ಹಿನ್ನೀರ ದಂಡೆಯ ಸೀತಾಳೆದಂಡೆ

Original price was: ₹ 130.Current price is: ₹ 116.

SKU: hinnera dadeya seetaladande Categories: ,

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .4 kg
Author
Page Nos
Publications

SYNOPSIS

ಸಣ್ಣ ಸಣ್ಣ ಸಂಗತಿಗಳನ್ನು ಸಾಂದ್ರವಾಗಿ ಭಾವಪೂರ್ಣವಾಗಿಸುವ ಇಲ್ಲಿನ ಕಥೆಗಳು; ಚಂದದ ಬದುಕೊಂದಕ್ಕಾಗಿ ಹಂಬಲಿಸಿದಂತಿವೆ. ಹಿನ್ನೀರದಂಡೆಯಿಂದ ಮಹಾನಗರದ ಮಧ್ಯಕ್ಕೆ ತಂದು ನಿಲ್ಲಿಸಿದ ಕಥೆಗಾರ್ತಿಯ ಜೀವನಾನುಭವಗಳೇ ಕಥೆೆಗಳ ಹೂರಣವೆನಿಸುತ್ತದೆ. ಸಮಕಾಲೀನ ಸಂದಿಗ್ಧತೆಗಳ ಸೂಕ್ಷö್ಮ ಪದರುಗಳನ್ನು ಸಾವಧಾನದಿಂದ ಕಂಡರಸುವ ಕತೆಗಳು; ವಾಸ್ತವವನ್ನು ತದೇಕಚಿತ್ತದಿಂದ ದಿಟ್ಟಿಸಿವೆ. ಹೆಣ್ಣಿನ ಒಳತೋಟಿಗಳು ಆಧುನಿಕ ಅವಸ್ಥಾಂತರದ ಗರಡಿಯಲ್ಲಿ ಪಳಗಿ ಗಟ್ಟಿಪಾತ್ರಗಳಾಗಿ ಅರಳಿ ಹೊರಳಿವೆ. ಕನ್ನಡ ಕಥಾಲೋಕಕ್ಕೆ ಸೇರ್ಪಡೆಯಾಗಲೇಬೇಕಾದ ಕಥೆಗಳಿವು ಎನಿಸುತ್ತದೆ.
– ಡಾ. ರತ್ನಾಕರ ಸಿ.ಕುನುಗೋಡು
ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಿಪ್ಪನಪೇಟೆ
ಮೂಲತಃ ಶರಾವತಿ ಹಿನ್ನೀರಿನ ತುಮರಿಯವರಾದ ಮಂಗಳ ಶಿಕ್ಷಕಿ, ಲೇಖಕಿ ಹಾಗೂ ಕೀರ್ತನಕಾರರು. ಇವರ ನಾಟಕ ‘ಆರೋಹಿ’ ಗೆ ಕನ್ನಡ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರಕಿದೆ. ಈ ಕಥಾಸಂಕಲನದಲ್ಲಿ ಒಟ್ಟು ಹನ್ನೆರಡು ಕಥೆಗಳಿವೆ. ಈ ಕಥೆಗಳಿಗೆ ನವಜಾತ ಶಿಶುವಿನ ಗಂಧವಿದೆ. ಮುಗ್ಧತೆ ಮತ್ತು ನವಿರುತನ ಇಲ್ಲಿನ ಸ್ಥಾಯೀ ಭಾವಗಳು. ಮಹಿಳೆಯೊಬ್ಬಳು ಕಥೆಗಾರ್ತಿಯಾಗಿ ರೂಪುಗೊಂಡಾಗ, ಸಾಹಿತ್ಯ ಕ್ಷೇತ್ರಕ್ಕೆ ಸಿಗಬಹುದಾದ ಬಹುತೇಕ ಲಾಭಗಳು ಈ ಕೃತಿಯಿಂದ ದೊರೆಯುತ್ತದೆ. ಮಂಗಳಾ ಅವರು ತಮ್ಮ ಬಾಲ್ಯ ಮತ್ತು ಯೌವನದ ದಿನಗಳು; ಮಲೆನಾಡು, ನಗರ ಜೀವನವನ್ನು ತಮ್ಮದೇ ಆದ ಕೋನಗಳಿಂದ ಸೆರೆಹಿಡಿದು ಓದುಗನ ಮುಂದಿಟ್ಟಿದ್ದಾರೆ.
