ಫಾರೆಸ್ಟರ್ ಪೊನ್ನಪ್ಪ

 255

Buy E_Book

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .35 kg
Author
Page Nos
ISBN
Publications

SYNOPSIS

ಕೊಡಗಿನ ಆಂತರ್ಯದಲ್ಲಿ ಹುದುಗಿದ್ದ ಅರಣ್ಯಾಧಿಕಾರಿಯೊಬ್ಬರ ಜೀವನಗಾಥೆ.
ಮಲೆನಾಡಿನ ಬದಲಾದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಗೆ ಹಿಡಿದ ಕೈಗನ್ನಡಿ.
ಹೆಣ್ಣು, ಹಣದ ಹಿಂದೆ ಹೋಗಿ ಕೊನೆಗೆ ಭಿಕ್ಷೆ ಬೇಡುವಂತಾದವನ ದುರಂತ!
ದಾರಿ ತಪ್ಪಿದ ಮಗನಿಗಾಗಿ ಚಡಪಡಿಸುವ ಹಿರಿಜೀವಗಳ ದಾರುಣ ಪರಿಸ್ಥಿತಿ!
ಗುಡ್ಡಗಾಡಿನ ವಾಸ್ತವತೆ ಮತ್ತು ಅಂತರಾತ್ಮ.
ಮರಗಳ್ಳರಿಗೆ ಸಿಂಹಸ್ವಪ್ನವಾಗಿದ್ದ ಕೊಡಗಿನ ಅರಣ್ಯಾಧಿಕಾರಿಯೊಬ್ಬರ ರೋಚಕ ಕಥೆ (ಜೀವನಚರಿತ್ರೆ)

ABOUT AUTHOR

ಕೊಡಗಿನ ಮಡಿಕೇರಿ ಬಳಿಯ ಬೋಯಿಕೇರಿ, ನೌಶಾದ್ ಜನ್ನತ್ತ್ರ ಹುಟ್ಟೂರು. ಸುಂಟಿಕೊಪ್ಪ ಸರಕಾರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ಇವರು ಸದ್ಯ ಕುಶಾಲನಗರದಲ್ಲಿ ಕುಟುಂಬದೊAದಿಗೆ ವಾಸವಾಗಿದ್ದಾರೆ. ಜೀವನೋಪಾಯಕ್ಕಾಗಿ ಕೊಡಗಿನ ಗಡಿಯಂಚಿನಲ್ಲಿ ಪಿಠೋಪಕರಣಗಳ ಉದ್ಯಮವನ್ನು ನಡೆಸುತ್ತಿರುವ ನೌಶಾದ್‌ರವರು, ``ನಮ್ಮ ಕೊಡಗು ತಂಡ'' ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಅದರ ಮೂಲಕ ಸಂತ್ರಸ್ತರು ಮತ್ತು ಆದಿವಾಸಿಗಳ ಮೂಲಭೂತ ಹಕ್ಕುಗಳಿಗೆ ಹೋರಾಟ ಮಾಡುವುದರ ಜೊತೆಗೆ ಸರಕಾರಿ ಶಾಲೆ ಉಳಿಸಿ ಅಭಿಯಾನವನ್ನು ಕೂಡ    Read More...

