| Category: | ಕನ್ನಡ |
| Sub Category: | ಅಂಕಣ ಬರಹಗಳು |
| Author: | ಶ್ರೀಮತಿ ಎಚ್ ಎಸ್ | Shrimati H S |
| Publisher: | Jeerunde Books |
| Language: | Kannada |
| Number of pages : | 286 |
| Publication Year: | 2026 |
| Weight | 250 |
| ISBN | 978-81-995528-0-7 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ನಿಂದನೆ, ಅವಹೇಳನಗಳು ಇರುವ ಸಂದರ್ಭವಿದೆ ಎಂದಮೇಲೆ, ಅಲ್ಲಿ ನಮಗೆ ಪ್ರೀತಿಯು ದೊರೆಯುವುದಿಲ್ಲ ಎಂಬ ವ್ಯಾಖ್ಯಾನವನ್ನು ಒಪ್ಪಿಕೊಳ್ಳಲು ಸಾಮಾನ್ಯವಾಗಿ ನಮಗೆಲ್ಲರಿಗೂ ಕಷ್ಟವೇ ಆಗುತ್ತದೆ. ದೈಹಿಕವಾಗಿಯೂ ಮಾನಸಿಕವಾಗಿಯೂ ಹಿಂಸೆಗೆ ಒಳಗಾಗುತ್ತಲೇ ಇರುವ ಮಕ್ಕಳಿಗೆ, ಅವರ ಅಮ್ಮ ಅಪ್ಪಂದಿರು ಹಿಂಸೆಯ ಜೊತೆಜೊತೆಗೇ ಪ್ರೀತಿಯೂ ಇರಬಹುದು ಎಂಬ ಪಾಠವನ್ನು ಅರೆದು ಕುಡಿಸುತ್ತಾರೆ. ಹಿಂಸೆಯು ಪ್ರೀತಿಯ ಒಂದು ಅನಿವಾರ್ಯ ಭಾಗವೇ ಎಂಬಂತೆ ಹೇಳುತ್ತಾರೆ. ಇನ್ನೂ ಮುಂದುವರೆದು, ಹಿಂಸೆಯು ಪ್ರೀತಿಯನ್ನು ಅಭಿವ್ಯಕ್ತಿಸುವ ಒಂದು ವಿಧಾನ ಎಂದು ಕೂಡಾ ಹೇಳಿಬಿಡುತ್ತಾರೆ. ಚಿಕ್ಕಂದಿನಿಂದಲೂ ಕಲಿತ ಈ ತಪ್ಪು ಪಾಠಗಳೇ ಪ್ರೌಢ ವಯಸ್ಕರಾಗುವ ವೇಳೆಗೆ ನಮ್ಮಲ್ಲಿ ಭದ್ರವಾಗಿ ಆಕಾರ ತಳೆದು ನೆಲೆಸುತ್ತವೆ; ಮತ್ತು ಅವು ಪ್ರೀತಿಯ ಬಗೆಗಿನ ನಮ್ಮ ಗ್ರಹಿಕೆಗಳನ್ನು ಪ್ರಭಾವಿಸುತ್ತವೆ. ನಾವು ಎಳೆಯರಿದ್ದಾಗ ನಮ್ಮನ್ನು ಹಿಂಸಿಸಿ ನೋಯಿಸುತ್ತಿದ್ದವರು ವಾಸ್ತವದಲ್ಲಿ ನಮ್ಮನ್ನು ಪ್ರೀತಿಸುತ್ತಿದ್ದರು ಎಂಬ ಅಭಿಪ್ರಾಯಕ್ಕೆ ನಾವು ಜೋತುಬಿದ್ದಿರುತ್ತೇವೆ. ನಾವು ಇದನ್ನೇ ಪ್ರೌಢ ವಯಸ್ಕರಾದ ಮೇಲೂ ಮುಂದುವರೆಸುತ್ತೇವೆ. ನಮ್ಮ ಜೊತೆಗಿನ ಇತರ ವಯಸ್ಕರು ನಮ್ಮನ್ನು ನೋಯಿಸಿದಾಗಲೂ ʼನಮ್ಮನ್ನು ನೋಯಿಸಿದ ಅವರು ನಿಜವಾಗಿ ನಮ್ಮನ್ನು ಪ್ರೀತಿಸುತ್ತಾರೆʼ ಎಂದೇ ನಂಬಲು ಬಯಸುತ್ತೇವೆ; ಮತ್ತು ಅದನ್ನೇ ತರ್ಕಬದ್ಧವಾಗಿ ಮಂಡಿಸುತ್ತೇವೆ ಕೂಡಾ.
