| Category: | ವೀರಲೋಕ ಪುಸ್ತಕಗಳು |
| Sub Category: | ಅಂಕಣ ಬರಹಗಳು |
| Author: | ದೀಪಾ ಹಿರೇಗುತ್ತಿ | Deepa Hiregutti |
| Publisher: | ವೀರಲೋಕ | Veeraloka |
| Language: | Kannada |
| Number of pages : | |
| Publication Year: | 2025 |
| Weight | 300 |
| ISBN | 9789348 355263. |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
'ಸೋಲು...ಗೆಲುವಿನ ಗೆಳೆಯ' ಎಂಬ ಈ ಪುಸ್ತಕ ಬರೀ ಪುಸ್ತಕವಲ್ಲ, ಇದೊಂದು ನಮ್ಮನ್ನು ನಾವೇ ಹುಡುಕಿಕೊಳ್ಳುವ ಪಯಣ. ದೀಪಾ ಹಿರೇಗುತ್ತಿಯವರ ಈ ಪುಸ್ತಕ ಸೋಲನ್ನು ಮತ್ತು ಗೆಲುವನ್ನು ನೋಡುವ ದೃಷ್ಟಿಕೋನದ ಬಗ್ಗೆ ಹಲವು ಮಜಲುಗಳಲ್ಲಿ ಚರ್ಚಿಸುತ್ತದೆ. ಗೆಲುವು ಮತ್ತು ಸೋಲು ಎರಡೂ ಒಂದಕ್ಕೊಂದು ಪೂರಕವೆಂದೂ, ಸೋಲಿನ ಗೆಳೆತನ ಗೆಲುವಿಗೆ ಅಗತ್ಯವೆಂದೂ ಹೇಳುವ ಈ ಪುಸ್ತಕ ಬರೀ ಗೆಲುವನ್ನು ಮಾತ್ರ ಸಂಭ್ರಮಿಸುವ ಈ ಜಗತ್ತಿನಲ್ಲಿ ಪ್ರತೀ ಸೋಲೂ ಛಲದ ಬೀಜವೊಂದನ್ನು ತನ್ನೊಳಗೆ ಹೊತ್ತಿರುತ್ತದೆ ಎಂಬುದನ್ನೂ ಹೇಳುತ್ತದೆ. ನಿಜ ಜೀವನದ ಘಟನೆಗಳು, ಸಾಧಕರ ಬದುಕಿನ ಕತೆಗಳೊಂದಿಗೆ ಮತ್ತು ವಿಭಿನ್ನ ಒಳನೋಟದೊಂದಿಗೆ ಹೇಗೆ ಪ್ರತೀ ತಿರುವಿನಲ್ಲೂ ಹೊಸದಾರಿಗೆ ಹೊರಳಿಕೊಳ್ಳಬಹುದೆಂಬುದನ್ನು ಸುಂದರವಾಗಿ ನಿರೂಪಿಸುತ್ತದೆ. ಎಡವಿದ ಪ್ರತೀ ಕಲ್ಲೂ ಸಾಧನೆಗೆ ಮೆಟ್ಟಿಲಾಗಬಹುದೆಂಬುದನ್ನು, ಪ್ರತೀ ಹಿನ್ನಡೆಯೂ ಹೇಗೆ ಮೌನವಾಗಿ ಗೆಲುವಿಗೆ ಸಹಾಯ ಮಾಡಬಹುದೆಂಬುದನ್ನು ಉದಾಹರಣೆಗಳೊಂದಿಗೆ ಹೇಳುತ್ತದೆ.
ಮುರಿದ ಕನಸುಗಳ ಭಗ್ನ ಹೃದಯಿಗಳಿಗೆ ಪಿಸುಮಾತಿನಲ್ಲಿ ಸಾಂತ್ವನ ಹೇಳುವ ಈ ಬರಹಗಳು ಬದುಕಿನ ಹಾದಿಯಲ್ಲಿ ಹಿಂದುಳಿದವರಿಗೆ ಮುಂದುವರಿಯಲು ಧೈರ್ಯ ತುಂಬುತ್ತವೆ. ಸಣ್ಣಬೆಟ್ಟ ಏರಿದವರಿಗೆ ಹಿಮಾಲಯ ನಿಮಗಾಗಿ ಕಾಯುತ್ತಿದೆ ಎಂಬ ಸ್ಫೂರ್ತಿ ತುಂಬುತ್ತವೆ. ಓಡಲು ಇಷ್ಟವಿಲ್ಲದವರಿಗೆ ಇದ್ದಲ್ಲೇ ನಮ್ಮದೇ ಆದ ಪುಟ್ಟ ಜಗತ್ತನ್ನು ಕಟ್ಟಿಕೊಳ್ಳುವ ಸಾರ್ಥಕತೆಯ ಬಗ್ಗೆಯೂ ಹೇಳುತ್ತವೆ. ಕೊನೆಗೂ ಸೋಲು ಗೆಲುವು ಎಲ್ಲಕ್ಕಿಂತ ಮಿಗಿಲಾದುದು ಬದುಕೇ ಎಂದು ಹೇಳುವ ಉತ್ಕಟ ಜೀವನಪ್ರೀತಿಯ ಬರಹಗಳಿವು.
ದೀಪಾ ಹಿರೇಗುತ್ತಿ | Deepa Hiregutti |
0 average based on 0 reviews.