ಕಾಡುತ್ತದೆ. ಸೃಜನಶೀಲ ಲೇಖಕ ಜೀವನದ ವಿಶ್ವವಿದ್ಯಾನಿಲಯದಲ್ಲಿ ಗಾಢವಾದ ಆಲೋಚನೆ ಮಾಡಿ ತನ್ನ ದಾರಿಯನ್ನು ತಾನೇ ಹುಡುಕಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾನೆ ('ನನ್ನ ವಿಶ್ವವಿದ್ಯಾನಿಲಯ'); ಕೊನೆ ಎಲೆ', ಕಲಾವಿದನೊಬ್ಬ ಮಹಾನ್ ಕಲಾಕೃತಿಯನ್ನು ಸೃಷ್ಟಿಸಿ ಅದರ ಮೂಲಕ ಸಾಯುವಂತಹ ಜೀವ ಒಂದಕ್ಕೆ ಬದುಕಬೇಕು ಆತ್ಮವಿಶ್ವಾಸವನ್ನು ತುಂಬಿದ ಸಾರ್ಥಕ ಕಥೆಯಾಗಿದೆ; 'ಖುಷಿ ರಾಜಕುಮಾರ' ಕಥೆಯಲ್ಲಿ ಚಿಕ್ಕ ಪಕ್ಷಿ ಮತ್ತು ರಾಜಕುಮಾರ ತಮ್ಮ ಚಟುವಟಿಕೆಗಳ ಮೂಲಕ ದೇವರಿಗೆ ಪ್ರಿಯರಾಗುತ್ತಾರೆ. ಒಳ್ಳೆಯತನ ಮತ್ತು ಕೆಡಕುತನ ಇವುಗಳ ನಿರಂತರ ಸಂಘರ್ಷದಲ್ಲಿ ಕೊನೆಗೆ ಒಳ್ಳೆಯದ್ದು ಗೆಲ್ಲುತ್ತದೆ ಎಂಬ ಆಶಾಭಾವ 'ಕನಸು' ಕಥೆಯಲ್ಲಿ ಧ್ವನಿಸುತ್ತದೆ. ಮನುಷ್ಯ ಸ್ವಭಾವದಲ್ಲಿರುವ ಒಳ್ಳೆಯತನಕ್ಕೆ ದಸ್ತಾಯೇವ್ಸ್ಕಿ ಒತ್ತುಕೊಟ್ಟು ಸಕಾರಾತ್ಮಕವಾಗಿ ಸ್ಪಂದಿಸಿದ್ದಾನೆ. ಪ್ರೀತಿ, ಪ್ರೇಮ, ಆದರ್ಶ, ತ್ಯಾಗ, ಇಂತಹ ಸೂಕ್ಷ್ಮಭಾವನೆಗಳೂ ಕಥೆಗಳಲ್ಲಿ ಕಲಾತ್ಮಕವಾಗಿ ಅನಾವರಣಗೊಂಡಿವೆ.