• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
back

Publishers

Categories

Sub Categories

Authors

Languages

Book Type

Clear All
Filter
ಕತೆ ಜಾರಿಯಲ್ಲಿರಲಿ | kate jaariyallirali

ಸೋ ಕಾಲ್ಡ್ ಇನ್‌ಕ್ಲೂಸಿವ್‌ನೆಸ್ಸಿನ, ಎಜುಕೇಟೆಡ್ ಸೊಸೈಟಿಯ ಡ್ರಾಮಾ ಅಲ್ಲವಾ ಇದೆಲ್ಲ..? ಗೋ ಫ್ಲ್ಯಾಟ್ ಫೋಟೋಶೂಟಂತೆ! ಕ್ಲೀವೇಜ್ ತೋರಿಸುವ ಡ್ರೆಸ್ ಹಾಕಿದಾಗಲೆಲ್ಲ ಎಷ್ಟುಬಾರಿ ಕಾಂಪ್ಲಿಮೆಂಟ್ ಕೊಟ್ಟಿಲ್ಲ ನೀನು!” ಕಳ್ಳನನ್ನು ಹಿಡಿದಂತೆ ಮಾತಾಡಿದಳು. ಥತ್! ನನ್ನನ್ನ ಡೈಲೆಮಾದಲ್ಲಿ ಹಾಕುತ್ತಿದ್ದಾಳಲ್ಲ ಇವಳು ಎನ್ನಿಸಿತು. -'ಸೀಕ್ರೆಟ್ ಸ್ಯಾಂಟಾ' ಕತೆಯಿಂದ ಮಗುವನ್ನು ಆಸ್ಪತ್ರೆಯಿಂದ ಮನೆಗೆ ಕರೆತಂದವನು ಅವನೇ... ಮಗಳನ್ನು ಪೂರ್ವಿ ಎಂದೇ ಕರೆಯಬೇಕೆಂದು ನಿರ್ಧರಿಸಿದವನು ಅವನೇ... ಹಡೆದ ಹನ್ನೊಂದನೇ ದಿನಕ್ಕೆ ಬೆತ್ತದ ಡಬ್ಬಿಯ ಮುಚ್ಚಳದಲ್ಲಿ ಗುಲಾಬಿ ದಾಸವಾಳದ ಪಕಳೆಯಂತೆ ಮಲಗಿದ ಮಗುವನ್ನು ಹೊತ್ತು ಹೊಸ್ತಿಲು ದಾಟಿಸಿದವನೂ ಅವನೇ... ದಾವಣಗೆರೆಗೆ ಹೊರಡುವ ಮುಂಚೆ ಪೂರ್ವಿಯನ್ನು ತೋಳಲ್ಲೆತ್ತಿಕೊಂಡು ಕುಮಾರವ್ಯಾಸ ಭಾರತದ 'ಗಜಮುಖನೆ ಮೆರೆವೇಕದಂತನೆ ನಿಜಗುಣಾನ್ವಿತ ಪರಶುಧಾರನೆ' ಸಾಲುಗಳನ್ನು ರಾಗಬದ್ಧವಾಗಿ ಹಾಡಿದವನೂ ಅವನೇ... ಮಗುವಿಗೆ ತಿಂಗಳು ತುಂಬಲು ಇನ್ನೇನು ಎರಡು ದಿನ ಇರುವಾಗ ದಾವಣಗೆರೆಯಿಂದ ಅಂಬ್ಯುಲೆನ್ಸಿನಲ್ಲಿ ಉದ್ದುದ್ದ ಮಲಗಿ ಹೆಣವಾಗಿ ಬಂದವನೂ ಅವನೇ. - 'ಪಟಾಕಿ ಕೈಚೀಲ' ಕತೆಯಿಂದ ಎಲ್ಲೋ ನೆಮ್ಮದಿಯಲ್ಲಿ ತಂಗಿದ್ದ, ಇನ್ನೆಲ್ಲೋ ಬವಣೆಗಳಿಂದ ಬೇಸತ್ತಿದ್ದ ಮತ್ತೆಲ್ಲೋ ವೈರಾಗ್ಯ ತಳೆದು ಕೂತಲ್ಲೇ ಹುತ್ತ ಬೆಳೆಸಿಕೊಂಡಿದ್ದ ಕತೆಗಳನ್ನು ಅವುಗಳ ಪಾಡಿಗೇ ಬಿಟ್ಟುಬಿಡದೆ ಕರೆದು ಕರೆದು ಕಟ್ಟಿಹಾಕಿದ್ದಿದೆ, ಚಿಕ್ಕಂದಿನಿಂದಲೂ, ಸಾಕಿನ್ನು ಕತೆಗಳನ್ನು ಕರೆದದ್ದು, ಅವುಗಳನ್ನು ಕಟ್ಟಿಹಾಕಿದ್ದು ಎಂದುಕೊಂಡಷ್ಟೂ ಇನ್ನಷ್ಟು ಅವುಗಳ ಬೆನ್ನು ಬೀಳುತ್ತೇನೆ. - 'ಕತೆ ಜಾರಿಯಲ್ಲಿರಲಿ' ಕತೆಯಿಂದ

