#
nil
ನಾವು ಬದುಕನ್ನು ನೋಡುವ ರೀತಿ ಬದಲಿಸಿಕೊಂಡರೆ ಸಾಕು, ನಮಗೆ ಬಹಳಷ್ಟು ವಿಷಯಗಳು ಸಹ್ಯವಾಗುತ್ತವೆ. ಮನಸ್ಸಿನಲ್ಲಿದ್ದ ದುಃಖ, ದುಮ್ಮಾನಗಳು ಮರೆಯಾಗುತ್ತವೆ. ನಾನು ಬದುಕಿನಲ್ಲಿ ಎಂದಿಗೂ ಪರ್ಫೆಕ್ಷನ್ ಹುಡುಕಿದವನಲ್ಲ. ಏಕೆಂದರೆ ಇದು ಪರ್ಫೆಕ್ಟ್ ಎಂದು ಸರ್ಟಿಫಿಕೇಟ್ ಕೊಡುವವರು ಯಾರು? ಅದೇ ಪರ್ಫೆಕ್ಟ್ ಎನ್ನುವುದಕ್ಕೆ ಪುರಾವೆಯಾದರೂ ಏನಿದೆ? ಅಲ್ಲದೆ ಈ ಪರ್ಫೆಕ್ಟ್ ಎನ್ನುವುದು ಟೈಮ್ ಸೆನ್ಸಿಟಿವ್ ವಿಷಯ. ಇಂದು, ಈಗ ಪರ್ಫೆಕ್ಟ್ ಎನ್ನಿಸಿದ್ದು ಮರುಘಳಿಗೆ ಬದಲಾಗಿರಬಹುದಲ್ವಾ? ಸೃಷ್ಟಿಯಲ್ಲಿ ಯಾವುದೂ ಪೂರ್ಣವೂ ಅಲ್ಲ, ಯಾವುದೂ ಅಪೂರ್ಣವೂ ಅಲ್ಲ. ಪೂರ್ಣದ ತೃಣ ಅಪೂರ್ಣ, ಆದರೂ ತನ್ನ ಪರಿಧಿಯಲ್ಲಿ ಪೂರ್ಣ ಕೂಡ ಹೌದಲ್ಲ! ಸೃಷ್ಟಿಯಲ್ಲಿ “imperfect, impermanent and incomplete” ಅಷ್ಟೆ ಸತ್ಯ. ಹೀಗೆ ಪ್ರಕೃತಿಯಲ್ಲಿ ಇದ್ದದ್ದು ಇದ್ದಹಾಗೆ ನೋಡುವ ಪರಿಪಾಠಕ್ಕೆ ಜಪಾನೀಯರು `ವಾಬಿ ಸಬಿ' ಎನ್ನುತ್ತಾರೆ. ಜಪಾನ್ ಪ್ರವಾಸ ನನ್ನ ಹಲವಾರು ನಂಬಿಕೆಗಳಿಗೆ ನೀರೆರೆದಿದೆ. ಬದುಕೆಂದರೆ ಅದೊಂದು Endless Discovery!
"ಆ ಜಡೆಮುನಿ ಇದ್ಯಲ್ಲ, ಅದು ರಾತ್ರಿಹೊತ್ತು ಮಾತ್ರ ಓಡಾಡೋ ಪಿಶಾಚಿ. ಮಧ್ಯರಾತ್ರಿ ಕಾಡುದಾರಿಯಲ್ಲಿ ಜಡೆಮುನಿಯು ಮುಂದೆ ನಡೆದು ಹೋಗ್ತಿದ್ರೆ ಅದರ ಹಿಂದೆ ಕೊಳ್ಳಿದೆವ್ವಗಳು ಆ ಜಡೆಮುನಿಯ ಕಿಲೋಮೀಟರಿನಷ್ಟು ಉದ್ದದ ಜಡೆಯನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಹೋಗ್ತಿದ್ವು ಅಂತ ನಮ್ಮ ಅಜ್ಜಂದಿರು ಹೇಳ್ತಿದ್ರು. ಹಾಗೇ ನಾವು ಆ ಜಡೆಮುನಿದೇನಾದ್ರೂ ಒಂದು ಕೂದಲು ಕಿತ್ಕೋಂಡ್ರು ಸಾಕು, ಕೇಳಿದ್ದನ್ನೇಲ್ಲಾ ಅದು ಕೊಡುತ್ತಂತೆ. ಅಕಸ್ಮಾತ್ ಹೀಗೆ ಕೂದ್ಲು ಕೀಳೇಕಾದ್ರೇ ಏನಾದ್ರೂ ಅದರ ಕಣ್ಣಿಗೆ ಬಿದ್ವಿ ಅನ್ಕೋ, ಮುಗಿತು ಅವರ ಕತೆ. ಅವರುಗಳು ಅಲ್ಲೇ ರಕ್ತ ಕಾರ್ಕೊಂಡು ಸಾಯ್ತಿದ್ರಂತೆ. ಹೀಗೆ ಸತ್ತವರ ಹಸಿ ಮಾಂಸವೇ ಅದರ ಶಿಷ್ಯಂದಿರಾದ ಕೊಳ್ಳದೆವ್ವಗಳಿಗೆ ಊಟವಂತೆ! ಹೀಗೆ ಪ್ರತಿರಾತ್ರಿ ಊರನ್ನ ಸುತ್ತುಹಾಕಿ ನಂತರ ಅಲ್ಲಿನ ಕೆರೆಯಲ್ಲಿ ಸ್ನಾನ ಮಾಡಿ ಹೋಗುವ ಜಡೆಮುನಿಯನ್ನ ನಾವು ನೋಡ್ಬೋದು ಆದ್ರೆ ಅದು ನೋಡುವ ಹಾಗಿಲ್ಲ. ಹಾಗೆ ಅದರ ಕಣ್ಣಿಗೆ ಸಿಕ್ಕಿ ಸತ್ತವರಿಗೆ ಲೆಕ್ಕಾನೇ ಇಲ್ಲಂತೆ. ರಾತ್ರಿ ಹೊತ್ತು ಏನೋ ಭಯಂಕರ ಸದ್ದಾಗಿ, ಬೆಳಗೆದ್ದು ನೋಡಿದಾಗ ಮನೆಯೆದುರು ಒಣಗಿ ಹಾಕಿದ್ದ ಕಾಫಿ ಬೀಜಗಳ ರಾಶಿಯ ಮೇಲೆ ಅದರ ಜಡೆಯಿಂದಾದ ಗುರುತುಗಳಿರುತ್ತಿತ್ತು ಅಂತ ಊರೋರು ಹೇಳ್ತಿದ್ರು. ಹಾಗೇ ರಾತ್ರಿ ಹೊತ್ತು ಶಿಕಾರಿಗೆಂದು ಹೋದವರಿಗೆ ಆ ಜಡೆಮುನಿ ದೈಯ್ಯವು ಮೈಗತ್ತಿ ನಂತರ ಅವರುಗಳು ಸುಮಾರು ದಿನಗಳ ಕಾಲ ಊಟ - ನಿದ್ರೆ ಇಲ್ದೆ ಬದುಕಿ ನಂತರ ಅದು ಮೈಯಿಂದ ಬಿಟ್ಟೋದ್ಮೇಲೆ ರಕ್ತ ಕಾರ್ಕೊಂಡು ಸತ್ತೋಗ್ತಿದ್ರಂತೆ!!" ಎಂದು ಶೇಷಜ್ಜನು ತಾನು ಚಿಕ್ಕಂದಿನಲ್ಲಿ ಕೇಳಿದ್ದ ಕತೆಯನ್ನು ರೋಚಕವಾಗಿ ಹೇಳಿ ಮುಗಿಸುತ್ತಲೇ ಇತ್ತ ತದೇಕಚಿತ್ತದಿಂದ ಕತೆಯನ್ನು ಆಲಿಸುತ್ತಿದ್ದ ಗೌಡರ ಮಗಳಾದ ನಯನಳ ತಲೆತುಂಬಾ ಜಡೆಮುನಿಯೇ ತುಂಬಿತ್ತು. ಜೊತೆಗೆ ಇತ್ತ 'ಜಡೆಮುನಿ'' ಕಾಟದಿಂದ ಬೇಸತ್ತಿದ್ದ ಜಮಲಾಪುರದ ಜನರ ತಲೆಯಲ್ಲೂ ಕೂಡ!
