| Category: | ಕನ್ನಡ |
| Sub Category: | ಕಾದಂಬರಿ |
| Author: | Mallepuram G Venkatesh |
| Publisher: | ಅಂಕಿತ ಪುಸ್ತಕ | Ankita Pustaka |
| Language: | Kannada |
| Number of pages : | |
| Publication Year: | 2025 |
| Weight | 600 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಅಲ್ಲಮ ಪ್ರಭುರಾಯ ಆಕಾಶ, ಪ್ರಕಾಶ ಶರೀರಧಾರಿ, ಅವನ ಮಾತು ಜ್ಯೋತಿರ್ಲಿಂಗ, ಅವನು ನಡೆದಾಡಿದರೆ ಹೆಜ್ಜೆ ಮೂಡದ ದಾರಿ. ಅವನು ಭೂಲೋಕಕ್ಕೆ ಅವತರಿಸಿದ ಗುರು ಎಂಬ ಮಾತು ಸತ್ಯ - ದ.ರಾ.ಬೇಂದ್ರೆ ಜೀವನದ ಉನ್ನತೋನ್ನತ ಆದರ್ಶವನ್ನು, ಧರ್ಮದ ನಿತ್ಯ ನಿರ್ಮಲ ಸ್ವರೂಪವನ್ನು ಅರಸಿದವನು ಅಲ್ಲಮಪ್ರಭು. ಸೀಮಾತೀತವಾದದ್ದು ಅವನ ಧರ್ಮ. ಎಲ್ಲ ಧರ್ಮಮಾರ್ಗಗಳ ಆಧ್ಯಾತ್ಮಿಕ ಬೆಲೆಯನ್ನವನು ಅರಿತುಕೊಂಡಿದ್ದ. ಧರ್ಮಕ್ಕೆ ವಿಶಾಲವಾದ, ವಿಶ್ವತೋಮುಖವಾದ ಅರ್ಥವನ್ನು ಕೊಡುವುದಕ್ಕೆ ಅಲ್ಲಮ ತನ್ನ ಬಾಳನ್ನು ನಿವೇದಿಸಿದ. - - ಅ.ನ.ಕೃಷ್ಣರಾಯ ಕರ್ನಾಟಕದ ಮಹತ್ಸಾಧನೆಯ ಇತಿಹಾಸದಲ್ಲಿ ಅಲ್ಲಮನ ಹೆಸರು ದೊಡ್ಡದು. ವ್ಯಕ್ತಿತ್ವದ ಮಿತವಲಯವನ್ನು ಮೀರಿನಿಂತು ಯಾವ ಸಂಪ್ರದಾಯದ ಕಟ್ಟಿಗೂ ಸಿಕ್ಕದೆ. - ಮಾನವತೆಯು ಸಾಧಿಸಬಹುದಾದ ಅತ್ಯುನ್ನತ ನಿಲವನ್ನು ಸಹಜಸ್ಥಿತಿಯಾಗಿ ಅಳವಡಿಸಿಕೊಂಡು ಅದನ್ನು ಜಗತ್ಕಲ್ಯಾಣಕ್ಕಾಗಿ ಸಾರಿದವನು ಅಲ್ಲಮಪ್ರಭು. –ಎಚ್. ತಿಪ್ಪೇರುದ್ರಸ್ವಾಮಿ ಅಲ್ಲಮ ಅನಂತ ವಿಶ್ವದ ಅಧ್ಯಾತ್ಮ ಹೇಳಿದ. ಅದು ಇಲ್ಲವಾಗುವ ಪೂರ್ಣ ಬಯಲು. ವೇದಗಳನ್ನು ಓದಿದ ಬಳಿಕ ಹೆಜ್ಜೆ ಉಳಿಸಬಾರದು ಎಂಬ ಅರಿವು ಬರುತ್ತದಲ್ಲ? ಇಂಥದೊಂದು ಹೆಜ್ಜೆ ಉಳಿಸಲಾರದ ಬಟಾಬಯಲು. ಅವನು ಎಲ್ಲಿದ್ದಾನೆ ಎಂದರೆ ಎಲ್ಲಿಯೂ ಇಲ್ಲ. ಯಾಕೆಂದರೆ: ಆ ತತ್ವ ವಿಶ್ವತೋಮುಖ ಬಯಲು. ತನ್ನನ್ನು ಬಯಲು ಎಂದವ ಎಲ್ಲಿ ಇರುವುದಿಲ್ಲ ಹೇಳಿ? ನಾವು ಮುಟ್ಟಲಿಕ್ಕಿರುವುದು ಆ ಅನಂತವನ್ನು, ಅಲ್ಲಮ ಸೇರಿದ್ದು, ತೋರಿದ್ದು ಅನಂತವನ್ನೇ. ವೀಣಾ ಬನ್ನಂಜೆ
Mallepuram G Venkatesh |
0 average based on 0 reviews.