Opinion of Others

  1. Bharati Prasad

    Bharati PrasadWriter

    ಕಾದಂಬರಿ -- ಫಾರೆಸ್ಟರ್ ಪೊನ್ನಪ್ಪ ಲೇಖಕ -- ನೌಶಾದ್ ಜನ್ನತ್ ಪುಟಗಳು --೨೫೬ ಬೆಲೆ --೩೦೦ ರೂಪಾಯಿಗಳು ಪ್ರಕಾಶಕರು --ವೀರಲೋಕ ವರ್ಷ --೨೦೨೨ ‌ಫಾರೆಸ್ಟರ್ ಪೊನ್ನಪ್ಪ ಕೊಡಗಿನ ಲೇಖಕರಾದ ನೌಶಾದ್ ಜನ್ನತ್ ರವರ ಲೇಖನಿಯಿಂದ ಮೂಡಿಬಂದಂತಹ ಮೂರನೇ ಕಾದಂಬರಿ ಫಾರೆಸ್ಟರ್ ಪೊನ್ನಪ್ಪ. ಕರ್ನಾಟಕದ ಕಾಶ್ಮೀರವೆಂದೇ ಕರೆಯಲ್ಪಡುವ ಕೊಡಗಿನ ಹಸಿರಿನ ಮಧ್ಯೆ ಹೀಗೊಬ್ಬ ಖಡಕ್ ಫಾರೆಸ್ಟರ್ ಪೊನ್ನಪ್ಪನನ್ನು ಹುಟ್ಟು ಹಾಕಿದ ನೌಶಾದ್, ಕೊಡಗಿನಲ್ಲಿ ಅವ್ಯಾಹತವಾಗಿ ನಡೆಯುವ ಮರಗಳ್ಳತನದ ಮೇಲೆ ಬೆಳಕು ಚೆಲ್ಲಿದ್ದಾರೆ. ವನದಿಂದಲೇ ನಾವು ಎಂದು ಬದುಕುವ ಪೊನ್ನಪ್ಪನಂತಹ ಫಾರೆಸ್ಟರ್ ನಿಂದ ಕೊಡಗಿನ ವನ್ಯಸಿರಿಗೆ ಧಕ್ಕೆಯಾಗಲಾರದು ಎಂಬ ಭಾವ ನಮ್ಮೊಳಗಿದ್ಜರೂ,ಮರಗಳ್ಳಗಳರ ಸಹಾಯಕ್ಕೆ ನಿಲ್ಲುವ ಕೆಲವೊಂದು ರಾಜಕೀಯ ಪಕ್ಷದ ಧುರೀಣರ ಕೈ ಜೋಡಿಸುವಿಕೆಯಿಂದ ವನ್ಯ ಸಂಪತ್ತು ಎಲ್ಲಿ ಕಳೆದು ಹೋಗುವುದೋ ಎಂಬ ಭೀತಿ ಉಂಟಾಗುವುದು ಸಹಜ. ಪ್ರಸ್ತುತ ವಿದ್ಯಾಮಾನದಲ್ಲಿ ನಡೆಯುವುದು ಅದೇ ಆದರೂ, ನಿಷ್ಠಾವಂತ ಅಧಿಕಾರಿಗಳ ನಡೆ ಇಂತಹವುಗಳನ್ನು ಮಟ್ಟ ಹಾಕುವುದರಲ್ಲಿ ಸಂಶಯವಿಲ್ಲ. ಅಂತಹ ಅಧಿಕಾರಿಗಳಲ್ಲಿ ಪೊನ್ನಪ್ಪ ಸೇರಿದಂತೆ ಅವರೊಂದಿಗೆ ರೇಂಜರ್ ಅಚ್ಚಯ್ಯ, ಗಾರ್ಡ್ ಮುನಿಯನಂತಹವರಿದ್ದರೆ ಯಾವ ಕಳ್ಳತನವೂ ನಡೆಯಲಾರದು. ಕೊಡಗಿನ ತಿತಿಮತಿ ವ್ಯಾಪ್ತಿಯ ಅಗಾಧ ಸಂಪತ್ಭರಿತ ಸರ್ಕಾರಕ್ಕೆ ಸಂಬಂಧಪಟ್ಟ ಕಾಡಿನಲ್ಲಿ ನಡೆಯುವ ತೇಗದ ಮರಗಳ್ಳತನವನ್ನು ಚಾಕಚಕ್ಯತೆಯಿಂದ ಮಟ್ಟ ಹಾಕುವ ಪೊನ್ನಪ್ಪ , ಅವರೊಂದಿಗೆ ಇದ್ದು ಅವರ ಕೆಲಸಗಳಿಗೆ ಬೆಂಬಲವಾಗಿ ನಿಂತ ಸಹ ಅಧಿಕಾರಿಗಳ ಸಹಕಾರ , ಕಳ್ಳರನ್ನು ಹಿಡಿಯಲು ಸಹಾಯವಾಗುತ್ತದೆ ‌ .