ಕಾಮೋಲ

Original price was: ₹ 100.Current price is: ₹ 89.

SKU: kamola Categories: ,

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .4 kg
Author
Page Nos
Publications

SYNOPSIS

ಕಥೆ ಹಾಗೂ ಕವಿತೆಯ ನಡುವೆ ಜೋಕಾಲಿಯಾಡುತ್ತಲೇ ತಮ್ಮ ಮೊದಲ ಕಥಾಸಂಕಲನ ‘ಪರಿಧಾವಿ’ ಯನ್ನು ಹೊರತಂದ, ವೃತ್ತಿಯಲ್ಲಿ ವೈದ್ಯ ಹಾಗೂ ಪ್ರವೃತ್ತಿಯಲ್ಲಿ ಸಾಹಿತಿಯಾಗಿರುವ ಡಾ. ಅಜಿತ್ ಹೆಗಡೆಯವರು ಕಥಾ ಕ್ಷೇತ್ರದಲ್ಲೇ ಗಟ್ಟಿಯಾಗಿ ಬೇರೂರುವ ಸೂಚನೆಯ ಹಾಗೆ ತಮ್ಮ ಎರಡನೇ ಕಥಾಸಂಕಲನ ‘ಕಾಮೋಲ’ವನ್ನು ಹೊರತರುತ್ತಿದ್ದಾರೆ.
ತಮ್ಮ ಕಥೆಗಳಿಗೆ ವಿಸ್ತಾರವಾದ ಹಿನ್ನೆಲೆಯನ್ನು ಅಜಿತ್ ಬಳಸಿಕೊಳ್ಳುತ್ತಾರೆ. ಆ ವಿಸ್ತಾರದಲ್ಲಿ ಬರುವ ಅನೇಕ ಪಾತ್ರಗಳು ತಮ್ಮ ನೋವು-ನಲಿವುಗಳ, ಸುಖ-ದುಃಖಗಳ ಬೃಹನ್ನಾಟಕವನ್ನು ತೆರೆಯುತ್ತಾ ಹೋಗುವ ಪರಿ ಕುತೂಹಲಕರವಾಗಿದೆ. ಕಥೆಯೊಂದರಲ್ಲಿ ಬರುವ ‘ಜೇಡ ತನ್ನೊಳಗಿಂದ ಅಂಟನ್ನು ಸ್ರವಿಸುತ್ತಾ ಬಲೆ ನೇಯುತ್ತಾ ಇರುವ ಹಾಗೆ, ಬೆಳಕು ಅದರ ಮೇಲೆ ಬಿದ್ದು, ಬಣ್ಣದೋಕುಳಿ ಕಾಣಿಸುವ ಹಾಗೆ’ ಇಲ್ಲಿನ ಕಥೆಗಳೂ ಕೆಲಿಡೋಸ್ಕೋಪಿನಲ್ಲಿ ಕಾಣಿಸುವ ವರ್ಣ ವಿನ್ಯಾಸದಿಂದ ನಮ್ಮೆದುರು ಆನಾವರಣಗೊಳ್ಳುತ್ತವೆ. ಈ ಕಥಾಲೋಕದಲ್ಲಿ ನಾರಣಕಾಕಾ, ಗೋಪಣ್ಣರಂಥ ಕಾಮಿಗಳಿದ್ದಾರೆ. ‘ಕೇತಕಿ’ ಕಥೆಯಲ್ಲಿನಂತೆ ಸಿದ್ಧಾಂತಗಳ ಸಂಘರ್ಷವಿದೆ, ‘ಸಾಬೀತು’ ಕಥೆಯ ಉಮಾಳಂಥ ದಿಟ್ಟೆಯರಿದ್ದಾರೆ. ‘ಸೆಲೆಯ’ ಶೀನಣ್ಣನಂಥ ಭಗೀರಥರಿದ್ದಾರೆ. ಮಾನಸಿಕ ನೆಮ್ಮದಿ ಕಳಕೊಂಡ ಕಾದಂಬಿನಿಯಂಥ ಆಧುನಿಕಳಿದ್ದಾಳೆ. ಹೀಗೆ ಒಂದು ವಿಸ್ತ್ರತ ಮಾನವಲೋಕವೊಂದು ನಮ್ಮೆದುರು ಇಲ್ಲಿನ ಕಥೆಗಳಲ್ಲಿ ತೆರೆದುಕೊಳ್ಳುವ ರೀತಿ ಅನನ್ಯವಾಗಿದೆ. ಸಾವಧಾನವಾಗಿ ಕಥೆ ಹೇಳುತ್ತಲೇ ಆದರಾಚಿನ ಇನ್ನೇನನ್ನೋ ಹೊಳೆಯಿಸುವ ಪ್ರಯತ್ನವಿದೆ. ಪ್ರೇಮ, ಕಾಮ, ಕ್ರೌರ್ಯ, ಒಳಸಂಚು, ಪ್ರತಿಭಟನೆ ಇತ್ಯಾದಿಗಳ ನಡುವೆಯೇ ಆರಳಿಕೊಳ್ಳುವ ಜೀವ ಚೈತನ್ಯ, ಸವಾಲನ್ನೆದುರಿಸುವ ಸಾಮರ್ಥ್ಯ ಮೊದಲಾದ ಮಾನವಲೋಕದ ಸಮಸ್ತ ಗುಣಗಳನ್ನು ಕಲಾತ್ಮಕವಾಗಿ ಕಟ್ಟಿಕೊಡುವ ಯತ್ನದಲ್ಲಿ ಮಹತ್ವದ ಹೆಜ್ಜೆಯನಿಟ್ಟಿರುವ ಈ ಕಥಾಸಂಕಲನವು ಅಜಿತರು ಕನ್ನಡ ಕಥಾಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲೆಯೂರಲಿದ್ದಾರೆ ಎಂಬುದನ್ನು ಸಾಬೀತು ಪಡಿಸುತ್ತದೆ.
– ಸುಬ್ರಾಯ ಚೊಕ್ಕಾಡಿ

ABOUT AUTHOR

ವೈದ್ಯ ಮತ್ತು ಲೇಖಕರಾದ ಡಾ. ಅಜಿತ್ ಹರೀಶಿ ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಹರೀಶಿ ಗ್ರಾಮದವರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹುಟ್ಟೂರಿನ ಸರ್ಕಾರಿ ಶಾಲೆಗಳಲ್ಲಿ, ಪದವಿಪೂರ್ವ ಶಿಕ್ಷಣವನ್ನು ಶಿರಸಿಯಲ್ಲಿ ಮುಗಿಸಿರುತ್ತಾರೆ. ಆಯುರ್ವೇದ ಮಹಾವಿದ್ಯಾಲಯ,ಹುಬ್ಬಳ್ಳಿಯಲ್ಲಿ ವೈದ್ಯಕೀಯ ಪದವೀಧರರಾದ ಇವರು, ಆಕ್ಯುಪಂಕ್ಚರ್ ಚಿಕಿತ್ಸೆ,ಹಿಪ್ನೋಥೆರಪಿಯಲ್ಲಿಯೂ ಪರಿಣಿತರು. ಪ್ರಸ್ತುತ ಹರೀಶಿಯಲ್ಲಿ ಖಾಸಗಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ಬರವಣಿಗೆಯನ್ನು ತಮ್ಮ ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ. ಬಿಳಿಮಲ್ಲಿಗೆಯ ಬಾವುಟ, ಸೂರು ಸೆರೆಹಿಡಿಯದ ಹನಿಗಳು,    Read More...

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಕಾಮೋಲ”

Your email address will not be published. Required fields are marked *

Related Products