ಒಮ್ಮೆ ನಿಜವಾದ ಪ್ರೀತಿಯ ಅರಿವು ಆದವರಲ್ಲಿ, ಆ ಪ್ರೀತಿಯ ಪರಿವರ್ತನಾ ಶಕ್ತಿಯು ಕೊನೆಯವರೆಗೂ ಉಳಿದುಕೊಂಡೇ ಬರುತ್ತದೆ. ಪರಸ್ಪರ ಕಾಳಜಿ ಮತ್ತು ಬೆಳವಣಿಗೆಯ ಅನುಭವವನ್ನು ಕೊಟ್ಟ ಆ ವ್ಯಕ್ತಿಯ ಸಹವಾಸ ಇನ್ನಿಲ್ಲ ಎಂದಾದ ಮೇಲೂ ಈ ಶಕ್ತಿಯು ಇದ್ದೇ ಇರುತ್ತದೆ. ಇದನ್ನೇ ಥಾಮಸ್ ಮಾರ್ಟನ್, “ಪ್ರೀತಿಯಲ್ಲಿ ನಾವು ನಮ್ಮ ನಿಜತನವನ್ನು ಕಂಡುಕೊಳ್ಳುತ್ತೇವೆ” ಎಂದು ಹೇಳುತ್ತಾನೆ. ನಮ್ಮಲ್ಲಿ ಅನೇಕರು ನಮ್ಮ ಈ ನಿಜತನವನ್ನು ಒಪ್ಪಿ ಅಪ್ಪಿಕೊಳ್ಳಲು ತಯಾರೇ ಇರುವುದಿಲ್ಲ. ಅದರಲ್ಲೂ, ಸಮಗ್ರತೆಯೊಂದಿಗೆ ಬದುಕುತ್ತೇವೆ ಎಂಬ ಸಮಯವು ನಮ್ಮನ್ನು ನಮ್ಮ ಪರಿಚಿತ ಲೋಕಗಳಿಂದ ಪ್ರತ್ಯೇಕಿಸುತ್ತದೆ ಎಂಬ ಭಯವು ನಮ್ಮನ್ನು ಆವರಿಸಿದಾಗ ಇದು ಇನ್ನಷ್ಟು ಕಷ್ಟವೇ ಆಗುತ್ತದೆ. ನಾವು ನಮ್ಮತನದ ಚೇತರಿಕೆಗಾಗಿ ಪ್ರಯತ್ನಿಸುತ್ತಿರುವ ಸಮಯದಲ್ಲಿ, ಕೆಲವೊಮ್ಮೆ ನಾವು ಒಬ್ಬಂಟಿಯೇನೋ ಎಂಬ ಭಾವ ಹೆಚ್ಚಾಗಿಯೇ ಕಾಡಬಹುದು. ನಮ್ಮ ಚೇತನವನ್ನು ಪೋಷಿಸದಿರುವ ಒಬ್ಬರ ಸಹವಾಸದಲ್ಲಿ ಇರುವುದರ ಬದಲು, ಏಕಾಂತದಲ್ಲಿ ಇರುವ ಆಯ್ಕೆ ಮಾಡಿಕೊಳ್ಳುವುದು ಹೆಚ್ಚು ಉಪಯುಕ್ತ.
ಶ್ರೀಮತಿ ಎಚ್ ಎಸ್ | Shrimati H S |
0 average based on 0 reviews.