
Category: | ಕನ್ನಡ |
Sub Category: | ಅಂಕಣ ಬರಹಗಳು |
Author: | ಎಲ್.ಪಿ. ಕುಲಕರ್ಣಿ | L P Kulakarni |
Publisher: | pustaka mane |
Language: | Kannada |
Number of pages : | |
Publication Year: | 2025 |
Weight | 400 |
ISBN | 35 0140-1-5 066-1 |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಸಾಧನೆಯ ಹಾದಿಯ ಕೈಮರಗಳು
ಜನರ ಜೀವನವನ್ನು ಸುಂದರ ಮತ್ತು ಸೌಲಭ್ಯಮಯ ಗೊಳಿಸುವಲ್ಲಿ ವಿಜ್ಞಾನಿಗಳ ಪಾತ್ರ ತುಂಬಾ ಹಿರಿದು. ಕಳೆದ ಎರಡು ಶತಮಾನಗಳಲ್ಲಿ ಅಸಾಮಾನ್ಯ ವೈಜ್ಞಾನಿಕ ಅವಿಷ್ಕಾರಗಳಾಗಿವೆ.ಜಗತ್ತಿನ ಎಲ್ಲ ಭಾಗಗಳ ವಿಶೇಷ ಜ್ಞಾನಿಗಳು ಅಪರೂಪದ ಕೆಲಸ ಮಾಡಿ ಹಲವರ ದಾರಿಗೆ ಬೆಳಕಾಗಿದ್ದಾರೆ. ಸಾರ್ಥಕ ಜೀವನ ನಡೆಸಿ ಇತರರಿಗೆ ಸ್ಪೂರ್ತಿಯಾಗಿದ್ದಾರೆ. 'ಒಂದೊಂದು ಜೀವ ಒಂದೊ೦ದು ಭಾವ' ಎನ್ನುವಂತೆ ಇಲ್ಲಿ 50ಕ್ಕೂ ಹೆಚ್ಚು ವಿಜ್ಞಾನ ವಿಶಾರದರ ಮೆರವಣಿಗೆಯೇ ಮೇಳಯಿಸಿದೆ.
ಶಾಲೆಯಲ್ಲಿ ವಿಜ್ಞಾನ ಮತ್ತು ಗಣಿತ ಬೋಧಿಸುವ ಯುವ ಉತ್ಸಾಹಿ ಶಿಕ್ಷಕ ಎಲ್.ಪಿ. ಕುಲಕರ್ಣಿಯವರಿಗೆ ವೈಜ್ಞಾನಿಕ ಲೇಖನಗಳನ್ನು ಬರೆಯುವುದೆಂದರೆ ಇನ್ನಿಲ್ಲದ ಆಸಕ್ತಿ ಮತ್ತು ಬದ್ಧತೆ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಸಚಿತ್ರ ಲೇಖನ, ಪ್ರಶೋತ್ತರ ಮಾಲಿಕೆ, ಅಂಕಣ ಬರಹ, ವ್ಯಕ್ತಿ ಚಿತ್ರಗಳು ಅನುದಿನವೂ ಪ್ರಕಟಗೊಳ್ಳುತ್ತವೆ. ಬ್ಯಾಕ್ಟಿರಿಯ, ಬ್ಲಡು, ಲೇಸರ್, ಕೀಟ, ಧಾತು, ಗಣಿತ, ಟೈಯರ್, ಉಲ್ಕೆ ಒಲಿಂಪಿಕ್ಸ್ ಸಂಗೀತ, ಪಕ್ಷಿ, ಪ್ರೊ.ಬ್ಯಾಬಿಲಿಟಿ, ಲಸಿಕೆ... ಹೀಗೆ ಹಲವು ವೈವಿಧ್ಯಮಯ ವಿಷಯಗಳನ್ನು ಮಾಹಿತಿ ಪೂರ್ಣವಾಗಿ ಕಟ್ಟಿಕೊಡುವಲ್ಲಿ ಕುಲಕರ್ಣಿ ಸಿದ್ಧರಿರುತ್ತಾರೆ.
ಸೂತ್ರ - ಸಿದ್ಧಾಂತಗಳ ಭಾರವಿರದ ಸರಳ ಮತ್ತು ಮಾಹಿತಿ ಪೂರ್ಣ ಪುಸ್ತಕವಿದು. ಸಾಧಕರ ಅನನ್ಯ ಸಾಧನೆಯ ಬಗೆಗಿನ ಈ ಪುಸ್ತಕ ಹೆಚ್ಚು ಓದುಗರನ್ನು ತಲುಪಬೇಕು. ವಿಶೇಷವಾಗಿ ನಾಳಿನ ಜನಾಂಗವಾಗಿ ರೂಪುಗೊಳ್ಳುತ್ತಿರುವ ಶಾಲಾ ಮಕ್ಕಳು ಮತ್ತು ಅವರನ್ನು ರೂಪಿಸುವ ಶಿಕ್ಷಕರು ಇದನ್ನು ಓದಲೇಬೇಕು.
ಗುರುರಾಜ್ ಎಸ್. ದಾವಣಗೆರೆ
ವಿಜ್ಞಾನ - ಪರಿಸರ ಲೇಖಕರು
ಎಲ್.ಪಿ. ಕುಲಕರ್ಣಿ | L P Kulakarni |
0 average based on 0 reviews.