| Category: | ಕನ್ನಡ |
| Sub Category: | ಕಥಾ ಸಂಕಲನ |
| Author: | |
| Publisher: | ಅವ್ವ ಪುಸ್ತಕಾಲಯ | Avva Pustakalaya |
| Language: | Kannada |
| Number of pages : | |
| Publication Year: | 2026 |
| Weight | 150 |
| ISBN | 9789359671536 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
'ಅವ್ವ ಪುಸ್ತಕಾಲಯ' ಮತ್ತು 'ಅಪರಿಚಿತ ಓದುಗರು' ತಂಡಗಳ ಜಂಟಿ ಆಯೋಜನೆಯಲ್ಲಿ ಮೂಡಿಬಂದ "ಪುಸ್ತಕ=ಮಸ್ತಕ" ದಿನಗಳ ಆನ್ಲೈನ್ ಸಾಹಿತ್ಯಕ ಕಾರ್ಯಾಗಾರವು ಕೇವಲ ಒಂದು ಚಟುವಟಿಕೆಯಾಗಿರಲಿಲ್ಲ; ಅದೊಂದು ಕಲಿಕೆಯ ವೇದಿಕೆಯಾಗಿತ್ತು. ಸಾಹಿತ್ಯಾಸಕ್ತ ಸ್ಪರ್ಧಿಗಳಿಗೆ ಪ್ರತಿದಿನವೂ ಹೊಸ ಸವಾಲುಗಳನ್ನು ನೀಡುತ್ತಾ, ಅವರ ಬರವಣಿಗೆಯ ಹಸಿವನ್ನು ಜಾಗೃತಗೊಳಿಸಿದ ಅಪೂರ್ವ ಪ್ರಯತ್ನವಿದು. ಆ ಸೃಜನಶೀಲ ಗರಡಿಯಲ್ಲಿ ಪಳಗಿದ, ಕಥಾ ಜಗತ್ತಿನೆಡೆಗೆ ತೀವ್ರ ಆಸಕ್ತಿ ಹೊಂದಿದ ಯುವ ಬರಹಗಾರರನ್ನು ಗುರುತಿಸಿ, ಅವರಿಗಾಗಿ ನಡೆಸಲಾದ ವಿಶೇಷ 'ಕಥಾ ಕಾರ್ಯಾಗಾರ'ದ ಹೆಮ್ಮೆಯ ಫಲವೇ ಈ ಕೃತಿ.
ಇಂದಿನ ಪೀಳಿಗೆಯ ಆಸಕ್ತ ಕತೆಗಾರರಿಂದ ಕಥೆಗಳನ್ನು ಬರೆಸಿ, ತಿದ್ದಿಸಿ, ವಿಸ್ತರಿಸಿ, ಅತ್ಯಂತ ಆಪ್ತವಾಗಿ ಹೆಣೆಯಲಾದ 50 ವಿಶಿಷ್ಟ ಕಥೆಗಳ ಸಂಕಲನವಿದು. ಇಲ್ಲಿನ ಕಥೆಗಳಲ್ಲಿ ವಸ್ತು ವೈವಿಧ್ಯತೆಯಿದೆ, ಪಾತ್ರಗಳ ತೀವ್ರತೆಯಿದೆ, ವೈವಿಧ್ಯಮಯ ವಿಷಯಗಳ ಸಾರವಿದೆ ಹಾಗೂ ನವೀನ ಕಥನ ತಂತ್ರಗಾರಿಕೆಯಿದೆ. ಹಸಿಯಾದ, ಬಿಸಿಯಾದ ಮತ್ತು ಹಗುರ ಬಿಸಿಯಾದ ಹತ್ತಾರು ಭಾವನೆಗಳನ್ನು ಹೊತ್ತ ಈ ಕಥೆಗಳು ಕಥಾ ಲೋಕಕ್ಕೆ ಹೊಸದೊಂದು ಬೆಳಕು ಚೆಲ್ಲುತ್ತವೆ.
ಮೂರು ಜನ ಸಂಪಾದಕರೂ ಕೂಡ ಸ್ವತಃ ಬರಹಗಾರರಾದ್ದರಿಂದ, ಅವರ ಸಾರಥ್ಯದಲ್ಲಿ ಮೂಡಿಬಂದ ಈ ವಿನೂತನ ಪ್ರಯತ್ನ ಶ್ಲಾಘನೀಯ ಮತ್ತು ಸ್ವಾಗತಾರ್ಹ. ಈ ಕೃತಿಗೆ ಕಥೆಗಳನ್ನು ಒದಗಿಸಿದ ಬರಹಗಾರರಿಗೆ ಇದು ವಿಶಾಲ ಸಾಹಿತ್ಯ ಲೋಕವನ್ನು ಕಾಣುವ ಕಥನ ಪ್ರಕ್ರಿಯೆಯಲ್ಲಿ, ಓದುವಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರಿಗೆ ಹೊಸ ಸಾಧ್ಯತೆಗಳ 'ಬಾಗಿಲು' ಆಗಿಯೂ ಪರಿಣಮಿಸಲಿ. ಹೊಸ ಅಲೆಯ ಕಥೆಗಳನ್ನು ಓದಬಯಸುವ ಪ್ರತಿಯೊಬ್ಬ ಓದುಗನ ಕೈಲಿರಬೇಕಾದ ಪ್ರಾತಿನಿಧಿಕ ಸಂಕಲನವಿದು. 'ಕಿಟಕಿ'ಯಾಗಿಯೂ,
- ಅನಂತ ಕುಣಿಗಲ್
0 average based on 0 reviews.