
Category: | ಕನ್ನಡ |
Sub Category: | ಕಾದಂಬರಿ |
Author: | ಉಷಾರವಿ | Usharavi |
Publisher: | |
Language: | Kannada |
Number of pages : | 236 |
Publication Year: | 2025 |
Weight | 400 |
ISBN | 9789368502111 |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಕಾಲ್ಪನಿಕ ಕಥೆಯನನಿಟ್ಟುಕೊಂಡು ಕಾದಂಬರಿ ಕಟ್ಟುವಾಗಲೇ ಅನೇಕ ಆದರ್ಶ ಗುಣಗಳನ್ನು ಸೂಚ್ಯವಾಗಿ ಕಾದಂಬರಿಗೆ ಪೂರಕವಾಗಿ ಬಳಸಿ ಓದುಗನ ಮನ ಬದಲಿಸುವ ಚಾಕಚಕ್ಯತೆ ಜ್ಞಾನಧಾರೆ ಶ್ರೀಮತಿ ಉಷಾರವಿ ಅವರದು. ಇನ್ನು ನೈಜ ಘಟನೆಯನ್ನು ಕಥಾವಸ್ತುವಾಗಿಸಿಕೊಂಡು ಕಾದಂಬರಿ ರಚನೆಗೆ ಇವರು ಕುಳಿತರೆ ಅವರಲ್ಲಿ ಆದರ್ಶಗಳ ಸಾಕಾರ ಮೂರ್ತಿಯ ಸಾನಿಧ್ಯ ಉದ್ಭವಿಸಿಬಿಡುತ್ತದೆ.
ಇಂತಹ ನೈಜ ಘಟನೆ ಆಧಾರಿತ ಆತ್ಮಾನುಸಂಧಾನ ಉಷಾರವಿ ಅವರ ಪರಿಪೂರ್ಣ ಪಕ್ವಯುತವಾದ ಕೃತಿ. ಅಂತರಪಟದ ಮೂಲಕ ಭಾವ ವೈಕಲ್ಯಗಳನ್ನು ಸರಿಪಡಿಸಿ ಬದುಕಿನ ಬಾಂಧವ್ಯದ ಮಹತ್ವ ಸಾರಿದ ಲೇಖಕಿ ಈಗ ಆತ್ಮಾನುಸಂಧಾನದ ಮೂಲಕ ಓದುಗನ ಆತ್ಮವನ್ನು ಧನಾತ್ಮಕವಾಗಿ ಸಂಧಿಸಿದ್ದಾರೆ.
ಬದುಕಲ್ಲಿ ಪ್ರೇಮ ಅಮೂಲ್ಯವಾದುದು. ಪ್ರೇಮದ ಹೊರತಾಗಿ ಮಿಕ್ಕೆಲ್ಲವೂ ನಶ್ಚರ ಎಂಬುದನ್ನು ನಂಬಿ ಕುಟುಂಬ ತೊರೆದು. ನಂಬಿದ ಪ್ರೇಮಿಯ ಕೈ ಹಿಡಿದು ಸಾಗಿದ ಹುಡುಗಿಯ ಅನುಭವ, ಅನುಭಾವದ ಪ್ರತಿಬಿಂಬ ಮತ್ತು ಮನಸುಗಳು ಬೆರೆಯಲು ಮದುವೆಯ ಪಾತ್ರ ಏನು? ಎಂಬುದರ ಸುತ್ತ ಹೆಣೆದ ಸನ್ನಿವೇಶಗಳ ಗುಡ್ಡವಾದ ಆತ್ಮಾನುಸಂಧಾನ ಯುವಜನತೆಯ ಯೋಚನಾ ಲಹರಿಯನ್ನು ಸಂಧಿಸಿ ಬದುಕಿನ ಬದಲಾವಣೆಗೆ ಸಹಕಾರಿಯಾಗುತ್ತದೆ.
ಅತ್ಯಗಳ ಬಂಧನ ಹೀಗೂ ಸಂಧಾನಕ್ಕೆ ಒಳಪಡುತ್ತವೆ ಎಂಬುದನ್ನು ಓದುಗನಿಗೆ ತಿಳಿಸುವ ಆತ್ಮಾನುಸಂಧಾನ ಕಾದಂಬರಿಗೆ ವಿಶೇಷ ಮನ್ನಣೆ ಸಿಕ್ಕು ಲೋಕಾದ್ಯಂತ ಪಸರಿಸಿ ಹೆಸರುವಾಸಿಯಾಗಲಿ. ಮುಂದೆ ಇಂತಹ ಅನೇಕಾನೇಕ ಮೌಲ್ಯಯುತ. ಮಾದರಿಯುತ ಕಾದಂಬರಿಗಳು ಸಹೋದರಿ ಶ್ರೀಮತಿ ಉಷಾರವಿ ಅವರಿಂದ ಲೋಕಾರ್ಪಣೆಗೊಳ್ಳಲಿ ಎಂದು ಬೆಂಬಲ ನುಡಿಯ ಮೂಲಕ ಆಶಿಸುತ್ತೇನೆ.
-ವರದೇಂದ್ರ ಕೆ ಮಸ್ಕಿ
ಉಷಾರವಿ | Usharavi |
0 average based on 0 reviews.