Delivery between 2-8 Days
No returns accepted. Please refer our full policy
Your payments are 100% secure
#
Dharini Maya |
ಧಾರಿಣಿ ಮಾಯಾ ಅವರು ಮೈಸೂರಿನ ಪತ್ರಿಕೋದ್ಯಮ ವಿಭಾಗದಲ್ಲಿ ಪದವಿ ಹಾಗೂ ಇಂಗ್ಲೀಷ್ ವಿಭಾಗದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ ಓದು ಬರಹದಲ್ಲಿ ಆಸಕ್ತಿ, ಬರವಣಿಗೆಯನ್ನು ಪ್ರಾರಂಭಿಸಿದ್ದು ಹವ್ಯಾಸಿ ಬರಹಗಾರ್ತಿಯಾಗಿ, ಇವರ ಸಾಹಿತ್ಯ ಕಣಜವು ಕಥೆ, ಕವನ, ಲೇಖನ ಹಾಗೂ ಲಲಿತ ಪ್ರಬಂಧಗಳ ಪ್ರಕಾರಗಳನ್ನು ಒಳಗೊಂಡಿದೆ. ಬಹುತೇಕ ಬರಹಗಳು ಭೂಮಿಕಾ, ಸುಧಾ, ತರಂಗ, ವಿಶ್ವವಾಣಿ, ವಿಜಯ ಕರ್ನಾಟಕ, ಮಂಗಳ, ಕರ್ಮವೀರ, ಹಾಗೂ ವಿನಯವಾಣಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. `ನೇಯ್ದೆನುಡಿ’ ಎಂಬ ಮಾಸಿಕ ಪತ್ರಿಕೆಯಲ್ಲಿ ಇವರ ಅಂಕಣ ಬರಹಗಳು ಕಳೆದ ಮೂರು ವರ್ಷಗಳಿಂದ ಸತತವಾಗಿ ಮೂಡಿ ಬರುತ್ತಿವೆ. ಚಿತ್ರಕಲೆ, ವಾಲ್ ಪೇಂಟಿಂಗ್, ಅಡುಗೆ, ಸ್ಪೀಟ್ ಫೋಟೋಗ್ರಾಫಿಯಲ್ಲಿ ಇವರಿಗೆ ಒಲವು, ಚಿಕ್ಕಂದಿನಿಂದಲೂ ನೃತ್ಯ, ನಾಟಕ ನನ್ನಿಷ್ಟದ ರಂಗಗಳು, ಕೌಂಟುಬಿಕ ಆಧಾರಿತ “ಮನೋರಮೆಯರ ತಲ್ಲಣಗಳು” ಎಂಬ ನಾಟಕವನ್ನು (ಮ್ಯೂಸಿಕಲ್ ಡ್ರಾಮಾ) ರಚಿಸಿ, ನಿರ್ದೇಶಿಸಿ, ನಟಿಸಿದ್ದಾರೆ . ಇದರಲ್ಲಿ ಹೆಣ್ಣಿನ ಬದುಕು-ಬವಣೆಗಳ ಸುತ್ತ ಕಥೆ ಹೆಣೆಯಲಾಗಿದ್ದರೂ ನವಿರು ಹಾಸ್ಯದಿಂದ ಕೂಡಿದ್ದು, ಪುರುಷರಿಗೆ ಹೇಳುವಂಥ ಸಾಕಷ್ಟು ಕಿವಿಮಾತುಗಳಿವೆ. ಈ ಕೌಟುಂಬಿಕ ನಾಟಕ ಬಹುವಾಗಿ ಜನಮನ್ನಣೆ ಗಳಿಸಿದೆ. |
0 average based on 0 reviews.