₹175   ₹156

ಕಥಾ ಚಾಣಕ್ಯ

nil

₹199   ₹177

ಕಥಾಭರಣ | Kathabharana

ಬಹುತೇಕ ಹಳ್ಳಿಗಳಲ್ಲಿ ಸುಗ್ಗಿಹಬ್ಬ ಮಾಡುತ್ತಾರೆ. ಹೊಸ ಬೆಳೆ ಮನೆಗೆ ಬಂದ ತಕ್ಷಣ, ಅದರಲ್ಲಿ ಮೊದಲ ಭಾಗವಾಗಿ ತಮ್ಮ ಯೋಗ್ಯತೆಗೆ ತಕ್ಕಂತೆ ಒಂದಿಷ್ಟು ಧಾನ್ಯವನ್ನು ಊರ ದೇವರಿಗೆ ಎಲ್ಲರೂ ಅರ್ಪಿಸುತ್ತಾರೆ. ಬಡವ, ಬಲ್ಲಿದ, ಮೇಲು, ಕೀಳು ಇತ್ಯಾದಿಗಳ ಸೋಂಕಿಲ್ಲದೆ ಎಲ್ಲರೂ ಈ ದಾನ ಮಾಡುತ್ತಾರೆ. ಅವನ್ನೆಲ್ಲಾ ಸ್ವೀಕರಿಸಿದ ದೇವಸ್ಥಾನವು ಸುಗ್ಗಿಹಬ್ಬ ಹಮ್ಮಿಕೊಳ್ಳುತ್ತದೆ. ಊರವರೇ ನೀಡಿದ ಧಾನ್ಯಗಳನ್ನು ಬಳಸಿ ಊರವರೇ ಅಡಿಗೆ ತಯಾರಿಸಿ, ಎಲ್ಲರೂ ಊಟ ಮಾಡುತ್ತಾರೆ. ಈ ಊಟವು ಊರವರಿಗೆಲ್ಲಾ ಅತ್ಯಂತ ರುಚಿಯೆನ್ನಿಸುತ್ತದೆ.ಇಂತಹ ಸುಗ್ಗಿಹಬ್ಬದ ರುಚಿ ಈ ಕಥಾಸಂಕಲನಕ್ಕೆ ದಕ್ಕಿದೆ. ಕನ್ನಡ ಸಾಹಿತ್ಯಲೋಕದ ಸಾಕಷ್ಟು ಹೊಸ ಕತೆಗಾರರು ಮತ್ತು ಒಂದಿಷ್ಟು ಹಳಬರು ಈ ಸಂಕಲನಕ್ಕೆ ತಮ್ಮ ಕತೆಯನ್ನು ನೀಡಿದ್ದಾರೆ. ಸದ್ಯದ ಕನ್ನಡ ಲೋಕದ ಹೊಸ ಬರವಣಿಗೆಯ ಪಕ್ಷಿನೋಟವನ್ನು ಈ ಸಂಕಲನ ನೀಡುತ್ತದೆ. ಊರವರೆಲ್ಲರೂ ಒಂದಾದಾಗ ಮೂಡುವ ಸಹೃದಯತೆ, ಆತ್ಮೀಯತೆ ಮತ್ತು ಲವಲವಿಕೆಯೂ ಇಲ್ಲಿ ಕಾಣುತ್ತದೆ. ಇಂತಹ ಒಗ್ಗಟ್ಟಿನ ಕಾರ್ಯಗಳು ಸದ್ಯದ ಸಾಹಿತ್ಯದ ಲೋಕವನ್ನು ಜೀವಂತ ಉಳಿಸುವುದಕ್ಕೆ ಅವಶ್ಯ ಬೇಕಾದ ಲಸಿಕೆಯಾಗಿದೆ. ಕನ್ನಡ ಸಾಹಿತ್ಯ ಚರಿತ್ರೆಯ ಹಿರಿಯ ಮಹನೀಯರೆಲ್ಲರ ಪ್ರತಿಫಲನವೂ ಈ ಕತೆಗಳಲ್ಲಿ ಕಾಣುತ್ತದೆ. ಆ ನಿಟ್ಟಿನಿಂದ ಇದು ಪರಂಪರೆಯ ನೆಲದಲ್ಲಿ ಬೆಳೆದ ಹೊಸ ಬೆಳೆಯಾಗಿದೆ. ಊರ ದೇವಸ್ಥಾನವೂ ಒಂದಿಷ್ಟು ಹೊಲವನ್ನು ಹೊಂದಿದ್ದು, ಅದೂ ಕೊಯ್ದು ಮಾಡಿದ ಧಾನ್ಯದಲ್ಲಿ ಒಂದಿಷ್ಟು ಭಾಗವನ್ನು ಸುಗ್ಗಿಹಬ್ಬಕ್ಕೆ ದಾನ ಮಾಡುತ್ತದೆ. ಅದೇ ರೀತಿ ಈ ಸಂಕಲನವನ್ನು ಶ್ರದ್ಧೆಯಿಂದ ಸಂಪಾದಿಸಿದ ಅಜಿತ್ ಹರೀಶಿ ಮತ್ತು ವಿಠಲ್ ಶೆಣೈ ತಮ್ಮ ಕತೆಯನ್ನೂ ಇಲ್ಲಿ ಓದುಗರಿಗೆ ಕೊಟ್ಟಿದ್ದಾರೆ. ರುಚಿಯ ನಿರ್ಧಾರದಲ್ಲಿ ನಾಲಿಗೆಗಿಂತಲೂ ಮನಸ್ಸು ದೊಡ್ಡ ಪಾತ್ರವಹಿಸುತ್ತದೆ. ಎಲ್ಲರೂ ಒಗ್ಗಟ್ಟಾಗಿ ಸಂಭ್ರಮದಿಂದ ತಯಾರಿಸಿದ ಸುಗ್ಗಿಯೂಟ ರುಚಿಯಾಗಿರಲು ಮನಸ್ಸೇ ಮುಖ್ಯ ಕಾರಣ. ಆದರೆ ಪಕ್ಕದೂರಿನವರೂ ನಮ್ಮೂರಿನ ಸುಗ್ಗಿ ಊಟ ರುಚಿ ಎಂದರೆ ಆಗ ಆ ಪಾಕ ಮಹತ್ವ ಪಡೆದುಕೊಳ್ಳುತ್ತದೆ. ಅಂತಹ ದಾರಿಯಲ್ಲಿ ಇಲ್ಲಿನ ಹಲವು ಕತೆಗಳಿವೆ ಎನ್ನುವುದು ನನಗೆ ಭರವಸೆಯನ್ನು ಕೊಟ್ಟಿದೆ.

