ವಿಜಯಭಾಸ್ಕರ್ ಸಂಗೀತ ನಿರ್ದೇಶನಕ್ಕೆ ಘನತೆ, ಗೌರವಗಳನ್ನು ತಂದವರು. ನಾನು ಅವರು ಚಿತ್ರರಂಗ ಪ್ರವೇಶಿಸಿದ ದಿನಗಳಿಂದಲೂ ಅವರ ಕಾರ್ಯ ವೈಖರಿಯನ್ನು ನೋಡುತ್ತಾ ಬಂದಿದ್ದೇನೆ, ಅವರು ಕೆಲಸವನ್ನು ಅರಸುತ್ತಿರುವ ಸಂದರ್ಭದಲ್ಲಿಯೂ ನೋಡಿದ್ದೇನೆ, ಕೈತುಂಬಾ ಕೆಲಸ ಇದ್ದ ಕಾಲದಲ್ಲಿಯೂ ನೋಡಿದ್ದೇನೆ. ಸ್ಥಿತಪ್ರಜ್ಞ ಸಾಧಕರು, ಚಿತ್ರಕ್ಕೆ ಏನು ಬೇಕು ಎನ್ನುವುದರ ಕಡೆಗೆ ಸದಾ ಅವರ ಚಿತ್ತ ಇರುತ್ತಿತ್ತು. ಸಂಗೀತವನ್ನು ಎಷ್ಟು ಆಳವಾಗಿ ಬಲ್ಲರೋ, ಸಾಹಿತ್ಯವನ್ನೂ ಕೂಡ ಅಷ್ಟೇ ಆಳವಾಗಿ ತಿಳಿದವರು. ಚಿತ್ರದ ಅಗತ್ಯವನ್ನು ಅರಿತು ಸಂಗೀತವನ್ನು ನೀಡುತ್ತಿದ್ದರು. ಹಾಡನ್ನು ರಂಜಕೀಯವಾಗಿಸುವುದು ಎಂದಿಗೂ ಅವರ ಉದ್ದೇಶವಾಗಿರಲಿಲ್ಲ. ಅದು ಕಥೆಯ ಹಂದರದಲ್ಲಿ ಸೇರಬೇಕು, ಪಾತ್ರದ ಅಭಿವ್ಯಕ್ತಿಯಾಗಬೇಕು, ಜನರ ಮನದಲ್ಲಿ ಉಳಿದುಕೊಳ್ಳಬೇಕು ಎನ್ನುವುದನ್ನು ಸದಾ ಚಿಂತಿಸುತ್ತಿದ್ದರು, ಹೀಗಾಗಿ ಅವರು ಸೃಷ್ಟಿಸಿದ ಗೀತೆಗಳು ಇಂದಿಗೂ ಅಮರವಾಗಿ ಉಳಿದಿವೆ. ವಿಜಯಭಾಸ್ಕರ್ ಕನ್ನಡಕ್ಕೆ ಟೈಟಲ್ ಕಾರ್ಡ್ ತೋರಿಸುವಲ್ಲಿ ಹೊಸತನ ತಂದರು, ಥೀಂ ಮ್ಯೂಸಿಕ್ ತಂದರು, ಶಾಟ್ ಡಿವಿಷನ್ಗಳನ್ನು ತಂದರು, ಹೊಸ ವಾದ್ಯಗಳನ್ನು ಬಳಸಿದರು, ಬಹಳ ಮುಖ್ಯವಾಗಿ ಕನ್ನಡದ ಗಾಯಕರನ್ನು ಹುಡುಕಿ ಅವರ ಬಳಿ ಹಾಡಿಸಿದರು. ವಿಜಯಭಾಸ್ಕರ್ ಇದ್ದಲ್ಲಿ ಹೊಸತನ ಮತ್ತು ಪ್ರಯೋಗಶೀಲತೆ ಇದ್ದೇ ಇರುತ್ತಿತ್ತು. ಹೀಗಾಗಿ ಅವರು ವ್ಯಾಪಾರಿ ಚಿತ್ರಗಳಂತೆ ಕಲಾತ್ಮಕ ಚಿತ್ರಗಳಿಗೂ ವರದಾನವಾದರು. ವಿಜಯಭಾಸ್ಕರ್ ಗೀತ ರಚನೆಕಾರರ, ಸಂಗೀತ ನಿರ್ದೇಶಕರ ಹಕ್ಕುಗಳಿಗೆ ಹೋರಾಡಿದರು, ಈ ಹೋರಾಟದಲ್ಲಿ ಅವರ ತತ್ಪರತೆಯನ್ನು ನಾನು ಹತ್ತಿರದಿಂದ ಕಂಡಿದ್ದೇನೆ, 'ಸಿನಿ' ಮ್ಯೂಸಿಷಿಯನ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಅವರು ವಾದ್ಯಗಾರರ ಅಭ್ಯುದಯಕ್ಕೆ ಶ್ರಮಿಸಿದರು. ವಿಜಯಭಾಸ್ಕರ್ ನಿಜವಾದ ಅರ್ಥದಲ್ಲಿ ಶಕಪುರುಷರು. - ಆರ್.ಎನ್.ಜಯಗೋಪಾಲ್.