ಬರೀ ಕಳ್ಳರನ್ನು ಹಿಡಿದರೆ ಸಾಕೇ ಅದರ ಹಿಂದಿರುವ ದೊಡ್ಡ ಕುಳ ಯಾರೆಂದು ಹುಡುಕುವಷ್ಟರಲ್ಲಿ ತಾನಾಗಿಯೇ ಫಾರೆಸ್ಟ್ ಆಫೀಸಿಗೆ ಬಂದು ಸಿಕ್ಕಿಹಾಕಿಕೊಳ್ಳುವ ಮರದ ವ್ಯಾಪಾರಿ , ರೇಂಜರ್ ಅಚ್ಚಯ್ಯನವರಿಗೆ ಹಣದ ಆಮಿಷ ಒಡ್ಡಿದರೂ, ಅವರ ತಂತ್ರಕ್ಕೆ ಬಲಿಯಾಗದೇ ಅವನನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಪೊನ್ನಪ್ಪನವರ ಮೊದಲ ಮಗ ರಾಯ್ ಸೈನಿಕನಾಗಿದ್ದರೆ, ಎರಡನೇ ಮಗ ಸನ್ನಿ ಕಾಲೇಜು ವಿದ್ಯಾರ್ಥಿ. ಹದಿಹರೆಯದ ಸಹಜ ಗುಣಗಳನ್ನು ಮೈಗೂಡಿಸಿಕೊಂಡ ಸನ್ನಿ ಜಾಲಿ ಜೀವನಕ್ಕೆ ಒಗ್ಗಿದವನು. ಕಾಲೇಜಿನ ಪಕ್ಕದ ಹೊಟೇಲ್ ಒಂದಕ್ಕೆ ಟೀ ಕುಡಿಯಲೆಂದು ಬರುವ ಸನ್ನಿ ಮತ್ತು ಆತನ ಗೆಳೆಯರಿಗೆ ಆ ಹೊಟೇಲ್ ಮಾಲಿಕ ನಾಯರ್ ನಾ ಪತ್ನಿ ಶೀಲಳ ಮೇಲೆ ಕಣ್ಣು. ನಾಯರ್ ಗೆ ಅರವತ್ತು ವರ್ಷವಾಗಿದ್ದರೆ, ಶೀಲಾಳಿಗೆ ಹರೆಯ ಪುಟಿದೇಳುವ ವಯಸ್ಸು. ಹರೆಯದಲ್ಲಿ ಕಾಣುವ ಸಹಜ ಆಸೆ, ಆಕಾಂಕ್ಷೆಯಿಂದ ನಾಯರನ ಪತ್ನಿಯಾಗಿ ಬಂದ ಆಕೆಗೆ ನಾಯರನಂತಹ ಮುದುಕನಿಂದ ಯಾವ ಬಯಕೆಯೂ ಈಡೇರದೇ ಇದ್ದಾಗ, ಅವಳ ಮನ ಸನ್ನಿಯ ಕಡೆ ವಾಲುತ್ತದೆ. ಉಕ್ಕುವ ಹರೆಯ, ಹೆಣ್ಣು ತಾನಾಗಿಯೇ ಬಲೆಗೆ ಬಂದು ಬಿದ್ದಾಗ, ಸನ್ನಿ ಅದರ ಪ್ರಯೋಜನವನ್ನು ಪಡೆದುಕೊಳ್ಳುತ್ತಾನೆ. ನಾಲ್ಕು ದಿನ ಮನೆಗೂ ಹೋಗದೇ ,ಯಾರ ಕಣ್ಣಿಗೂ ಕಾಣಿಸಿಕೊಳ್ಳದ ಸನ್ನಿ ಯಾರದೋ ಜೊತೆ ಓಡಿ ಹೋಗಿದ್ದಾನೆ ಅನ್ನೋ ಗುಮಾನಿ ಮೇಲೆ ಹುಡುಕಾಟ ಶುರು ಮಾಡುವ ಪೊಲೀಸರಿಗೆ ಅರೆನಗ್ನಾವಸ್ಥತೆಯಲ್ಲಿ ಸಿಗುವ ಸನ್ನಿಯಿಂದ ಫಾರೆಸ್ಟರ್ ಪೊನ್ನಪ್ಪನವರ ಮನೆ ಮರ್ಯಾದೆ, ಸನ್ನಿಯ ಮರ್ಯಾದೆ ಬೀದಿ ಪಾಲಾಗುತ್ತದೆ. ಅಲ್ಲಿಂದ ಮೌನಕ್ಕೆ ಜಾರುವ ಸನ್ನಿ ಕಾಲೇಜು ಕಡೆ ಮುಖ ಮಾಡುವುದಿಲ್ಲ. ಮನೆಯಲ್ಲಿ ಕತ್ತಲೆ ಕೋಣೆಯೊಳಗೆ ಕೂರುವ ಸನ್ನಿಯ ಮುಂದಿನ ಜೀವನದ ಬಗ್ಗೆ ತಾಯಿ ಬೊಳ್ಳವ್ವನಿಗೆ ಶುರುವಾದ ಚಿಂತೆಗೆ ಪರಿಹಾರವಾಗಿ ಸನ್ನಿ ಯಾವುದಾದರೂ ವ್ಯವಹಾರ ಮಾಡುವ ಇಚ್ಛೆ ವ್ಯಕ್ತಪಡಿಸಿದಾಗ, ಪೊನ್ನಪ್ಪನವರ ಉಳಿತಾಯದ ಹಣ ಮತ್ತು ಅಣ್ಣ ರಾಯ್ ಕೊಡುವ ಹಣದಿಂದ ಮನೆ ಬಿಟ್ಟು ತೆರಳುವ ಸನ್ನಿ, ಮನೆ ಬಿಟ್ಟು ಹೋಗಿ ಬ್ರೋಕರ್ ಕೆಲಸದಿಂದ ಶ್ರೀಮಂತನಾದ ತಮ್ಮೂರಿನವನೊಬ್ಬನ ಸಹಾಯದಿಂದ ಶುಂಠಿ ಬೆಳೆ ಬೆಳೆಯುವ ಕೆಲಸಕ್ಕೆ ಮುಂದಾಗುತ್ತಾನೆ.ಮೊದಮೊದಲು ಎಡರುವ ಸನ್ನಿ, ಮತ್ತೆ ವ್ಯವಹಾರದಲ್ಲಿ ಕುದುರುತ್ತಾ ಬೆಳೆಯುತ್ತಾ ಹೋಗುವವನು, ತನಗೆ ಸಹಾಯ ಮಾಡಿದವನನ್ನೇ ಮರೆತು, ಐಶಾರಾಮಿ ಜೀವನದಲ್ಲಿ ಮುಳುಗೇಳುತ್ತಾನೆ. ಇತ್ತ ಮರಗಳ್ಳತನದಲ್ಲಿ ಸಿಕ್ಕಿ ಬಿದ್ದವನು, ಅರೆಸ್ಟ್ ಆಗಿ, ಜೈಲು ಶಿಕ್ಷೆ ಅನುಭವಿಸಿ, ಹೊರಬಂದ ಮೇಲೆ ಪೊನ್ನಪ್ಪನವರ ಮೇಲೆ ಸೇಡು ತೀರಿಸಿಕೊಂಡನೇ?. ಕೆಟ್ಟ ಮೇಲೂ ಬುದ್ಧಿ ಬಾರದ ಸನ್ನಿ ಮತ್ತದೇ ಚಾಳಿಯಲ್ಲಿ ಮುಂದುವರೆದು ಏನಾದ?. ಪೊನ್ನಪ್ಪ ಅವನನ್ನು ಕ್ಷಮಿಸಿದರೆ..? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬೇಕೆಂದರೆ ಕಾದಂಬರಿ ಓದಿ ತಿಳಿಯಬೇಕು. ಕಾದಂಬರಿ ಒಳಗೆ ಅನೇಕ ವಿಚಾರಗಳಿವೆ.ಎಲ್ಲವನ್ನು ನಾನಿಲ್ಲಿ ಉಲ್ಲೇಖಿಸಿದರೆ, ಓದುಗನ ಕುತೂಹಲ ಕರಗಿ ಹೋಗಬಹುದೇನೋ.? ಒಟ್ಟಿನಲ್ಲಿ ಕೊಂಡು ಓದುವ, ಆಸಕ್ತಿದಾಯಕ ಪುಸ್ತಕ ಫಾರೆಸ್ಟರ್ ಪೊನ್ನಪ್ಪ. ನೌಶಾದ್ ಜನ್ನತ್ ರವರ ಲೇಖನಿಯಿಂದ ಇಂತಹ ನೂರಾರು ಕಾದಂಬರಿಗಳು ಬೆಳಕು ಕಾಣಲಿ . ನಾನು ಕಂಡ ಹಾಗೆ ಒಂದೇ ಒಂದು ಋಣಾತ್ಮಕ ಅಂಶವೆಂದರೆ, ಉಪಯೋಗಿಸುವ ಶಬ್ಧಗಳ ಮೇಲೆ ಚೂರು ಗಮನವಿರಲಿ ಎಂಬುದು. ಬೇಕಾದಲ್ಲಿ 'ಹ' ಕಾರದ ದೋಷ ನನ್ನಂತಹ ಸೂಕ್ಷ್ಮ ಓದುಗಳಿಗೆ ಕಾಣಬಹುದು. ಉದಾ :- ಬೆಳಕ್ಹರಿಯುವವರೆಗೆ (ಬೆಳಕರಿಯುವವರೆಗೆ) ಇಂತಹ ಮೂರ್ನಾಲ್ಕು ಪದಗಳನ್ನು ಕಾದಂಬರಿಯಲ್ಲಿ ಕಂಡಿದ್ದೇನೆ. ಶಬ್ದಗಳ ಸ್ಪಷ್ಟತೆ ಬಗ್ಗೆ ಗಮನವಿರಲಿ Nowshad Jannath . ಉಳಿದಂತೆ ಕಾದಂಬರಿ.. 👌🏻👌🏻👌🏻 -ಭಾರತೀ ಪ್ರಸಾದ್ ಕೊಡ್ವಕರೆ

Customer Reviews

Reviews

There are no reviews yet.

Be the first to review “ಫಾರೆಸ್ಟರ್ ಪೊನ್ನಪ್ಪ”

Your email address will not be published. Required fields are marked *