ ಪ್ರಮುಖ ದಿನಪತ್ರಿಕೆಯೊಂದರಲ್ಲಿ ಸಾಪ್ತಾಹಿಕ ಅಂಕಣವಾಗಿ ಮೂಡಿಬಂದ ಅಕ್ಷರಪುಷ್ಪಗಳಲ್ಲಿ ಆಯ್ದ ಮೂವತ್ತರ ಗುಚ್ಚವಿದು. ಕಳೆದ ಆರೇಳು ವರ್ಷಗಳಿಂದ, ಅಂದರೆ 300ಕ್ಕೂ ಹೆಚ್ಚು ಅಂಕಣಬರಹಗಳನ್ನು ಇದೇ 'ಲಘು' ರೀತಿಯಲ್ಲಿ ಹೊಸೆದಿದ್ದಾರೆ. ಈಗಲೂ ಹೊಸೆಯುತ್ತಿದ್ದಾರೆ ಸಂದೇಶ್ ಎಚ್ ನಾಯ್ ಅದೇ ಒಂದು ಪುರಾವೆ, ಅವರ ಬರಹಗಳು ಪತ್ರಿಕೆಯ ಸಂಪಾದಕರಿಗೂ ಓದುಗರಿಗೂ ಬಹಳವೇ ರುಚಿಕರವೆನಿಸಿವೆ, ಹಿಡಿಸಿವೆ ಎಂಬುದಕ್ಕೆ
ಒಂದು ರೀತಿಯಲ್ಲಿ ಡುಂಡಿರಾಜರ ಮಾತು-ಕ(ವಿ)ತೆ ಅಂಕಣವನ್ನು ಹೋಲುವ, ಅದೇ ರೀತಿ ಸರಳ ನಿರೂಪಣೆಯ ನಡುವೆ ಅಲ್ಲಲ್ಲಿ ಚಿಕ್ಕ ಚುಟುಕಗಳು ಕಾಣಿಸಿಕೊಳ್ಳುವ, ಧುತ್ತೆಂದು ಪದವಿನೋದಗಳು ಮತ್ತು ವಕ್ರೋಕ್ತಿಗಳು ಕಚಗುಳಿಯಿಡುವ ಈ ಬರಹಗಳು ಮನಸ್ಸನ್ನು ಹಗುರಾಗಿಸುವ ಒಳ್ಳೆಯ ಮದ್ದು. ಇವು ಚಿಂತೆ ಹುಟ್ಟಿಸುವುದಿಲ್ಲ.ಚಿಂತನಕ್ಕೆ ಪ್ರೇರಣೆ ನೀಡುತ್ತವೆ. ಬೋರ್ ಹೊಡೆಸುವುದಿಲ್ಲ. ಹೊಡೆಸಬಹುದೇನೋ ಅಂದುಕೊಳ್ಳುವುದರೊಳಗೆ ಮುಗಿದುಹೋಗುತ್ತವೆ. ಬೇಗಬೇಗ ಓದಿ ಮುಗಿಸಬಹುದು ಎಂಬರ್ಥದಲ್ಲೂ ಇವು 'ಲಘು'ವೇ. ಇಲ್ಲಿ ನಿಮಗೆ ಬೆನಕ-ಮೂಷಿಕರ ಉಭಯಕುಶಲೋಪರಿ ಸಿಗುತ್ತದೆ; ಸೊಳ್ಳೆಯೊಂದಿಗೆ ಸಂದರ್ಶನ ಸಿಗುತ್ತದೆ; ಥರಾವರಿ ಪಟಾಕಿಗಳು ಸಿಗುತ್ತವೆ; ಚಳಿ-ಮಳೆ- ಬಿಸಿಲುಗಳ ಉಪದ್ಯಾಪಗಳೂ ಅನುಭವಕ್ಕೆ ಬರುತ್ತವೆ. ಡೋಸೇಜ್ ಸಾಕೆನಿಸದಿದ್ದರೆ ಪ್ರತಿಯೊಂದು ಬರಹದ ಕೊನೆಗೆ ಓವರ್ಡೋಸ್ ಸಹ ಸಿಗುತ್ತದೆ! ಪ್ರಚಲಿತ ವಿಚಾರಗಳು, ದೈನಂದಿನ ಜೀವನದಲ್ಲಿ ನಮ್ಮ ಗಮನದ ರೇಡಾರ್ನಿಂದ ತಪ್ಪಿಸಿಕೊಳ್ಳುವ ಸ್ವಾರಸ್ಯಗಳು, ಹಬ್ಬ-ಹರಿದಿನಗಳ ಆಸುಪಾಸಿನ ಸಾಂದರ್ಭಿಕ ಪ್ರಸ್ತುತಿಗಳು ಎಲ್ಲ ಸೇರಿ ಈ ಸಂಕಲನಕ್ಕೊಂದು ರಸಮಯ ವೈವಿಧ್ಯವನ್ನು ತಂದುಕೊಟ್ಟಿವೆ.
ಬಾಯಾಡಿಸಲಿಕ್ಕೆ ಹುರಿಗಾಳಿನ ಥರ, ಚಹಾದ ಜೋಡಿ ಚೂಡಾ ಥರ, ಸಿನೆಮಾ ನೋಡುವಾಗಿನ ಪಾಪ್ಕಾರ್ನ್ ಥರ, ಅಥವಾ ಬೇಕಿದ್ದರೆ ಟೈಮ್ ಪಾಸ್ ಕಡ್ಲೆ ಥರವೇ ಅಂದೊಳ್ಳಿ, ಆದರೆ ಇದು ಕಬ್ಬಿಣದ ಕಡಲೆಯಲ್ಲ ಏಕೆಂದರೆ ಇಲ್ಲಿ ಅಂಕಣಕಾರನ ಪಾಂಡಿತ್ಯ ಪ್ರದರ್ಶನ ಇಲ್ಲ. ದಂತಗೋಪುರದಲ್ಲಿ ಕುಳಿತು ಉಪದೇಶದ ರೀತಿಯ ಬೋಧನೆಯೂ ಇಲ್ಲ. ಇರುವುದೇನಿದ್ದರೂ ಎಲ್ಲವಯಸ್ಸಿನ ಓದುಗರಿಗೂ ಇಷ್ಟವಾಗುವಂತೆ, ಓದಿದ್ದರಲ್ಲೊಂದಿಷ್ಟು ಸತ್ತವನ್ನು ಹೀರಿ ಉಪಯುಕ್ತ ಎನಿಸುವಂತೆ ಇರುವ ಅಕ್ಷರವರಸೆ. ಹೌದು, ಇದೊಳ್ಳೆವರಸೆ!
ಶ್ರೀವತ್ಸ ಜೋಶಿ
ಸಂದೇಶ್ ಎಚ್ ನಾಯ್ | Sandesh H Nayaka |
0 average based on 0 reviews.