| Category: | ಕನ್ನಡ |
| Sub Category: | ಅಂಕಣ ಬರಹಗಳು |
| Author: | ಮೌನೇಶ್ ಜಟ್ಟೆಪ್ಪ ಕಂಬಾರ ಕರಕಿಹಳ್ಳಿ | Mounesha Jatteppa Kambara Karakihalli |
| Publisher: | ಈಶ್ವರಿ ಪ್ರಕಾಶನ ಮೈಸೂರು | Eshwari Prakashana Mysuru |
| Language: | Kannada |
| Number of pages : | |
| Publication Year: | 2025 |
| Weight | |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಭಾರತೀಯ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಭಾರತೀಯ ಸಾಹಿತಿಗಳ ಚಿಂತನೆ, ದರ್ಶನ ಮತ್ತು ತಿಳುವಳಿಕೆಗಳು ಅಪಾರ. ಅದರಲ್ಲಿಯೂ ಕನ್ನಡ ಸಾಹಿತ್ಯ ಹುಲುಸಾಗಿ ಬೆಳೆದು ಭಾರತೀಯ ಸಾಹಿತ್ಯಕ್ಕೆ ಸವಾಲೊಡ್ಡುವ ರೀತಿಯಲ್ಲಿ ವಿಜೃಂಭಿಸುತ್ತಿದೆ. ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಹಲವಾರು ಪ್ರತಿಭೆಗಳು ಸೇರ್ಪಡೆಯಾಗುತ್ತಲೆ ಇವೆ. ಇಂತಹ ಸಾಲಿಗೆ ನಮ್ಮ ಯುವಸಾಹಿತಿ ಮೌನೇಶ್ ಸೇರುತ್ತಾರೆ. ವಯಸ್ಸು ಅತ್ಯಂತ ಚಿಕ್ಕದು. ಶಾಲಾ ಹಂತದಲ್ಲಿಯೆ ಸಾಹಿತ್ಯದ ಗೀಳು ಹತ್ತಿಸಿಕೊಡವ
ಇವರ ಸಾಂದರ್ಭಿಕ ಆಲೋಚನೆಗಳೆಲ್ಲಾ ಅಕ್ಷರ ರೂಪ ಪಡೆದುಕೊಂಡಿದೆ. ಆರಂಭದಲ್ಲಿ ಮಗು ಮಾತನಾಡುವುದಕ್ಕೆ ಹೇಗೆ ಶ್ರಮಿಸುತ್ತದೊ ಅದೆ ರೀತಿ ಮೌನೇಶ್ ಕೂಡಾ ಶ್ರಮಿಸಿದ್ದಾರೆ. ಮಗುವಿನ ಮಾತು ಹೇಗೆ ಅಪ್ಯಾಯಮಾನವಾಗುತ್ತದೊ ಹಾಗೆ ಮೌನೇಶ್ ಸಾಹಿತ್ಯದಲ್ಲಿ ದೋಷಗಳನ್ನು ಹುಡುಕುವ ಮೊದಲು ಪ್ರೋತ್ಸಾಹದ ನುಡಿಗಳ ಮೂಲಕ ಬೆನ್ನು ತುಟ್ಟುವುದು ಮುಖ್ಯ ಎಂಬುವುದು ನನ್ನ ಭಾವನೆ.
ನಮ್ಮ ಮುಂದೆ ಬೆಳೆಯುತ್ತಿರುವ ಹುಡುಗ. ಮೌನೇಶ್ ಅವರು ಈ ಹಿಂದೆ ಕವನ ಸಂಕಲನವನ್ನು ಹೊರ ತಂದಿದ್ದಾರೆ. ಹಲವಾರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ. ಇವೆಲ್ಲವೂ ಕೂಡಾ ಓದುಗರ ಬಳಿ ವಿಮರ್ಶಗೊಳಿಗಾಗಲಿ ಎಂಬುದೆ ನನ್ನ ಆಶಯ.
ಮೌನೇಶ್ ಬರೆದದ್ದೆಲ್ಲಾ ಸಾಹಿತ್ಯವಾಗುವುದಿಲ್ಲ ಎಂಬ ಸತ್ಯವನ್ನು ಮನಗಾಣಬೇಕು. ಬರೆಯುವ ಮುನ್ನ ಹೆಚ್ಚು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು.
"ಯಾವ ಜ್ಞಾನವು ಮನಸ್ಸು ಮತ್ತು ಹೃದಯಗಳನ್ನು ಶುದ್ದಿ ಮಾಡುವುದೊ ಅದೇ ನಿಜವಾದ ಜ್ಞಾನ. ಈ ನಿಜವಾದ ಜ್ಞಾನದ ಹಾದಿಯಲ್ಲಿ ಮೌನೇಶ್ ಸಾಗಲಿ" ಎಂದು ಹಾರೈಸುತ್ತೇನೆ.
ಹೆತ್ತೂರು ನಾಗರಾಜು ಸಂಪಾದಕರು ಭೀಮ ವಿಜಯ ಪತ್ರಿಕೆ, ಹಾಸನ
ಮೌನೇಶ್ ಜಟ್ಟೆಪ್ಪ ಕಂಬಾರ ಕರಕಿಹಳ್ಳಿ | Mounesha Jatteppa Kambara Karakihalli |
0 average based on 0 reviews.