ಅಹಲ್ಯಾ ಪಾಯಿ ಹೊಳ್ಳರ್ ಎಂಬ ಮೇರು ವ್ಯಕ್ತಿತ್ವವು ಪುಣ್ಯಭೂಮಿ ಭಾರತದಲ್ಲಿ ಜನ್ಮತಾಳಿ 300 ವಸಂತಗಳು ತುಂಬಲಿದೆ. ಜೀವನದುದ್ದಕ್ಕೂ ಎದುದಾದ ಕಷ್ಟಗಳ ಸರಮಾಲೆಯ ನಡುವಿನಲ್ಲೂ ತನ್ನ ಪ್ರಜೆಗಳ ಹಿತಕ್ಕಾಗಿ, ಭಾರತದ ಏಕಾತ್ಮತೆಗಾಗಿ ಕಾರ್ಯ ನಿರ್ವಹಿಸಿ. ತನ್ನ ಸಮಸ್ತ ಸಂಪತ್ತು, ಅಧಿಕಾರ ಎಲ್ಲವೂ ಶಿವನಿಗೆ ಸೇರಿದ್ದಾಗಿದ್ದು ತಾನು ಕೇವಲ ಅವನ ಅಜ್ಞಾಪಾಲನೆ ಮಾಡುತ್ತಿದೀನಿ ಎಂಬ ಭಾವದಿಂದ ರಾಜ್ಯಭಾರ ಮಾಡುತ್ತಿದ್ದ ದೇಶ ಹಿಂದೆಂದೂ ಕಂಡಿಲ್ಲದ ಅಪರೂಪದ ವ್ಯಕ್ತಿತ್ವ. ಪದಕೀಯರ ದಾಳಿ, ಆಕ್ರಮಣಗಳ ನಡುವೆಯೂ ತನ್ನ ರಾಜ್ಯವನ್ನು ಸಮೃದ್ಧಗೊಳಿಸುತ್ತಾ ಇಡೀ ಭಾರತದ ಸಾಂಸ್ಕೃತಿಕ ವೈಭವವನ್ನು, ರಾಷ್ಟ್ರೀಯ ಚೇತನವನ್ನು, ಭಾರತದ ಏಕಾತ್ಮತೆಯನ್ನು ಮರು ಸ್ಥಾಪಿಸಲು ಶ್ರಮಿಸಿದವರು- 'ಅಖಂಡ ರಾಷ್ಟ್ರ ತಪಸ್ವಿನಿ ಅಹಲ್ಯಾಬಾಯಿ ಹೋಳ್ಳರ್". ಪ್ರಸ್ತುತ ಕೇಂದ್ರ ಸರ್ಕಾರದ ಹಲವಾರು ಜನಪರ ಯೋಜನೆಗಳನ್ನು ನೋಡಿದಾಗ ಲೋಕಮಾತೆ ಅಹಲ್ಯಾಬಾಯಿ ಹೊಳ್ಳರರ ಅಂದಿನ ರಾಜಕೀಯ, ಸಾಮಾಜಿಕ ನಿಲುವುಗಳೇ ಸ್ಫೂರ್ತಿ ಇರಬಹುದು ಎಂದನಿಸದೇ ಇರದು. ಮೇಘಾ ಪ್ರಮೋದ್