ವಿಜಯಭಾಸ್ಕರ್ ಸಂಗೀತ ನಿರ್ದೇಶನಕ್ಕೇ ಘನತೆ, ಗೌರವಗಳನ್ನು ತಂದವರು. ನಾನು ಅವರು ಚಿತ್ರರಂಗ ಪ್ರವೇಶಿಸಿದ ದಿನಗಳಿಂದಲೂ ಅವರ ಕಾರ್ಯ ವೈಖರಿಯನ್ನು ನೋಡುತ್ತಾ ಬಂದಿದ್ದೇನೆ, ಅವರು ಕೆಲಸವನ್ನು ಅರಸುತ್ತಿರುವ ಸಂದರ್ಭದಲ್ಲಿಯೂ ನೋಡಿದ್ದೇನೆ, ಕೈತುಂಬಾ ಕೆಲಸ ಇದ್ದ ಕಾಲದಲ್ಲಿಯೂ ನೋಡಿದ್ದೇನೆ. ಸ್ಥಿತಪ್ರಜ್ಞ ಸಾಧಕರು, ಚಿತ್ರಕ್ಕೆ ಏನು ಬೇಕು ಎನ್ನುವುದರ ಕಡೆಗೆ ಸದಾ ಅವರ ಚಿತ್ತ ಇರುತ್ತಿತ್ತು. ಸಂಗೀತವನ್ನು ಎಷ್ಟು ಆಳವಾಗಿ ಬಲ್ಲರೋ, ಸಾಹಿತ್ಯವನ್ನೂ ಕೂಡ ಅಷ್ಟೇ ಆಳವಾಗಿ ತಿಳಿದವರು. ಚಿತ್ರದ ಅಗತ್ಯವನ್ನು ಅರಿತು ಸಂಗೀತವನ್ನು ನೀಡುತ್ತಿದ್ದರು. ಹಾಡನ್ನು ರಂಜಕೀಯವಾಗಿಸುವುದು ಎಂದಿಗೂ ಅವರ ಉದ್ದೇಶವಾಗಿರಲಿಲ್ಲ. ಅದು ಕಥೆಯ ಹಂದರದಲ್ಲಿ ಸೇರಬೇಕು, ಪಾತ್ರದ ಅಭಿವ್ಯಕ್ತಿಯಾಗಬೇಕು, ಜನರ ಮನದಲ್ಲಿ ಉಳಿದುಕೊಳ್ಳಬೇಕು ಎನ್ನುವುದನ್ನು ಸದಾ ಚಿಂತಿಸುತ್ತಿದ್ದರು, ಹೀಗಾಗಿ ಅವರು ಸೃಷ್ಟಿಸಿದ ಗೀತೆಗಳು ಇಂದಿಗೂ ಅಮರವಾಗಿ ಉಳಿದಿವೆ. ವಿಜಯಭಾಸ್ಕರ್ ಕನ್ನಡಕ್ಕೆ ಟೈಟಲ್ ಕಾರ್ಡ್ ತೋರಿಸುವಲ್ಲಿ ಹೊಸತನ ತಂದರು, ಥೀಂ ಮ್ಯೂಸಿಕ್ ತಂದರು, ಶಾಟ್ ಡಿವಿಷನ್ಗಳನ್ನು ತಂದರು, ಹೊಸ ವಾದ್ಯಗಳನ್ನು ಬಳಸಿದರು, ಬಹಳ ಮುಖ್ಯವಾಗಿ ಕನ್ನಡದ ಗಾಯಕರನ್ನು ಹುಡುಕಿ ಅವರ ಬಳಿ ಹಾಡಿಸಿದರು. ವಿಜಯಭಾಸ್ಕರ್ ಇದ್ದಲ್ಲಿ ಹೊಸತನ ಮತ್ತು ಪ್ರಯೋಗಶೀಲತೆ ಇದ್ದೇ ಇರುತ್ತಿತ್ತು. ಹೀಗಾಗಿ ಅವರು ವ್ಯಾಪಾರಿ ಚಿತ್ರಗಳಂತೆ ಕಲಾತ್ಮಕ ಚಿತ್ರಗಳಿಗೂ ವರದಾನವಾದರು. ವಿಜಯಭಾಸ್ಕರ್ ಗೀತ ರಚನೆಕಾರರ, ಸಂಗೀತ ನಿರ್ದೇಶಕರ ಹಕ್ಕುಗಳಿಗೆ ಹೋರಾಡಿದರು, ಈ ಹೋರಾಟದಲ್ಲಿ ಅವರ ತತ್ಪರತೆಯನ್ನು ನಾನು ಹತ್ತಿರದಿಂದ ಕಂಡಿದ್ದೇನೆ, 'ಸಿನಿ ಮ್ಯೂಸಿಷಿಯನ್ಸ್ ಅಸೋಸಿಯೇಷನ್' ಅಧ್ಯಕ್ಷರಾಗಿ ಅವರು ವಾದ್ಯಗಾರರ ಅಭ್ಯುದಯಕ್ಕೆ ಶ್ರಮಿಸಿದರು. ವಿಜಯಭಾಸ್ಕರ್ ನಿಜವಾದ ಅರ್ಥದಲ್ಲಿ ಶಕಪುರುಷರು.
