ಯೋಗ ದಿನಚರಿ
Original price was: ₹ 125.₹ 111Current price is: ₹ 111.
SYNOPSIS
ನಮ್ಮ ದೇಶವನ್ನು ದೊಡ್ಡ ಮಟ್ಟದಲ್ಲಿ ಪೀಡಿಸುವ ಪಿಡುಗುಗಳೆಂದರೆ ಅನಕ್ಷರತೆ, ಅಜ್ಞಾನ. ಇದರ ಪರಿಣಾಮದಿಂದ ಜನತೆ ಹಲವು ಬಗೆಯ ದೈಹಿಕ, ಮಾನಸಿಕ ರೋಗಗಳಿಗೆ ಬಹುಬೇಗ ಬಲಿಯಾಗುವುದು ಕಂಡುಬರುತ್ತದೆ. ಇತ್ತೀಚಿನ ದಿನಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ ಕೆಲವು ವಿಶೇಷ ಕಾಯಿಲೆಗಳ ಜೊತೆಗೆ ಸಾಮಾನ್ಯವಾಗಿ ಎಲ್ಲರಿಗೂ ಬರಬಹುದಾದ ಕೆಲವು ರೋಗಗಳು ಸಮುದಾಯಗಳನ್ನು ಕಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇವುಗಳನ್ನು ಸಂಪೂರ್ಣ ತೊಡೆದುಹಾಕಲು ಸಾಧ್ಯವಾಗದಿದ್ದರೂ ನಿಯಂತ್ರಣದಲ್ಲಿಟ್ಟುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಲು ನಮ್ಮ ಜೀವನವನ್ನು ಕೆಲವು ಬಗೆಯ ಶಿಸ್ತುಗಳಿಗೆ ಒಳಗುಮಾಡಿಕೊಳ್ಳಬೇಕಾಗುತ್ತದೆ. ಆಹಾರ, ವ್ಯಾಯಾಮ, ಮಾನಸಿಕ ಒತ್ತಡ ಇವುಗಳನ್ನು ಸರಿಯಾದ ಕ್ರಮದಲ್ಲಿ ಪರಿಪಾಲಿಸಿದರೆ ಇದು ಕಾಡುವ ಕಾಯಿಲೆಯಾಗದೇ ತಡೆಗಟ್ಟಬಹುದಾದ ಜೀವನ ವಿನ್ಯಾಸವಾಗುತ್ತದೆ. ಇದಕ್ಕೆ ಅಗತ್ಯವಾದ ತಿಳಿವಳಿಕೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವಂತಹ ಕಾರ್ಯವನ್ನು ‘ಆರೋಗ್ಯ ಚಿಂತನ ಮಾಲಿಕೆ’ಯ ಕೃತಿಗಳು ಮಾಡುತ್ತವೆ. ಭಾರತದ ಯೋಗ ಇಂದು ವಿಶ್ವಪ್ರಸಿದ್ಧವಾಗಿದೆ. ದಿನನಿತ್ಯದ ಬದುಕಿನಲ್ಲಿ ಯೋಗಾಭ್ಯಾಸ ಹೇಗೆ ನಮಗೆ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಬಲ್ಲದು ಎಂಬುದನ್ನು ಪ್ರ್ರಾತ್ಯಕ್ಷಿಕೆಗಳ ವಿವರಣೆ ಮೂಲಕ ಪ್ರಖ್ಯಾತ ಯೋಗತಜ್ಞರಾದ ಮತ್ತು ಈಗಾಗಲೇ ಯೋಗದ ಕುರಿತು ಅನೇಕ ಕೃತಿಗಳನ್ನು ರಚಿಸಿ ಕನ್ನಡಿಗರಿಗೆ ಚಿರಪರಿಚಿತರಾಗಿರುವ ಸಂಶೋಧಕ ಡಾ. ಎಸ್.ಎನ್. ಓಂಕಾರ್ರವರು ‘ಯೋಗ ದಿನಚರಿ’ ಕೃತಿಯಲ್ಲಿ ತಿಳಿಸಿದ್ದಾರೆ. ಸೋಮವಾರದಿಂದ ಭಾನುವಾರದವರೆಗೆ ಪ್ರತಿದಿನ ಯಾವ ಯೋಗಾಸನಗಳನ್ನು ಮಾಡಬೇಕೆಂಬುದನ್ನು ಚಿತ್ರಸಹಿತ ವಿವರಿಸಿದ್ದಾರೆ. ಅಲ್ಲದೆ ಸೂರ್ಯ ನಮಸ್ಕಾರ ಹಾಕುವ ಬಗೆ ಮತ್ತು ಅದರಿಂದಾಗುವ ಪ್ರಯೋಜನವನ್ನು ತಿಳಿಸಿಕೊಟ್ಟಿರುವುದು ಕೃತಿಯ ಮತ್ತೊಂದು ವಿಶೇಷ.
ABOUT AUTHOR
Opinion of Others
There are no others opinion yet.
Reviews
There are no reviews yet.