ಕನ್ನಡದ ಪ್ರಸಿದ್ಧ ಲೇಖಕರು, ಪತ್ರಕರ್ತರು ಆದ ಗಣೇಶ್ ಕಾಸರಗೋಡು ಅವರು ಬರೆದಿರುವ ‘ಲಾಸ್ಟ್ ಡೇಸ್ ಆಫ್ ಲೆಜೆಂಡ್ಸ್’ ಪುಸ್ತಕವಿದು. ಈ ಪುಸ್ತಕ ಓದುತ್ತಾ ಹೋದರೆ ಸದಾ ಕಾಡುವ ಕಲಾವಿದರ ಕಥಾನಕ ನಿಮ್ಮದಾಗುತ್ತದೆ. ಕನ್ನಡ ಚಿತ್ರರಂಗದ ಲೆಜೆಂಡ್‌ಗಳ ಕೊನೆಯ ದಿನಗಳ ಚಿತ್ರಣ ಇಲ್ಲಿದೆ. ನಿಮ್ಮ ಇಷ್ಟ ಕಲಾವಿದರ ಬಗ್ಗೆ ನೀವಿಲ್ಲಿ ಓದಿದ ಮೇಲೆ ನಮ್ಮ ಮನಸ್ಸು ಮೂಕವಾಗುತ್ತೆ. ಈ ಪುಸ್ತಕ ಭಾವಸ್ಪರ್ಶಿಯಾಗಿದೆ, ಹೃದಯಸ್ಪರ್ಶಿಯಾಗಿದೆ. ಕಲಾವಿದರ ಹೃದಯವಿದ್ರಾವಕ ಘಟನೆಗಳ ಚಿತ್ರಣ ನಮ್ಮ ಕರುಳು ಹಿಂಡಿ ಮನಕಲಕುತ್ತವೆ. ಒಂದು ಕಾಲದಲ್ಲಿ ತೆರೆಯ ಮೇಲೆ ಮಿಂಚಿದವರು ಇನ್ನೊಂದು ಕಾಲದಲ್ಲಿ ಹಲವು ಸಂಕಷ್ಟಗಳಿಂದ ನರಳುವ ಕಥಾನಕ ನಮ್ಮ ಮನ ಕರಗಿಸಿಬಿಡುತ್ತದೆ.
ಗಣೇಶ್ ಕಾಸರಗೋಡು ಕನ್ನಡ ಪತ್ರಿಕೋದ್ಯಮದಲ್ಲಿ ಚಿರ ಪರಿಚಿತ ಹೆಸರು ಗಣೇಶ್ ಕಾಸರಗೋಡು. ಕಾಸರಗೋಡಿನಲ್ಲಿ ಹುಟ್ಟಿದ ಗಣೇಶ್ ವಿದ್ಯಾಭ್ಯಾಸವನ್ನು ಅಲ್ಲಿಯೇ ಕಂಪ್ಲೀಟ್ ಮಾಡಿ ಕೆಲಕಾಲ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ನಂತರ ಗಣೇಶ್ ಕಾಸರಗೋಡು ಅವರನ್ನು ಕೈಬೀಸಿ ಕರೆದಿದ್ದು ಪತ್ರಿಕೋದ್ಯಮ. ಮೊದಲು ಚಿತ್ರದೀಪದಲ್ಲಿ ಕೆಲಸ ಮಾಡಿದ ಗಣೇಶ್ ಕಾಸರಗೋಡು ನಂತರ ಚಿತ್ರತಾರಾ ಹಾಗೂ ಅರಗಿಣಿಯಲ್ಲಿ ಸೇವೆಸಲ್ಲಿಸಿದರು. ಬಳಿಕ ಸಂಯುಕ್ತ ಕರ್ನಾಟಕ, ಕರ್ಮವೀರ, ವಿಜಯ ಕರ್ನಾಟಕ ಪತ್ರಿಕೆಗಳಲ್ಲಿ ಸಿನಿಮಾ Read More...