`ಜರ್ನಿ ಆಫ್ ಜ್ಯೋತಿ’ ಜ್ಯೋತಿ ಎಸ್ ಅವರ ಅಂಕಣ ಬರಹಗಳ ಸಂಕಲನವಾಗಿದೆ. ಈ ಕೃತಿಯ ಕುರಿತು ಎಚ್.ಎಸ್. ಸತ್ಯನಾರಾಯಣ ಅವರು ಹೀಗೆ ಹೇಳಿದ್ದಾರೆ; ಇಲ್ಲಿ ಬಣ್ಣಬಣ್ಣದ ಚಿತ್ರಗಳನ್ನು ರಚಿಸಿಯೂ ಬದುಕಿನ ಬಣ್ಣ ಕಳೆದುಕೊಂಡು ಹೆಣಗಾಡುತ್ತಿರುವ, ಆದರೆ ಜೀವನೋತ್ಸಾಹವನ್ನು ಕುಂದಿಸಿಕೊಳ್ಳದ ಚಿತ್ರ ಕಲಾವಿದರಿದ್ದಾರೆ, ಛಾಯಾಗ್ರಾಹಕರಿದ್ದಾರೆ, ಬೀದಿ ಬದಿಯ ವ್ಯಾಪಾರಿಗಳಿದ್ದಾರೆ, ರಂಗಭೂಮಿ-ತೊಗಲುಬೊಂಬೆಯಾಟದ ಕಲಾವಿದರಿದ್ದಾರೆ, ಸಮಾಜಸೇವೆಯಲ್ಲಿ ಬದುಕಿನ ಸಾರ್ಥಕತೆಯನ್ನು ಅನುಭವಿಸುತ್ತಿರುವ ಹೆಣ್ಣುಮಕ್ಕಳಿದ್ದಾರೆ, ಅನಾಥ ಹೆಣಗಳನ್ನು ಹುಡುಕಿತಂದು ಅವಕ್ಕೆ ಗೌರವದಿಂದ ಶವಸಂಸ್ಕಾರ ಮಾಡುವವರಿದ್ದಾರೆ, ಸಾಹಸಿ ಕೃಷಿಕರಿದ್ದಾರೆ, ಮಣ್ಣಿನ ಆಭರಣಗಳನ್ನು ತಯಾರಿಸುವವರಿದ್ದಾರೆ, ಭಿಕ್ಷೆಬೇಡುವ ಸಮುದಾಯದವರಿದ್ದಾರೆ, ತೃತೀಯ ಲಿಂಗಿಗಳಿದ್ದಾರೆ, ದೈಹಿಕ ನ್ಯೂನತೆಯ ನಡುವೆಯೂ ಬದುಕುವ ಹಕ್ಕನ್ನು ಸಾರ್ಥಕಗೊಳಿಸಿಕೊಂಡವರಿದ್ದಾರೆ, ಕೊಳಲುಗಳನ್ನು ತಯಾರಿಸಿ, ಅದನ್ನು ನುಡಿಸುತ್ತಾ ಮಾರುವ ಸಹೋದರರಿದ್ದಾರೆ, ಮಸಣದಲ್ಲಿ ಬದುಕು ನಡೆಸುವ ವೀರಬಾಹುಗಳಿದ್ದಾರೆ, ಸಾವನ್ನು ಗೆದ್ದವರಿದ್ದಾರೆ, ಅವಮಾನಗೊಂಡಲ್ಲೇ ಎತ್ತರಕ್ಕೆ ಬೆಳೆದು ನಿಲ್ಲಬೇಕೆಂಬ ಕನಸುಗಣ್ಣಿನವರಿದ್ದಾರೆ, ಕೌದಿ ಹೊಲಿದು ಮಾರುವವರಿದ್ದಾರೆ, ಇತ್ತೀಚೆಗೆ ಅಸುನೀಗಿದ ಅರ್ಜುನನೆಂಬ ಆನೆಯ ಮಾವುತರಿದ್ದಾರೆ, ಸೂಪರ್ ಕಾಪ್, ಲೇಖಕರು, ಕ್ರೀಡಾಪಟುಗಳು ಎಲ್ಲರೂ ಇದ್ದಾರೆ. ಪುಸ್ತಕವನ್ನು ಅವಲೋಕಿಸಿದವರಿಗೆ ಇಂತಹ ಹತ್ತು ಹಲವಾರು ಚೇತನಗಳು ಎದುರಾಗುತ್ತವೆ. ಇವೆಲ್ಲವೂ ಲೇಖಕಿಯ ಆಸಕ್ತಿಯ ಫಲವಾಗಿ ಪುಸ್ತಕದಲ್ಲಿ ಕಾಣಬರುವ ಸಾಹಸಮಯ ವ್ಯಕ್ತಿಚಿತ್ರಗಳು. ಬದುಕಿನಲ್ಲಿ ಬದುಕು ಗೆದ್ದ ‘ರಿಯಲ್ ಹೀರೋ’ಗಳು!
ಕೆ ಸಿ ಶಿವರಾಮ್
Showing 1111 to 1140 of 3313 results