ಕ್ರಮಣ

 319

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .4 kg
Author
Page Nos
Publications
(1 customer review)

SYNOPSIS

Opinion of Others

There are no others opinion yet.

Customer Reviews

1 review for ಕ್ರಮಣ

  1. Mahadev

    ಲೇಖಕರಾದ ಭಾರದ್ವಾಜ್ ಕೆ ಆನಂದ ತೀರ್ಥ ರವರ ‘ಕ್ರಮಣ’ ಪುಸ್ತಕವನ್ನು ಓದುವಾಗ ಪ್ರಾರಂಭದಲ್ಲಿದ್ದ ನನ್ನ ತವಕ ಮತ್ತು ಉತ್ಸಾಹ ಕಥೆಯ ಸಾಗುವಿಕೆಯ ಅಂತಿಮದವರೆಗೂ ಹಿಡಿದಿಟ್ಟುಕೊಂಡಿತು.ಕ್ರಮಣದ ಒಳನೋಟ ವಿವಿಧ ಆಯಾಮಗಳನ್ನು ಓದುಗರಿಗೆ ನೀಡುತ್ತದೆ.ಸಾಮಾಜಿಕ ಕಟ್ಟಳೆಗಳ ಹಾಗೂ ಬದ್ಧತೆಗಳ ಗಡಿಯನ್ನು ಒಬ್ಬ ವ್ಯಕ್ತಿ ಅದರಲ್ಲೂ ಉನ್ನತ ಸ್ತರದ ಜಾತಿಯ ವ್ಯಕ್ತಿಯೊಬ್ಬ ಮೀರಿದಾಗ ವೈಯಕ್ತಿಕ ಅಸ್ತಿತ್ವಕ್ಕೆ ಹೇಗೆ ಸಂಘರ್ಷ ಮಾಡಬೇಕಾಗುತ್ತದೆ ಎಂಬುದನ್ನು ಕ್ರಮಣ ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತದೆ ಕಥಾನಿರೂಪಕನ ತಂದೆ ಕೃಷ್ಣಶಾಸ್ತ್ರಿ(ಕುಂಟಶಾಸ್ತ್ರಿ) ಬ್ರಾಹ್ಮಣ ಮನೆತನದಲ್ಲಿ ಹುಟ್ಟಿ ಸಂದಿಗ್ದ ಸಮಯದ ಪರಿಸ್ಥಿತಿಯಿಂದ ಕುಂಬಾರ ಜಾತಿಯ ಹೆಂಗಸನ್ನು ಮದುವೆಯಾಗುವ ಪರಿಸ್ಥಿತಿ ಒಬ್ಬ ವ್ಯಕ್ತಿಯು ಸಾಮಾಜಿಕ ಸ್ಥಾನಮಾನಗಳನ್ನು ದಿಕ್ಕರಿಸಿ ತನ್ನದೇ ಆದ ವೈಯಕ್ತಿಕ ವ್ಯಕ್ತಿತ್ವವನ್ನು ಕಟ್ಟಿಕೊಂಡು ತನ್ನ ವ್ಯೆಚಾರಿಕತೆಯಿಂದ ಅವೈಜ್ಞಾನಿಕ ಆಚಾರಣೆಗಳು ಹಾಗೂ ಮೌಡ್ಯಗಳನ್ನು ನಂಬುವ ಜನರನ್ನು (ಅವರ ದುರ್ಬಲ ಮನೋಸ್ಥಿತಿಯಿಂದ) ಹೇಗೆ ವಶೀಕರಣಗೊಳಿಸಬಹುದು ಎಂಬುದನ್ನು ಓದುಗರಿಗೆ ಅರಿವು