nil
#
ರಾತ್ರಿ ಅಗಸ ನೋಡುತ್ತಾ ಮಲಗಿದ್ದ ಶ್ರೀಲಕ್ಷ್ಮಿ ತಂದೆಗೆ ದಿಢೀರೆಂದು ಪ್ರಶ್ನೆ ಹಾಕಿದಳು. 'ಪಪ್ಪಾ, ಭೂಮಿ ದುಂಡಾಗಿರುವುದರಿಂದ ತಿರುಗುತ್ತಿದೆ. ಒಂದು ವೇಳೆ ಚಪ್ಪಟೆಯಾಗಿದ್ದರೆ ತಿರುಗುತ್ತಿತ್ತೇ? ಭೂಮಿ ಚಪ್ಪಟೆಯಾಗಿದ್ದರೆ ಏನೆಲ್ಲಾ ಬದಲಾವಣೆಗಳು ಆಗುತ್ತಿದ್ದವು?' ಎಂದು ಪ್ರಶ್ನಿಸಿದಳು. ರಾತ್ರಿ ಹಾಲಿವುಡ್ ಸಿನಿಮಾ ನೋಡಿದ ಸಿಂಧು ತಡವಾಗಿ ಮಲಗಿದಳು. ಸಿನಿಮಾ ಗುಂಗಿನಲ್ಲೇ ಮಲಗಿದ್ದರಿಂದ ಯಾವುದೋ ಆಕಾಶಕಾಯವೊಂದು ಭೂಮಿಗೆ ಅಪ್ಪಳಿಸಿದಂತೆ, ಭೂಮಿಯು ಓಲಾಡಿದಂತೆ ಕನಸು ಕಾಣುತ್ತಾ ಮಂಚದಿಂದ ದೊಪ್ಪನೆ ಕೆಳಕ್ಕೆ ಬಿದ್ದಳು. ಎಚ್ಚರಗೊಂಡು ವ್ಯಾಯಾಮದಲ್ಲಿ ನಿರತರಾದ ತಂದೆಗೆ 'ಪಪ್ಪಾ ಕ್ಷುದ್ರಗ್ರಹಗಳೆಂದರೇನು? ಅವು ಭೂಮಿಗೆ ಬಡಿದರೆ ಏನಾಗುತ್ತೆ?' ಎಂದು ಕೇಳಿದಳು. 'ತಾತ, ನಮ್ಮ ಭೂಮಿಯ ಜನಸಂಖ್ಯೆ ಹೆಚ್ಚಾಗುತ್ತಿರುವುದರಿಂದ ವಸತಿಗಾಗಿ ಇನ್ನೊಂದು ಗ್ರಹವನ್ನು ಹುಡುಕುತ್ತಿದ್ದಾರಂತೆ. ಇನ್ನೊಂದು ಗ್ರಹ ಹುಡುಕುವ ಬದಲು ಕೃತಕ ಗ್ರಹವನ್ನೇ ಸೃಷ್ಟಿಸಿದರೆ ಏನಾಗುತ್ತೆ?' ಎಂದನು. ಇಂತಹ ಅನೇಕ ತರ್ಲೆ ಪ್ರಶ್ನೆಗಳು ನಿಮಗೆ ಬಂದಿವೆಯಾ? ಅವುಗಳಿಗೆ ಉತ್ತರ ಸಿಕ್ಕಿದೆಯಾ? ಸಿಕ್ಕಿಲ್ಲ ಎಂದಾದರೆ 'ಏನಾಗುತ್ತೆ ಗುರು?' ಎಂಬ ಪುಸ್ತಕ ಖಂಡಿತ ನಿಮ್ಮ ತರ್ಲೆ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ. ಇವುಗಳಲ್ಲದೇ ಭೂಮಿಗೆ ಉಂಗುರಗಳಿದ್ದರೆ?, ಬಾಹ್ಯಾಕಾಶಕ್ಕೆ ಎಲಿವೇಟರ್ ನಿರ್ಮಿಸಿದರೆ?, ಕನಸುಗಳನ್ನು ರೆಕಾರ್ಡ್ ಮಾಡುವಂತಿದ್ದರೆ? ಮನುಷ್ಯರು ಬಾಹ್ಯಾಕಾಶದಲ್ಲಿ ಜನಿಸಿದರೆ? ಸಾಗರಗಳು ಪಾರದರ್ಶಕವಾಗಿದ್ದರೆ? ನಿಮ್ಮ ಊಹಾತ್ಮಕ ಪ್ರಶ್ನೆಗಳಿಗೆ ತಾರ್ಕಿಕ ಉತ್ತರ ಸಿಗುವ ಪುಸ್ತಕ ಏನಾಗುತ್ತೆ ಗುರು?. ಇದರಲ್ಲಿ ಕೌತುಕವಿದೆ. ತರ್ಕವಿದೆ. ವಿಜ್ಞಾನವಿದೆ.
Showing 751 to 780 of 5190 results