ವೀರಲೋಕ ಬುಕ್ ಬಾಕ್ಸ್" ಇದು ಸಾಹಿತ್ಯ ಲೋಕದಲ್ಲಿಯೇ ಮೊಟ್ಟಮೊದಲ ಬಾರಿಗೆ ವೀರಲೋಕವು ಓದುಗರಿಗಾಗಿ ಪರಿಚಯಿಸುತ್ತಿರುವ ವಿನೂತನ ಪರಿಕಲ್ಪನೆ. ಇದರ ವಿನ್ಯಾಸ ಮತ್ತು ಪ್ರಚಾರದ ಹಕ್ಕುಗಳು ಕೂಡ ವೀರಲೋಕದ್ದೇ ಆಗಿರುತ್ತದೆ.
ನಾವು ಸಂತೆಗೆ ಹೋದರೆ ಬ್ಯಾಗು ತುಂಬಾ ತರಕಾರಿ ಹಣ್ಣು ಹಂಪಲುಗಳನ್ನು ತುಂಬಿಕೊಂಡು ಬರುತ್ತೇವೆ. ಬಟ್ಟೆ ಅಂಗಡಿಗೆ ಹೋದರೆ ಕವರಿನಲ್ಲಿ ಬಟ್ಟೆಗಳನ್ನು ತುಂಬಿಕೊಂಡು ಬರುತ್ತೇವೆ. ಸ್ವೀಟ್ ಅಂಗಡಿಗಳು, ಹೋಟೆಲ್ ಗಳು, ಮಾಲ್ ಗಳು ಹೀಗೆ ಎಲ್ಲಾ ಕಡೆಯೂ ಅವರ ಉತ್ಪನ್ನಗಳನ್ನು ಗ್ರಾಹಕರಿಗೆ ಸುರಕ್ಷತೆಯಿಂದ ತಲುಪಿಸುವ ಉದ್ದೇಶದಿಂದ ಅವರದೇ ಆದ ಪರಿಕಲ್ಪನೆ ಮತ್ತು ವಿನ್ಯಾಸದಲ್ಲಿ ಬಾಕ್ಸ್ ಗಳನ್ನು ಮಾಡಿರುತ್ತಾರೆ. ಆದರೆ ನಮಗೆ ಜ್ಞಾನವನ್ನು ಸಂಪಾದಿಸಿ ಕೊಡುವ ಪುಸ್ತಕಗಳನ್ನು ಸುರಕ್ಷಿತವಾಗಿ ತಲುಪಿಸಲು ಮತ್ತು ಪ್ರಿಯರಿಗಾಗಿ ಉಡುಗೊರೆ ನೀಡಲು ಬುಕ್ ಬಾಕ್ಸ್ ಎಂಬ ಪರಿಕಲ್ಪನೆಯನ್ನು ಇದುವರೆಗೂ ನೋಡಿರಲಿಲ್ಲ. ಇದೇ ಮೊದಲ ಬಾರಿಗೆ ಅಂಥದ್ದೊಂದು ವಿನೂತನವಾದ ವಿನ್ಯಾಸವನ್ನು ವೀರಲೋಕವು ಓದುಗರಿಗೆ ಪರಿಚಯಿಸುತ್ತಿದೆ
ಬುಕ್ ಬಾಕ್ಸ್ ನ ವಿಶೇಷತೆಗಳು: