Delivery between 2-8 Days
No returns accepted. Please refer our full policy
Your payments are 100% secure
ವಿ.ಸೀ.ಯವರ ಆಸ್ಥೆಗಳ ಆಳ, ಹರವು, ವೈವಿಧ್ಯಗಳು ಅಗಾಧವಾಗಿದ್ದುವು. ಚಿತ್ರಕಲೆ, ಸಂಗೀತ, ಶಿಲ್ಪ, ಸಾಹಿತ್ಯ, ಜ್ಞಾನ-ವಿಜ್ಞಾನ ಎಲ್ಲವೂ ಅವರ ಆಸ್ಥೆಯ ವಿಷಯಗಳಾಗಿದ್ದುವು. ಹೀಗಾಗಿ ಅವರ ಬರಹಗಳಲ್ಲಿಯೂ ಆಶ್ಚರ್ಯಕರವಾದ ವೈವಿಧ್ಯ ಕಂಡುಬರುತ್ತದೆ. ಕಾವ್ಯ, ನಾಟಕ, ಪ್ರಬಂಧ, ವ್ಯಕ್ತಿಚಿತ್ರಗಳು, ವಿಮರ್ಶೆ, ಶಾಸ್ತ್ರ, ಅನುವಾದ ಈ ಎಲ್ಲ ಪ್ರಕಾರಗಳಲ್ಲಿಯೂ ಅವರ ಸಾಹಿತ್ಯ ಕೃಷಿ ಇದೆ…. ವಿ.ಸೀ.ಯವರು ನಮ್ಮ ಯುಗದ ಅತ್ಯಂತ ಧೀಮಂತ, ಬಹುಶ್ರುತ ಹಾಗೂ ಪ್ರಜ್ಞಾವಂತ ಲೇಖಕರಲ್ಲಿ ಒಬ್ಬರಾಗಿದ್ದರು. ಕನ್ನಡಕ್ಕೆ ಅವರಿಂದಾದ ಸೇವೆ ಅಷ್ಟಿಷ್ಟಲ್ಲ. ಆದರೂ ಪರಂಪರೆಯಲ್ಲಿ ಅವರ ಸ್ಥಾನ ಅನಿರ್ದಿಷ್ಟವಾಗಿಯೇ ಉಳಿದಿದೆ. ಇದಕ್ಕೆ ಕಾರಣಗಳನ್ನು ಶೋಧಿಸುವಲ್ಲಿ ನನ್ನ ಶಕ್ತಿಯನ್ನು ವಿನಿಯೋಗಿಸುವ ಬದಲು ಇಂದಿಗೂ ಪ್ರಸ್ತುತವೆನಿಸುವ ಅವರ ಬರಹಗಳನ್ನು ಸಂಕಲಿಸಿ ಓದುಗರನ್ನು ಪ್ರಭಾವಿಸಲೆತ್ನಿಸುವುದು ನನಗೆ ಸೂಕ್ತವಾಗಿ ಕಂಡಿತು. ಹೀಗಾಗಿ ಈ ಸಂಕಲನ ನಿಮ್ಮೆದುರಿಗಿದೆ.
ಜಿ.ಎಸ್. ಆಮೂರ
‘ಪ್ರಸ್ತಾವನೆ’ಯಲ್ಲಿ
Amur G S |
0 average based on 0 reviews.