Delivery between 2-8 Days
No returns accepted. Please refer our full policy
Your payments are 100% secure
ಶಿಕ್ಷಣದ ರಥವು ನೀತಿ ಪಥದ ಮೇಲೆ ಚಲಿಸಬೇಕು ಹಾಗೂ ಪಾಲಕರೆ ಮಕ್ಕಳಿಗೆ ದಾರಿದೀಪವಾಗಬೇಕು. ಮಕ್ಕಳು ಕೇವಲ ಶಿಕ್ಷಿತರಾದರೆ ಸಾಲದು, ಸುಶಿಕ್ಷಿತರಾಗಬೇಕು. ಸಭ್ಯ ಸಂಸ್ಕೃತಿಯ ನೀತಿ ಶಿಕ್ಷಣ ಅವರಿಗೆ ಸಿಗಬೇಕು. ಮಕ್ಕಳನ್ನು ಶಾಲೆಗೆ ಕಳುಹಿಸಿದರಾಯಿತು, ಅಲ್ಲಿ ಅವರು ಎಲ್ಲವನ್ನೂ ಕಲಿತುಕೊಂಡು ಬರುತ್ತಾರೆ ಎಂಬ ಭ್ರಮಾ ಲೋಕದಿಂದ ಪಾಲಕರು ಹೊರಗೆ ಬರಬೇಕು. ಮಕ್ಕಳ ಶಾರೀರಿಕ, ಮಾನಸಿಕ, ಬೌದ್ಧಿಕ, ಭಾವನಾತ್ಮಕ, ನೈತಿಕ, ಸಾಮಾಜಿಕ ಹಾಗೂ ಸೌಂದರ್ಯಾತ್ಮಕ, ಒಟ್ಟಾರೆ ಸರ್ವಾಂಗೀಣ ಮೌಲಿಕ ಶಿಕ್ಷಣವನ್ನು ಮಗುವು ಪಡೆದುಕೊಳ್ಳಬೇಕು. ಸಮಾಜದ ಮೂಲ ಘಟಕ ಹಾಗೂ ಮಗುವಿನ ಮೊದಲ ಪಾಠ ಶಾಲೆಯಾದ ಕುಟುಂಬದಿಂದಲೆ ಮಗುವು ಪ್ರೀತಿ, ಪ್ರೇಮ, ಸ್ನೇಹ, ಮಮತೆ, ಮಮಕಾರ ಹಾಗೂ ವಾತ್ಸಲ್ಯಗಳನ್ನು ಪಡೆದುಕೊಳ್ಳುತ್ತ ಬೆಳೆಯುತ್ತದೆ. ಶಿಸ್ತು, ಸಂಯಮ, ಶಾಂತಚಿತ್ತತೆ, ಸಹ ಜೀವನ ಹಾಗೂ ಸಹಕಾರದಂತಹ ಸದ್ಗುಣ ಸಂಪನ್ನತೆಗಳು ಮಕ್ಕಳಲ್ಲಿ ಜಾಗೃತಗೊಳ್ಳಲು ಪೂರಕವಾದ ವಾತಾವರಣ ಮನೆಯಲ್ಲಿರಬೇಕು. ಕುಟುಂಬದಲ್ಲಿ ಕಲಿತ ಮೌಲ್ಯಗಳೇ ಮುಂದೆ ವಿದ್ಯಾಧ್ಯಯನ ಮಾಡುವ ಶಿಕ್ಷಣ ಸಂಸ್ಥೆಗಳಲ್ಲಿ ಇನ್ನಷ್ಟು ದೃಢವಾಗುತ್ತವೆ. ಮೌಲ್ಯಾಧಾರಿತ ಶಿಕ್ಷಣ ಪಡೆದುಕೊಳ್ಳಲು ಪಾಲಕರು ಮಕ್ಕಳನ್ನು ಪ್ರೋತ್ಸಾಹಿಸಬೇಕು. ಅದರಿಂದ ಸುಂದರ ಸಮಾಜ ನಿರ್ಮಾಣವಾಗಲು ವೇದಿಕೆ ಸಿದ್ಧವಾಗುವುದು.
H N Yadavada |
0 average based on 0 reviews.