Delivery between 2-8 Days
No returns accepted. Please refer our full policy
Your payments are 100% secure
ದೂರದ ಬೆಟ್ಟ ಕೆಲವರಿಗೆ ನುಣ್ಣಗೆ. ಕೆಲವರಿಗೆ ಕರಿಗತ್ತಲ ಫೇಂಡಾಮೃಗ, ಅದು ನುಣ್ಣಗೂ ಇಲ್ಲ. ಘಂಡಾಮೃಗವೂ ಅಲ್ಲವೆಂಬ ಅರಿವು ಮೂಡಿಸುವ ಪ್ರಯತ್ನ ಈ ಪುಸ್ತಕ. ಈ ಹಿಂದೆ ಬಂದಿದ್ದ ‘ಡಾರ್ಕ್ವೆಬ್’ ಕೃತಿಯ ಮುಂದುವರೆದ ಭಾಗ. ಮುಖ್ಯ ಭಾಗವನ್ನು ಆರ್ಟಿಫೀಶಿಯಲ್ ಇಂಟೆಲಿಜೆನ್ಸಿಗೆ ಮೀಸಲಿಡಲಾಗಿದೆ. ಇದು ಇನ್ನೊಂದು ಪಠ್ಯಪುಸ್ತಕವಲ್ಲ, ವಿಕಿಪಿಡಿಯವಲ್ಲ, ಗೂಗಲ್ ಸರ್ಚಿನ ಪರ್ಯಾಯವೂ ಅಲ್ಲ, ತಂತ್ರಜ್ಞಾನವೆಂದರೆ ಕಬ್ಬಿಣದ ಕಡಲೆಯೆಂಬ ಭಯವನ್ನು ಹೋಗಲಾಡಿಸಿ ‘ಸುಲಿದ ಬಾಳೆಯ ಹಣ್ಣಿನಂದದಿ’ ಮಾಡುವ ಪ್ರಯತ್ನ, ಹಗಲಿಡೀ ಮೈಮುರಿದು ದುಡಿದು ಇಳಿಸಂಜೆ ಊರ ಮುಂದಿನ ಅರಳಿಕಟ್ಟೆಯ ಮೇಲೆ ವಿರಾಮದಿಂದ ಕುಳಿತಾಗ ಮೂಡುವ ಲೋಕಜ್ಞಾನದ ಸಂವಾದ. ವಿದ್ಯಾರ್ಥಿಗಳು, ಉದ್ಯೋಗಸ್ಥರು, ಗೃಹಿಣಿಯರು, ಹಿರಿಯರು, ಖುದ್ದು ಟೆಕ್ಕಿಗಳಿಗೂ ಸಹಾಯವಾಗುವುದೆಂದು ನನ್ನ ನಂಬಿಕೆ. ತಂತ್ರಜ್ಞಾನವೆಂದರೆ ಬೆನ್ನು ತೋರಿಸಿ ಓಡಿಹೋಗುವ ಬದಲು ಬನ್ನಿ. ಓದಿನ ಸುಖ ಅನುಭವಿಸಿ.
ಇಲ್ಲಿನ ಬಹುತೇಕ ಲೇಖನಗಳು ವಿಜಯಕರ್ನಾಟಕ, ಸಮಾಜಮುಖಿ ಮುಂತಾದೆಡೆ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವ ಅಥವಾ ಶಿಬಿರ, ಕಾರ್ಯಗಾರ, ಕಾಲೇಜು ಮುಂತಾದೆಡೆ ಕೊಟ್ಟ ಉಪನ್ಯಾಸದ ಪಠ್ಯರೂಪದ್ದಾಗಿವೆ.
Madhu Y N |
ಮಧು ವೈ ಎನ್ |
0 average based on 0 reviews.