ಪ್ರಸಿದ್ಧರ ಪತ್ನಿಯ ಸಂದರ್ಶನದಂತಹ ಸಮಕಾಲೀನ ಕಥಾವಸ್ತುವಿನಿಂದ ಹಿಡಿದು ತಲೆಮಾರಿನ ಹೊಯ್ದಾಟವು, ಈ ಸಂಕಲನದಲ್ಲಿ ಕಥೆಗಳಾಗಿ ರೂಪುಗೊಂಡ ಪರಿ ಅನನ್ಯವಾದುದು. ನಾಮಕರಣದಂತಹ ವಿಷಯವನ್ನು ತೆಗೆದುಕೊಂಡು ರಚಿಸಿದ ಕಥೆಯ ತಂತ್ರ, ಮಂಗಳಾ ಅವರು ಪಳಗಿದ ಕಥೆಗಾರ್ತಿಯಾಗುವ ಭರವಸೆಯನ್ನು ಹುಟ್ಟುಹಾಕುತ್ತದೆ. ಗುಲಾಬಿ ಫ್ರಾಕಿನ ಕಥೆಗೆ ಭಾವುಕತೆಯೇ ಇಂಧನ. ಸುಕ್ರಿ ಎಂಬ ಮೀನು ಮಾರುವ ಸಶಕ್ತ ಹೆಂಗಸಿನ ಪಾತ್ರದ ಜೊತೆಗೆ ಕಾಲೇಜಿನಲ್ಲಿ ಪೀಡಿಸುವ ಹುಡುಗನಿಗೆ ಹೆದರುವ ಅಬಲೆಯನ್ನು ಮಂಗಳಾ ಚಿತ್ರಿಸಬಲ್ಲರು. ನಿತ್ಯ ಬದುಕಿನಲ್ಲಿ ಸಿಗಬಹುದಾದ ವಾಣಿ ಚಿಕ್ಕಿಯಂತಹ ಪಾತ್ರ ಇಲ್ಲಿ ಮನೋಜ್ಞವಾಗಿ ಮೂಡಿಬಂದಿದೆ. ಮುಂಬೈನಂತಹ ಶಹರಿನ ಎರಡು ಮುಖಗಳು, ದುರ್ಬಲ ಮಹಿಳೆಯಿಂದ ಭೂಮಿ ಕಿತ್ತುಕೊಳ್ಳುವ ಸಮಾಜ, ಗಂಡಹೆಂಡಿರ ಜಗಳದ ಮಧ್ಯದ ಹೂವಮ್ಮ- ಮಂಗಳಾ ಅವರ ಕಥೆ ನೇಯ್ಗೆಯ ಕಾಯಕಕ್ಕೆ ಸಾಕ್ಷಿ. ಅವನಿಯಂತಹ ಭೂಮಿ ತೂಕದ ಹೆಣ್ಣು, ನೊಂದ ಜೀವಗಳಿಗೆ ಸ್ಪೂರ್ತಿಯಾಗಬಲ್ಲಳು. ಈ ಕಥಾಸಂಕಲನದ ಮೂಲಕ ಮಂಗಳಾ ಹಚ್ಚಿರುವ ಕತೆಹಣತೆ ಆರದಂತೆ ಕಾಯಲು ಅವರ ಪಾತ್ರಗಳೇ ಸಾಕು!
– ಡಾ.ಅಜೀತ್ ಹರೀಶಿ
ಲೇಖಕರು, ವೈದ್ಯರು. ಹರೀಶಿ

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಹಿನ್ನೀರ ದಂಡೆಯ ಸೀತಾಳೆದಂಡೆ”

Your email address will not be published. Required fields are marked *

Related Products