| Category: | ವೀರಲೋಕ ಪುಸ್ತಕಗಳು |
| Sub Category: | ಕವನಗಳು |
| Author: | ರಾಜು ಅಡಕಳ್ಳಿ | Raju Adakalli |
| Publisher: | ವೀರಲೋಕ | Veeraloka |
| Language: | Kannada |
| Number of pages : | |
| Publication Year: | 2025 |
| Weight | 300 |
| ISBN | 9789348 355577 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ತಿಳಿ ಹಾಸ್ಯದೊಂದಿಗೆ ತುಂಟತನದ ಸ್ವಾರಸ್ಯಗಳನ್ನೂ ಚುಟುಕುಗಳಲ್ಲಿ ಕುಟುಕುಗಳಂತೆ ಕಟ್ಟಿಕೊಟ್ಟಿರುವುದರಿಂದ ಇದು ರಸಗುಲ್ಲವಷ್ಟೇ ಅಲ್ಲ.
ರಸಬೆಲ್ಲವಾಗಿಯೂ ಸಿಹಿ ಹೆಚ್ಚಿಸಿದೆ. ಅಲ್ಲಲ್ಲಿ ಜೀವನದ ಚೊಗರು ಚೋದ್ಯಗಳಿಗೆ ಒಗ್ಗರಣೆಯೊಂದಿಗೆ ನಿಂಬೆರಸ ಹಾಕಿರುವುದರಿಂದ ರಸಗುಲ್ಲದಲ್ಲಿ ನವರಸಗಳಿರುವಂತಾಗಿದೆ.
ನಗು-ಲಘು ಶೈಲಿಯ ಬರಹಗಳಲ್ಲಿ ರುಚಿ ಹೆಚ್ಚಿಸಲು ಹೋಗಿ ಅಭಿವ್ಯಕ್ತಿಯಲ್ಲಿ ಸದಭಿರುಚಿ ಮರೆಯುವ ಅಪಾಯಗಳಾಗುತ್ತವೆ. ಆದರೆ ಅಡಕಳ್ಳಿಯವರು ರುಚಿ ಅಭಿರುಚಿಗಳ ಸಮಚಿತ್ತ ಕಾಯ್ದುಕೊಂಡಿದ್ದಾರೆ. ಹಾಸ್ಯದ ಹೋಳಿಗೆಯಲ್ಲಿ ಬದುಕಿನ ಗಂಭೀರ ಒಳನೋಟದ ಹೂರಣವನ್ನೂ ತುಂಬಿಕೊಟ್ಟಿರುವ, ಈ ಕೃತಿಯನ್ನು ಓದುತ್ತಾ ಈ ಪುಸ್ತಕಾಂಗಣದ ವಿಹಂಗಮದಲ್ಲಿ ವಿಹರಿಸಬಹುದು.
ಆಸ್ತಿ, ಅಂತಸ್ತು, ಹಣ ಮನುಷ್ಯನಲ್ಲಿದ್ದರೂ ಆತನಲ್ಲಿ ನಗುವೇ ಕೊರತೆಯಾದರೆ ಬಾಳು ವ್ಯರ್ಥವಂತೆ. ಮನಸ್ಸನ್ನು ಮುದಗೊಳಿಸಿಕೊಳ್ಳಲು.
ಹದಗೊಳಿಸಿಕೊಳ್ಳಲು ಈ 'ರಸಗುಲ್ಲಾ'ದ ಮೂಲಕ ಸಾಧ್ಯವಾಗುವುದಾದರೆ ನೀವೂ ಯಾಕೆ ಈ ಪುಸ್ತಕವನ್ನು ಕೈಗೆತ್ತಿಕೊಳ್ಳಬಾರದು?
ಡಾ. ಜಯಮಾಲಾ ರಾಮಚಂದ್ರ
ರಾಜು ಅಡಕಳ್ಳಿ | Raju Adakalli |
0 average based on 0 reviews.