ಅ.ನಾ. ಪ್ರಹ್ಲಾದರಾವ್
Category: | ಕನ್ನಡ |
Sub Category: | ಸೃಜನಶೀಲ ಸಾಹಿತ್ಯ |
Author: | A N PRAHALLADRAO |
Publisher: | ವಸಂತ ಪ್ರಕಾಶನ |
Language: | Kannada |
Number of pages : | |
Publication Year: | |
Weight | |
ISBN | |
Book type | Paperback |
Delivery between 2-8 Days
No returns accepted. Please refer our full policy
Your payments are 100% secure
ಪತ್ರಿಕೆಗಳ ಬಹುಪಾಲು ಓದುಗರ ನೆಚ್ಚಿನ ಅಂಕಣ ‘ಪದಬಂಧ’. ಭಾಷಾ ಪ್ರೌಢಿಮೆ, ಮನೋವಿಕಾಸ ಮತ್ತು ಮನೋಲ್ಲಾಸಕ್ಕೆ ಪೂರಕವಾಗುವ ‘ಪದಬಂಧ’ದ ಇತಿಹಾಸ ಒಂದು ಶತಮಾನದ್ದು. ಇಂಗ್ಲೆಂಡಿನ ರಾಜನೊಬ್ಬ ಕಾಲಹರಣಕ್ಕಾಗಿ ಎಡದಿಂದ ಬಲಕ್ಕೆ ಮತ್ತು ಮೇಲಿಂದ ಕೆಳಕ್ಕೆ ಅಕ್ಷರಗಳ ಜೋಡಿಸಿ ಮಾಡಿದ ಪದರಚನೆಯೇ ಪದಬಂಧದ ಉಗಮವಾಗಲು ಕಾರಣ. ಪತ್ರಿಕೆಯಲ್ಲಿ ಪದಬಂಧ ಮೊದಲು ಮೂಡಿದ್ದು ೧೯೧೩ರ ಡಿಸೆಂಬರ್ ೨೧ರ ಸಂಚಿಕೆಯಲ್ಲಿ. ಕ್ರಿಸ್ಮಸ್ ವಿಶೇಷಾಂಕದಲ್ಲಿ ಏನಾದರೊಂದು ವಿಶೇಷ ಅಳವಡಿಸಬೇಕೆಂದು ನಿರ್ಧರಿಸಿದ ‘ದಿ ನ್ಯೂಯಾರ್ಕ್ ವರ್ಡ್’ ಪತ್ರಿಕೆಯ ಸಂಪಾದಕ ಆರ್ಥರ್ ವಿನ್ ಪದಗಳ ಆಟದೊಂದಿಗೆ ಓದುಗರ ನೋಟವನ್ನು ಸೆಳೆಯಲು ‘ವರ್ಡ್ಕ್ರಾಸ್’ ಎಂಬ ಅಂಕಣವನ್ನು ಸೃಷ್ಟಿಸಿದ. ನಂತರ, ಆ ಅಂಕಣ ಎಷ್ಟು ಜನಪ್ರಿಯವಾಯಿತೆಂದರೆ ಇತರೆ ಪತ್ರಿಕೆಗಳೂ ಇಂತಹುದೇ ಅಂಕಣವನ್ನು ತಮ್ಮ ಪುರವಣಿಗಳಲ್ಲಿ ಪ್ರಕಟಿಸಲೇಬೇಕಾದ ಅನಿವಾರ್ಯತೆಯುಂಟಾಯಿತು.
ವಿಶ್ವ ಇಂದು ‘ಪದಬಂಧ ಶತಮಾನೋತ್ಸವ’ ಆಚರಿಸುತ್ತಿರುವ ಸಂದರ್ಭದಲ್ಲಿ ಪತ್ರಕರ್ತರಾಗಿಯೂ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳಾಗಿಯೂ ಸೇವೆ ಸಲ್ಲಿಸಿರುವ ಅ.ನಾ.ಪ್ರಹ್ಲಾದರಾವ್ ಅವರ ಪದಬಂಧಗಳಿರುವ ಈ ಪುಸ್ತಕ ಹೊರಬರುತ್ತಿದೆ. ಅ.ನಾ.ಪ್ರಹ್ಲಾದರಾವ್ ಅವರು ಕನ್ನಡದ ವಿವಿಧ ನಿಯತಕಾಲಿಕೆಗಳಿಗಾಗಿ ೪೦,೦೦೦ ಪದಬಂಧಗಳನ್ನು ರಚಿಸಿದ್ದು, ಇದಕ್ಕಾಗಿ ಸುಮಾರು ೧೨ ಲಕ್ಷ ಸುಳುಹುಗಳನ್ನು ನೀಡಿದ್ದಾರೆ. ಬಹುಶಃ ಪ್ರಪಂಚದಲ್ಲಿ ಮೊದಲ ‘ಪದಬಂಧ ಶತಮಾನೋತ್ಸವ’ ಆಚರಿಸುತ್ತಿರುವ ಹೆಗ್ಗಳಿಕೆ ಕನ್ನಡಿಗರದು.
ಈ ಕೃತಿಯನ್ನು ನೀವು ತೆರೆಯುತ್ತಿದ್ದಂತೆ ಸ್ವಾರಸ್ಯಕರ ಸವಾಲುಗಳನ್ನು ಒಡ್ಡುತ್ತ ಕನ್ನಡದ ಶಬ್ದಸಂಪತ್ತಿಗೆ ಇರುವ ಅನೇಕ ಸಾಧ್ಯತೆಗಳನ್ನು ತೆರೆದುತೋರಿಸುತ್ತವೆ ಒಳಗಿನ ಪುಟಗಳು.
A N PRAHALLADRAO |
0 average based on 0 reviews.