| Category: | ವೀರಲೋಕ ಪುಸ್ತಕಗಳು |
| Sub Category: | ಲೇಖನಗಳು, ಪ್ರಬಂಧಗಳು |
| Author: | ಸಾತನೂರು ದೇವರಾಜ್ | Satanuru devaraj |
| Publisher: | ವೀರಲೋಕ | Veeraloka |
| Language: | Kannada |
| Number of pages : | |
| Publication Year: | 2025 |
| Weight | 400 |
| ISBN | 9789348 355362 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಆದ ಸಂಶೋಧನೆಗಳಿಂದಾಗಿ ಅತ್ಯಾಶ್ಚರ್ಯ ಹಾಗೂ ಅದ್ಭುತವಾದ ಸುಧಾರಿತ ಸಾಧನಗಳು ಆವಿಷ್ಠಾರವಾದವು. ಈ ರೀತಿ ಸಾಧನಗಳು ರೂಪುಗೊಂಡ ಕೇವಲ ಐವತ್ತು ವರ್ಷಗಳ ಅವಧಿಯಲ್ಲಿ ಅಸಾಧರಣ ಅನುಪಮ ಕೊಡುಗೆಗಳು ಮನುಕುಲಕ್ಕೆ ಲಭ್ಯವಾಗಿವೆ. ವಾಸಿ ಮಾಡಲಾಗದಂಥ ಹಲವು ಅನುವಂಶೀಯ ಕಾಯಿಲೆಗಳಿಗೆ ಕಾರಣವಾಗುವ ನ್ಯೂನತೆಯುಳ್ಳ ವಂಶವಾಹಿಗಳನ್ನ ಪತ್ತೆ ಹಚ್ಚಿ ಅವುಗಳ ಬದಲಾಗಿ ಆರೋಗ್ಯಕರ ವಂಶವಾಹಿಗಳನ್ನ ಸೇರಿಸುವಂಥ ವಂಶವಾಹಿ ಥೆರಪಿ ಮತ್ತು ಸಸ್ಯ ಮತ್ತು ಪ್ರಾಣಿಗಳಲ್ಲಿ ಇಲ್ಲದಿರುವ ಹೊಸ ಗುಣಲಕ್ಷಣಗಳಿಗೆ ಕಾರಣವಾಗುವ ವಂಶವಾಹಿಗಳ ಸೇರಿಸುವ ತಂತ್ರಜ್ಞಾನ ಉದಯವಾಗಿದೆ.
ವೈಜ್ಞಾನಿಕ ಕುಶಲತೆ ಪಡೆದ ವಿಜ್ಞಾನಿಗಳು ಅತ್ಯಾಧುನಿಕ ಪ್ರಯೋಗಗಳ ಮೂಲಕ ಜೀವಿಗಳ ವಂಶವಾಹಿಯನ್ನ ಬದಲಾಯಿಸುವ ತಂತ್ರಜ್ಞಾನವೇ ವಂಶವಾಹಿ ಪರಿಷ್ಕರಣೆ ತಂತ್ರಜ್ಞಾನ. ಈ ತಂತ್ರಜ್ಞಾನದಿಂದಾಗಿ ವಿಜ್ಞಾನಿಗಳು ಭೂಮಿಯ ಮೇಲಿನ ಯಾವುದೇ ಜೀವಿಗಳ ವಂಶವಾಹಿ ಸಮೂಹವನ್ನ ಕಡಿಮೆ ವೆಚ್ಚದಲ್ಲಿ, ಕಡಿಮೆ ಸಮಯದಲ್ಲಿ ಬದಲಾಯಿಸಬಹುದು. ಇತರೆ ಅನುವಂಶೀಯ ಮಾರ್ಪಡುಗಳಿಗಿಂತ ಇದು ಸಂಪೂರ್ಣ ಭಿನ್ನ
ಈ ಕೃತಿಯಲ್ಲಿ ಜೈವಿಕ ತಂತ್ರಜ್ಞಾನ ಬೆಳೆದು ಬಂದ ಹಾದಿಯನ್ನ ಅವಲೋಕಿಸುವುದರ ಜೊತೆಗೆ ಈ ತಂತ್ರಜ್ಞಾನ ಉದಯಕ್ಕೆ ಶ್ರಮಿಸಿದ ಸಂಶೋಧಕರ ಶ್ರಮದ ಕಾರ್ಯವನ್ನ ಒಂದು ಕಡೆ ಸಂಕ್ಷಿಪ್ತವಾಗಿ ಸಂಗ್ರಹಿಸಿದ್ದಾರೆ. ಸಸ್ಯ, ಪ್ರಾಣಿಗಳೇ ಅಲ್ಲದೇ ಮಾನವನ ಮೇಲೆ ಇತ್ತೀಚಿಗೆ ಜರುಗಿದ ಸಂಶೋಧನೆ ಮೇಲೆ ಬೆಳಕು ಚೆಲ್ಲಿದ್ದಾರೆ. ಕ್ಲಿಷ್ಟ, ಸಂಕೀರ್ಣ, ವೈಜ್ಞಾನಿಕ ಪರಿಕಲ್ಪನೆಗಳನ್ನ ಸರಳವಾಗಿ, ಆಪ್ತವಾಗಿ ಕನ್ನಡ ಜಾಯಮಾನಕ್ಕೆ ಹೊಂದುವ ರೀತಿಯಲ್ಲಿ ಲೇಖಕರು ವಿವರಿಸಿದ್ದಾರೆ. ಇದು ಈ ಕೃತಿಯ ವೈಶಿಷ್ಟ್ಯ.
ಸಾತನೂರು ದೇವರಾಜ್ | Satanuru devaraj |
0 average based on 0 reviews.