nil
#
ಜೆ.ಎನ್. ಜಗನ್ನಾಥ್ ಅವರ ಖಜಾನೆ ವ್ಯವಸ್ಥಾಪನೆ/ನಿರ್ವಹಣೆ ಕುರಿತಾದ ಈ ಪುಸ್ತಕ ಕನ್ನಡದಲ್ಲಿ ಒಂದು ವಿಶೇಷ ಪ್ರಯತ್ನವಾಗಿದೆ. ಸಾಮಾನ್ಯರಿಗೂ ಅರ್ಥವಾಗುವಂತೆ ವಿದೇಶೀ ವಿನಿಮಯ, ಖಜಾನೆ ನಿರ್ವಹಣೆಯಂತಹ ವಿಷಯಗಳನ್ನು ತಿಳಿಸುವುದರಲ್ಲಿ ಈ ಕೃತಿ ಯಶಸ್ವಿಯಾಗಿದೆ. ಜೆ.ಎನ್. ಜಗನ್ನಾಥ್ ಅವರು ಎಂಕಾಂ, ಎಂಬಿಎ, ಎಂಎ, ಸಿಎಐಐಬಿ, ಖಜಾನೆ ವ್ಯವಸ್ಥಾಪನದಲ್ಲಿ ಡಿಪ್ಲೋಮೋ, ಮಾನವ ಸಂಪನ್ಮೂಲ ವ್ಯವಸ್ಥಾಪನದಲ್ಲಿ ಡಿಪ್ಲೋಮೋ ಹಾಗೂ ಫ್ಲಾರಿಡಾದ ವಿಶ್ವವಿದ್ಯಾನಿಲಯದಿಂದ ಖಜಾನೆ ವ್ಯವಸ್ಥಾಪನ ವಿಷಯದಲ್ಲಿ ಡಾಕ್ಟರೇಟ್ ಪದವಿಗಳನ್ನು ಪಡೆದಿದ್ದಾರೆ. 25ವರ್ಷಗಳ ಕಾಲ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ಸೇವೆ ಸಲ್ಲಿಸಿರುವ ಶ್ರೀಯುತರು, ಆರು ವರ್ಷಗಳ ಕಾಲ ಖಜಾನೆ ವ್ಯವಸ್ಥಾಪನದ ವಹಿವಾಟು ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದವರು. ನಂತರ ಭಾರತದ ಐಟಿ ದಿಗ್ಗಜ ಇನ್ಫೋಸಿಸ್ ಸಂಸ್ಥೆಯಲ್ಲಿ 14 ವರ್ಷಗಳ ಕಾಲ ತರಬೇತಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. 50ಕ್ಕೂ ಹೆಚ್ಚು ದೇಶಗಳಿಗೆ ಭೇಟಿಕೊಟ್ಟು ತಮ್ಮ ಕಂಪನಿಯ ಬ್ಯಾಂಕಿಂಗ್ ತಂತ್ರಾಂಶದ ಕುರಿತು ತರಬೇತಿ ನೀಡಿದ್ದಾರೆ.
NA
ಗಿರೀಶ್ ವಿ. ವಾಘ
Showing 3001 to 3030 of 4817 results