nil
#
NA
ಎವಿ ನಾಗರಾಜ್ ಯಾದವ್
ಆನೆ ಬಂತೊಂದಾನೆ. ಯಾವೂರಾನೆ? ಇಲ್ಲಿಗ್ಯಾಕೆ ಬಂತು? ತಾಯಿ ಹುಡುಕಿಕೊಂಡು ಬಂತು. ತಾಯಿ ಸಿಗದೆ ಬೇಜಾರಾಗಿ, ಬಾಲ ಅಲ್ಲಾಡಿಸ್ಕೊಂಡು ಆಯ್ತು ಎನ್ನುವ ಶಿಶುಗೀತೆಯ ಎನ್ನುವ ಶಿಶುಗೀತೆಯನ್ನು ಗುಣುಗುಡುತ್ತಾ "ಭೈರ" ಎಂಬ ಈ ಮಕ್ಕಳ ಕಾದಂಬರಿ "ಭೈರಾಪುರ"ದ ಆನೆಯ ಹಿಂಡಿನ ಸುತ್ತಮುತ್ತ ಹೆಣೆದಿರುವ ಕಥಾನಕವಿದು. ನಮ್ಮ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಭೈರಾಪುರ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಯಾವಾಗಲೂ ಆನೆಗಳ ಹಿಂಡಿನ ಹಾವಳಿಯ ಕಥೆಯನ್ನು ಆಧಾರವಾಗಿಟ್ಟುಕೊಂಡು ಕಂಚುಗಾರನಹಳ್ಳಿ ಸತೀಶ್ ಪರಿಸರ ಕಾಳಜಿಯುಳ್ಳ ಕಾದಂಬರಿಯನ್ನು ಹೊರತಂದಿದ್ದಾರೆ.
ಮಕ್ಕಳು ದೇಶದ ಸಂಪತ್ತು, ಯುವಕರು ದೇಶದ ಮಹಾನ್ ಶಕ್ತಿ ಹಾಗೂ ಹಿರಿಯರು ದೇಶದ ಅಮೂಲ್ಯ ಅನುಭವ, ಈ ತ್ರಿವೇಣಿ ಸಂಗಮ ದೇಶದ ಪ್ರಗತಿಗೆ, ಅಭಿವೃದ್ಧಿಗೆ, ಸರ್ವರ ಸುರಕ್ಷತೆಗೆ ಮತ್ತು ಜಾತಿ-ಧರ್ಮ, ಪ್ರದೇಶ-ಭಾಷೆ ಮತ್ತು ಎಲ್ಲ ವರ್ಗಗಳ ನಡುವೆ ಪರಸ್ಪರ ಸೌಹಾರ್ದತೆ ಹಾಗೂ ಸಹಿಷ್ಣುತೆಗೆ ಅತ್ಯಂತ ಮಹತ್ವದ ಕೊಡುಗೆ ಆಗಬಲ್ಲದು. ಯಾವುದೇ ನಾಗರಿಕ ಸಮಾಜ ಅಥವಾ ದೇಶ ಶಿಕ್ಷಣಕ್ಷೇತ್ರವನ್ನು ನಿರ್ಲಕ್ಷಿಸುವಂತಿಲ್ಲ. ಹಾಗೇನಾದರೂ ಮಾಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಮಕ್ಕಳು ದೇಶದ ಬುನಾದಿ-ಭವಿಷ್ಯ ಎಂದ ಮೇಲೆ ಅವರನ್ನು ನಿರ್ಲಕ್ಷಿಸಿದರೆ ಅಥವಾ ಯೋಗ್ಯ ಶಿಕ್ಷಣ ಕೊಡದಿದ್ದರೆ ದೇಶದ ಭವಿಷ್ಯವನ್ನೇ ಕಡೆಗಣಿಸಿದಂತಾಗುತ್ತದೆ ಎಂಬುದು ಸಂಬಂಧಪಟ್ಟ ಎಲ್ಲರಿಗೂ, ಅದರಲ್ಲೂ ಮಕ್ಕಳ ಪಾಲಕರಿಗೆ/ಪೋಷಕರಿಗೆ ಮನದಟ್ಟಾಗಬೇಕು. ಕಾರಣ "ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಅಸ್ತಿಯನ್ನಾಗಿ ಮಾಡುವುದು ಮೇಲು" ಹಾಗಾದಾಗ ಅವರು ಸ್ವತಃ, ಹೆತ್ತವರಿಗೆ, ಸಮಾಜಕ್ಕೆ ಹಾಗೂ ದೇಶಕ್ಕೆ ಆಸ್ತಿಯಾಗುತ್ತಾರೆ. ಮಕ್ಕಳ ಶಿಕ್ಷಣಕ್ಕಾಗಿ ಖರ್ಚು ಮಾಡುವುದು ವ್ಯರ್ಥ ಖರ್ಚು ಅಲ್ಲ, ಅದು ಗುಣಮಟ್ಟದ ವಿದ್ಯಾಭ್ಯಾಸದಲ್ಲಿ ಮಾಡುವ ಸದ್ವಿನಿಯೋಗ. ಈ ನಿಟ್ಟಿನಲ್ಲಿ ತಂದೆ-ತಾಯಿಗಳು, ಪಾಲಕರು-ಪೋಷಕರು, ಗುಣಮಟ್ಟ ಹೊಂದಿದ ಶಾಲಾ ಕಾಲೇಜುಗಳು, ಉತ್ತಮ ಶಿಕ್ಷಣ ಸಂಸ್ಥೆಗಳು ಮತ್ತು ಸಮರ್ಥ ಶಿಕ್ಷಕರು ಮಹತ್ವದ ಪಾತ್ರಗಳನ್ನು ನಿರ್ವಹಿಸಬೇಕಾಗುತ್ತದೆ. ಪ್ರಜ್ಞಾವಂತ ಪ್ರಜೆ ಮತ್ತು ಜವಾಬ್ದಾರಿ ನಾಗರಿಕರನ್ನಾಗಿ ಮಾಡುವ ಶಾಲಾ ಕಾಲೇಜುಗಳ ಸಂಖ್ಯೆ ಕಡಿಮೆ, ಆದುದರಿಂದ ಈ ಸಂಖ್ಯೆ ಬೆಳೆಯಬೇಕು, ಆಗ ಒಳ್ಳೆಯವರ ಸಂಖ್ಯೆ ಬೆಳೆಯುತ್ತದೆ. ಹಾಗಾದಾಗ ದೇಶದ ಒಳಿತಾಗುತ್ತದೆ. - ನ್ಯಾಯಮೂರ್ತಿ ಡಾ. ಶಿವರಾಜ. ವಿ. ಪಾಟೀಲ್.
ಇಂದಿನ ಮಕ್ಕಳಿಗೆ ಓದಿನ ರುಚಿ ಹತ್ತಿಸಿಬಿಟ್ಟರೆ, ಮುಂದಿನ ಎರಡು ತಲೆಮಾರುಗಳಿಗೆ ಓದುಗರ ಕೊರತೆ ಇರುವುದಿಲ್ಲ. -ವೀರಕಪುತ್ರ ಶ್ರೀನಿವಾಸ
Showing 2131 to 2160 of 3316 results