ನಾನು ನಿಜವಾಗಿಯೂ ನಿಮ್ಮ ಬರೆಹದ ಭಾಷೆಗೆ ಕರಗಿ ಮಳೆಯಾದೆ. ಒಂದು ಕಥನಕ್ಕೆ ಏನೇನ್ ಬೇಕೋ ಎಲ್ಲಾ ಈ ಕಥನದಲ್ಲಿದೆ. ನಾನ್ ಎಷ್ಟ್ ಥ್ರಿಲ್ ಆಗಿದೀನಿ ಅಂದ್ರೆ. ಬಿಜ್ಜು ತನ್ನ ಕಷ್ಟಕ್ಕೆ ಪರಿಹಾರ ಹುಡುಕುತ್ತಾ ಸ್ನೇಹಿತ ಮುತ್ತುವಿನ ಊರು ತಲುಪೋದು.ಅಲ್ಲಿ ಮುತ್ತುವಿನ ಸುಳಿವೇ ಸಿಗದೇ ಆತನ ಡೈರಿ ಸಿಗುವುದು.ಮುಂದೆ ಡೈರಿಯಲ್ಲಿ ಮೂಡಿಬರುವ ಮುತ್ತುವಿನ ಕಥೆ ಒಂದು ಶುದ್ಧ ಪ್ರೇಮ. ಅವ್ವನ ಮೇಲಿನ ಅಚಲ ಪ್ರೀತಿ, ಬಾಲ್ಯ ಹುಟ್ಟೂರ ಮೇಲಿನ ಅಭಿಮಾನ, ಪುಸ್ತಕ, ಸ್ನೇಹ, ಬೀದಿಬದಿಯ ನಾಯಿಗಳ ಕಾಳಜಿ, ಮೇಷ್ಟ್ರು ಸೇರಿದಂತೆ ಹಲವರ ನಡುವಿನ ಅಸಕ್ತ ಬದುಕ ಬವಣೆಗಳ ಸೊಗಸಾದ ಭಾವಗೀತೆಯಂತೆ ರೂಪುಗೊಂಡಿದೆ ನಿಮ್ಮ ಕಥನ ಹಂದರ.
“ಯೀಟ್ ದಿನ ಕತ್ಲು ಕೋಣ್ಯಾಗೆ ಬುಡ್ಡಿ ದೀಪದ್ ಮಬ್ಬು ಬೆಳ್ಕಲ್ಲಿ ಯಾರ್ ಯಾರಿಗೋ ಸೆರಗಾಸಿ ; ಮೈನ ಅವರಿಗೊಪ್ಸಿದ್ ಕೈಗಳು, ಇವತ್ತು ಕುವೆಂಪು ಸರ್ಕಲ್ನಾಗೆ, ಶಂಕರ್ ನಾಗ್ ಆಟೋ ಸ್ಟಾಂಡ್ ರೋಡ್ನಾಗೆ , ಸಂತ್ಯಾಗಿರೋ ನಾಕ್ ಮಂದಿ ತಾವ್ ನಿಂತು. ಕನ್ನಡ ಪುಸ್ತಕಗಳನ್ನ ಕೈಲಿಡ್ದು “ ಅಣ್ಣೋ ತೇಜಸ್ವಿಯವರ್ದು ಕರ್ವಾಲೋ, ಮಾದ್ಹೇವಣ್ಣಂದು ಎದೆಗೆ ಬಿದ್ದ ಅಕ್ಷರ, ಕುವೆಂಪುರವರದ್ದು ಮಂತ್ರ ಮಾಂಗಲ್ಯ, ಬೇಂದ್ರೆ ಅಜ್ಜಂದು ನಾಕುತಂತಿ. ಇವೆಲ್ಲಾ ಕನ್ನಡ ಪುಸ್ತಕಗಳು ಕಣಣ್ಣ, ಒಂದೇ ಒಂದ್ ಪುಸ್ತಕ ತಗೋ ಬಾ ಅಣ್ಣ, ಬಾರಕ್ಕ, ಸಾರ್, ಮೇಡಂ ಅಂತ ಕೂಗಿ -ಕೂಗಿ ಕರ್ದು, ನಾನಾ ನಮೂನಿ ಕನ್ನಡ ಸಾಹಿತ್ಯ ಪುಸ್ತಕಗಳನ್ನ ಮಾರಿ ಇಂದು ಬದ್ಕ ಕಟ್ಕೊಂಡಿವ್ನಿ. ಅವತ್ ನಾನು ಸೂಳೆ ದಿಟ, ಆದ್ರೆ ಇವತ್ ನಾನ್ ಸೂಳೆ ಅಲ್ಲ ಕನ್ರಪ್ಪೋ ಅಂತ ನಿರೂಪಿಸೀವ್ನಿ. ವೇಶ್ಯೆ ಅನ್ನೋ ಹಳೇ ನೀರು ಹರಿದೋಗಿ, ಹೊಸ ಹೆಣ್ಣಾಗಿ ಕನ್ನಡ ಪುಸ್ತಕಗಳ ಹೊಳೇಲಿ ತೇಲ್ತೀವ್ನಿ.” ಒಂದು ಪುಸ್ತಕ ಒಂದು ಬದಲಾವಣೆಗೆ ಕಾರಣವಾಗುತ್ತೆ, ಕಲ್ಲೆದೆಯಲ್ಲೂ ಭಾವನೆಗಳ ನೀರುಕ್ಕಿಸುವ ಕೆಲಸ ಕೆಲವು ಪುಸ್ತಕಗಳು ಮಾಡ್ತವೆ. ಈಗಿನ ಕಾಲದಲ್ಲಿ, ಕೈಲಿ ಪುಸ್ತಕಗಳನ್ನಿಡಿಯೋ ಬದಲು ಮೊಬೈಲ್ಗಳನ್ನ ಹಿಡಿಯೋ ಕೈಗಳೆ ಹೆಚ್ಚಿರುವಾಗ, ನೀನು ಪುಸ್ತಕಗಳನ್ನ ಮಾರಿ ಬದುಕ್ತಿನಿ ಅಂತಿದೀಯ