ನೌಶಾದ್ ಜನ್ನತ್ತ್

ಕೊಡಗಿನ ಮಡಿಕೇರಿ ಬಳಿಯ ಬೋಯಿಕೇರಿ, ನೌಶಾದ್ ಜನ್ನತ್ತ್ರ
ಹುಟ್ಟೂರು. ಸುಂಟಿಕೊಪ್ಪ ಸರಕಾರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ
ಮುಗಿಸಿದ ಇವರು ಸದ್ಯ ಕುಶಾಲನಗರದಲ್ಲಿ ಕುಟುಂಬದೊAದಿಗೆ
ವಾಸವಾಗಿದ್ದಾರೆ. ಜೀವನೋಪಾಯಕ್ಕಾಗಿ ಕೊಡಗಿನ ಗಡಿಯಂಚಿನಲ್ಲಿ
ಪಿಠೋಪಕರಣಗಳ ಉದ್ಯಮವನ್ನು ನಡೆಸುತ್ತಿರುವ ನೌಶಾದ್‌ರವರು,
“ನಮ್ಮ ಕೊಡಗು ತಂಡ” ಎಂಬ ಸಂಸ್ಥೆಯನ್ನು ಹುಟ್ಟುಹಾಕಿ
ಅದರ ಮೂಲಕ ಸಂತ್ರಸ್ತರು ಮತ್ತು ಆದಿವಾಸಿಗಳ ಮೂಲಭೂತ
ಹಕ್ಕುಗಳಿಗೆ ಹೋರಾಟ ಮಾಡುವುದರ ಜೊತೆಗೆ ಸರಕಾರಿ ಶಾಲೆ
ಉಳಿಸಿ ಅಭಿಯಾನವನ್ನು ಕೂಡ ಕೊಡಗಿನಲ್ಲಿ ಪರಿಣಾಮಕಾರಿಯಾಗಿ
ಮಾಡುತ್ತಾ ಬಂದಿದ್ದಾರೆ.
ಕಾಲೇಜು ದಿನಗಳಿಂದಲೂ ಸಾಹಿತ್ಯದ ಮೇಲೆ ಅಪಾರ ಒಲವಿದ್ದ
ನೌಶಾದ್ ಜನ್ನತ್ತ್ರ ಹಲವು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದೆ.
೨೦೨೦ರಲ್ಲಿ “ಕಡಮ್ಮಕಲ್ಲು ಎಸ್ಟೇಟ್” ಎಂಬ ಕಿರುಕಾದಂಬರಿಯನ್ನು
ಕನ್ನಡ ಪುಸ್ತಕ ಪ್ರಾಧಿಕಾರದ ಅನುದಾನದಡಿಯಲ್ಲಿ ಬರೆದಿದ್ದು,
ಈ ಕೃತಿ ಕೊಡಗು ಸಾಹಿತ್ಯವಲಯದಲ್ಲಿ ಹೆಚ್ಚು ಚರ್ಚಿತವಾಗಿ
ಬಿಡುಗಡೆಯಾದ ಎರಡು ದಿನದಲ್ಲೆ ಮರುಮುದ್ರಣವಾಗಿತ್ತು. ಕೊಡಗಿನ
ಪ್ರಾಕೃತಿಕ ವಿಕೋಪಕ್ಕೆ ಸಂಬAಧಪಟ್ಟAತೆ ಇವರು ೨೦೨೧ರಲ್ಲಿ ಬರೆದ
“ಜಲಪ್ರಳಯ” ಕೃತಿ ಕೂಡ ಸಾರ್ವಜನಿಕ ವಲಯದಲ್ಲಿ ಹೆಚ್ಚಿನ
ಚರ್ಚೆಗೆ ಗ್ರಾಸವಾಗಿತ್ತು.