Delivery between 2-8 Days
No returns accepted. Please refer our full policy
Your payments are 100% secure
ನಮ್ಮ ದೇಶವನ್ನು ದೊಡ್ಡ ಮಟ್ಟದಲ್ಲಿ ಪೀಡಿಸುವ ಪಿಡುಗುಗಳೆಂದರೆ ಅನಕ್ಷರತೆ, ಅಜ್ಞಾನ. ಇದರ ಪರಿಣಾಮದಿಂದ ಜನತೆ ಹಲವು ಬಗೆಯ ದೈಹಿಕ, ಮಾನಸಿಕ ರೋಗಗಳಿಗೆ ಬಹುಬೇಗ ಬಲಿಯಾಗುವುದು ಕಂಡುಬರುತ್ತದೆ. ಇತ್ತೀಚಿನ ದಿನಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ ಕೆಲವು ವಿಶೇಷ ಕಾಯಿಲೆಗಳ ಜೊತೆಗೆ ಸಾಮಾನ್ಯವಾಗಿ ಎಲ್ಲರಿಗೂ ಬರಬಹುದಾದ ಕೆಲವು ರೋಗಗಳು ಸಮುದಾಯಗಳನ್ನು ಕಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇವುಗಳನ್ನು ಸಂಪೂರ್ಣ ತೊಡೆದುಹಾಕಲು ಸಾಧ್ಯವಾಗದಿದ್ದರೂ ನಿಯಂತ್ರಣದಲ್ಲಿಟ್ಟುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಲು ನಮ್ಮ ಜೀವನವನ್ನು ಕೆಲವು ಬಗೆಯ ಶಿಸ್ತುಗಳಿಗೆ ಒಳಗುಮಾಡಿಕೊಳ್ಳಬೇಕಾಗುತ್ತದೆ. ಆಹಾರ, ವ್ಯಾಯಾಮ, ಮಾನಸಿಕ ಒತ್ತಡ ಇವುಗಳನ್ನು ಸರಿಯಾದ ಕ್ರಮದಲ್ಲಿ ಪರಿಪಾಲಿಸಿದರೆ ಇದು ಕಾಡುವ ಕಾಯಿಲೆಯಾಗದೇ ತಡೆಗಟ್ಟಬಹುದಾದ ಜೀವನ ವಿನ್ಯಾಸವಾಗುತ್ತದೆ. ಇದಕ್ಕೆ ಅಗತ್ಯವಾದ ತಿಳಿವಳಿಕೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವಂತಹ ಕಾರ್ಯವನ್ನು ‘ಆರೋಗ್ಯ ಚಿಂತನ ಮಾಲಿಕೆ’ಯ ಕೃತಿಗಳು ಮಾಡುತ್ತವೆ. ಹದಿಹರೆಯ ಅನೇಕ ಕನಸುಗಳನ್ನು ಬಿತ್ತುವುದರೊಂದಿಗೆ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಜೀವನ ಕೌಶಲ್ಯಗಳನ್ನು ಕಲಿಯುವ ಕಾಲವಾಗಿರುತ್ತದೆ. ಯುವಜನಾಂಗ ತಮಗರಿವಿಲ್ಲದೇ ದುಶ್ಚಟಗಳಿಗೆ ಬಲಿಯಾಗುವ ಸಾಧ್ಯತೆಗಳು ಈ ಸಮಯದಲ್ಲಿ ಹೆಚ್ಚು. ಆದ್ದರಿಂದ ಈ ಎಲ್ಲಾ ಸಮಸ್ಯೆಗಳ ಬಗೆಗೆ ಸಂಪೂರ್ಣ ಮಾಹಿತಿಯನ್ನು ‘ಹದಿಹರೆಯ’ ಕೃತಿ ನೀಡುತ್ತದೆ. ಯುವಜನತೆಯೊಂದಿಗೆ ಪೋಷಕರು ಎದುರಿಸಬೇಕಾದ ಸವಾಲುಗಳ ಕುರಿತು ಆಪ್ತಸಲಹೆಗಾರರೂ ಭಾಷಾಂತರಕಾರರೂ ವೈದ್ಯಸಾಹಿತಿಗಳೂ ಆದ ಡಾ. ಎನ್. ಗೋಪಾಲಕೃಷ್ಣರವರು ‘ಹದಿಹರೆಯ’ ಕೃತಿಯಲ್ಲಿ ಸಮಗ್ರ ವಿವರಣೆ ನೀಡಿದ್ದಾರೆ.
DR N GOPALAKRISHNA |
0 average based on 0 reviews.