₹290   ₹218

ಕದ್ರ/kadra/

nil

₹110   ₹98

ಕನಸುಗಳೇ ಮರಳಿ ಬನ್ನಿ | kanasugale marali banni

ಇತ್ತೀಚೆಗೆ ಬರೆಯುತ್ತಿರುವ ಕತೆಗಾರರಲ್ಲಿ ನೀವು ಹೆಚ್ಚು ಇಷ್ಟವಾಗುತ್ತೀರಿ. ಮನುಷ್ಯರ ಮನಸ್ಸಿನೊಳಗೆ ನೀವು ಪ್ರವೇಶಿಸುತ್ತಿರುವ ರೀತಿ ನನಗೆ ಆಶ್ಚರ್ಯವನ್ನು ತಂದಿದೆ... ಮನುಷ್ಯನಿಗೆ ಅಂಥಾ ಹೇಳಿಕೊಳ್ಳುವಂತಹಾ ಗುರಿ-ಉದ್ದೇಶಗಳಿರುವುದಿಲ್ಲ. ಆತ ಭಾವ ಜೀವಿಯಾಗಿರುತ್ತಾನೆ. ಭ್ರಮಾಜೀವಿಯಾಗಿರುತ್ತಾನೆ. ಮನುಷ್ಯ ಜಗತ್ತು ಇವುಗಳಿಂದಲೇ ನಿರ್ಮಾಣವಾಗಿದೆ. ಆಗುತ್ತಲೂ ಇರುತ್ತದೆ. ನಿಮ್ಮ 'ನಿರ್ಗಮನ', 'ಒಂದುಹನಿ ಪ್ರೀತಿಗಾಗಿ', 'ಆ ಇನ್ನರ್ಧ', 'ನಾನು ನಾನಲ್ಲ', 'ಕಾಲ', 'ಚಿಟ್ಟೆ' ಹೀಗೆ ಹೆಚ್ಚು ಕಡಿಮೆ ಎಲ್ಲಾ ಕತೆಗಳೂ ನನಗೆ ಬಹಳ ಇಷ್ಟವಾದವು. ಮೇಲಿನ ಕತೆಗಳನ್ನು ಎರಡೆರಡು ಬಾರಿ ಓದಿದೆ. "ಹಾರಲು ಮರೆತ ಚಿಟ್ಟೆಗಳಂತೆ ಹೂವುಗಳು ಬಿದ್ದಿದ್ದವು' ಎಂಬ ವಾಕ್ಯ ಮತ್ತೆ ಮತ್ತೆ ನೆನಪಾಗುತ್ತಿರುತ್ತದೆ.

₹130   ₹104

ಕಪಿಲೆ ಕಂಡ ಕತೆಗಳು | Kapile Kanda Kathegalu

ಅಕ್ಷರಸ್ಥರಲ್ಲದ ನಮ್ಮ ಹಳ್ಳಿಯ ಜನ, ಅದರಲ್ಲೂ ಹೆಣ್ಮಕ್ಕಳು ತಮ್ಮ ಬದುಕಿನ, ಕಷ್ಟಗಳ ಮಾತಾಡುವಾಗ "ಅಯ್ಯೋ ಕುಸ್ಮಾ, ನನ್ ಕತೆ ಬೆಳಗಾನ ಯೋಳುದ್ರೂ ಮುಗಿಯಲ್ಲ, ನೀ ಒಂದ್. ಬುಕ್ಕೇ ಬರ್ದ್‌ ಬುಡಬೋದು" ಅಂತಿರ್ತಾರೆ. ಅವರ ಪಾಲಿಗೆ ಕತೆಗಳೆಂದರೆ ಕಷ್ಟಗಳು. ಅಲ್ಲವೆನ್ನಲಾಗದು. ಅವರೊಳಗೆಲ್ಲಾ ಕತೆ ಇದೆ. ಕತೆ ಎಂಬುದು ಒಳಲೋಕ ಬಗೆದಾಗ ಕಾಣುವ ನೋಟ ಬದುಕು ಕೊಡುವ ಆಘಾತಗಳಿಂದ ಕಾಣುವ ಬೆಳಕನ್ನೂ, ಕಾಣೆಯನ್ನೂ ದೀಪವಾಗಿಸಿ ದಾಟಿಸಲು ಕಂಡುಕೊಂಡ ದಾರಿ. ಕತೆ, ನಮ್ಮನ್ನು ಈ ಜಗತ್ತಿನಲ್ಲಿರುತ್ತಲೇ, ಈ ಜಗತ್ತಿನಿಂದ ಕೆಲಹೊತ್ತಾದರೂ ಬೇರೆಡೆಗೆ ಒಯ್ಯುವ ಮಾಯಾಚಾಪೆ. ಒಂದು ದಿವೌಷಧ. ಕಲೆ ಮತ್ತು ಅಧ್ಯಾತ್ಮ ಎರಡೂ, ಮನುಷ್ಯರ ವೈಯಕ್ತಿಕ ಸಂಕಟಗಳನ್ನು ಲೋಕದ ಪ್ರಶ್ನೆಗಳಾಗಿಸುವ, ಉತ್ತರ ಹುಡುಕುವ, ಸಂಕಟಗಳನ್ನು ಸಾಂತ್ವನವಾಗಿಸುವ ಪ್ರಕ್ರಿಯೆಗಳು. ಅಂತಹ ಕತೆಗಳು ಎಲ್ಲರೊಳಗೂ ಇರುತ್ತವೆ. ಕೆಲವರು ಬರೆಯುತ್ತಾರಷ್ಟೇ!

₹150   ₹134

ಕರೆ | Kare

NA

₹95   ₹85