ಮೂಡಿಸುವ ದಿಟ್ಟ ನಿಲುವು ತೆಗೆದು ಕೊಂಡಿರುವುದು ಕಾದಂಬರಿಯಲ್ಲಿ ಎದ್ದು ಕಾಣುತ್ತದೆ. ಹಾಗೂ ಭಾರ್ಗವನ ಹಿರಿಯ ವಯಸ್ಸಿನ ಹೆಂಗಸಿನೊಂದಿಗಿನ ದೈಹಿಕ ಸಂಬಂಧದ ಹಾತೊರಿಯುವಿಕೆ ಒಬ್ಬ ವ್ಯಕ್ತಿಯು ಮನೋವಾಂಚೆಗಳನ್ನು(ದೈಹಿಕ ಸುಖಗಳನ್ನು) ಈಡೇರಿಸಿಕೊಳ್ಳುವಾಗ ಸಾಮಾಜಿಕ ಸ್ಥಾನಮಾನಗಳು ಅರಿವುಗಳು ಇಲ್ಲದಿರುವುದು ಮಾನವನ ಬೌದ್ಧಿಕ ಶ್ರೀಮಂತಿಕೆಯ ಪ್ರದರ್ಶನದಲ್ಲಿ ಅಗೌಣಮಾಡುವುದು ಪ್ರಸ್ತುತ ಕಾದಂಬರಿಯಲ್ಲಿ ಕಾಣಬಹುದು. ಅಂತ್ಯದಲ್ಲಿ ಭಾರ್ಗವನು ತನ್ನ ತಂದೆಯ ಆತ್ಮಶಾಂತಿಗಾಗಿ ಕೈಗೊಳ್ಳುವ ಯಾತ್ರೆಯ ದರ್ಶನ ಮನುಷ್ಯನ ಅಶುದ್ದತೆಗೆ ಪರಿಹಾರಗಳು ಅಶುದ್ಧತೆಯನ್ನೆ ಸೃಷ್ಟಿ ಮಾಡುವುದು ಎಂಬುದು ನನ್ನ ಸಾಮಾನ್ಯ ಮನಸ್ಸಿಗೆ ಗ್ರಾಸವಾಗಿತ್ತು (perception) ಕಾದಂಬರಿಯೊಂದಿಗಿನ ನನ್ನ ತಲ್ಲೀನತೆ ನನ್ನ ಸಾಮಾನ್ಯ ಬುದ್ದಿಗೆ ಈ ಕಾದಂಬರಿಯು ಮಾನವನ ಆಂತರಿಕ ಮನಸ್ಸಿನ ವಾಸ್ತವ ವಿಚಾರಗಳನ್ನು ಪ್ರಕಟಿಸುವ ಗಟ್ಹಿತನ ಹಾಗೂ ಪ್ರಸ್ತುತತೆ ತಮ್ಮ ಕಾದಂಬರಿಯಲ್ಲಿ ಬಿಂಬಿಸಿರುವದು ಅಸಾಮಾನ್ಯವೆಂದೇ ಅನಿಸುತ್ತದೆ. ಹಾಗೆಯೇ ಕಾದಂಬರಿಯಲ್ಲಿ ಭಾರ್ಗವ ಮತ್ತು ಅವನ ಸ್ನೇಹಿತರ ಮದ್ಯ ಹಾಗೂ ಮಾದಕ ದ್ರವ್ಯಗಳ ನಶೆಯ ಮೊದಲ ಅನುಭವಗಳು ವಯೊಸಹಜವಾಗಿ ಬಹಳಷ್ಟು ಯುವಕರ ಜೀವನದಲ್ಲಿ ನಡೆಯುವ ನೈಜ ಘಟನೆಗಳಂತೆ ಹಸಿಹಸಿಯಾಗಿ ಚಿತ್ರಿಸಿರುವುದು ಓದುಗರನ್ನು ಒಮ್ಮೆ ಜೀವನದ ಹಿಂದಿನ ಪುಟಗಳನ್ನು ತಿರುಗಿನೋಡುವಂತೆ ಮಾಡುವುದರಲ್ಲಿ ಸಂದೇಹವಿಲ್ಲ.

Add a review

Your email address will not be published. Required fields are marked *