Delivery between 2-8 Days
No returns accepted. Please refer our full policy
Your payments are 100% secure
ಕೊಡಗಿನ ಮಳೆಗಾಲಕ್ಕೂ ಬೆಂಗಳೂರಿನ ಹೋಟಲ್ ಚಟ್ನಿಗೂ ಅಂತರಜಾಲದ ಸಮಸ್ಯೆ ಗಳಿಗೂ ಏನು ಸಂಬಂಧ? ಹಳ್ಳಿಯಿಂದ ಬಂದ ಹುಡುಗ ಸಿಟಿ ಬಸ್ಸಿನಲ್ಲಿ ನಿದ್ದೆ ಮಾಡಿದ ಹಾಗೆ ವಿಮಾನದ ಪೈಲಟ್ಟುಗಳೇ ನಿದ್ದೆ ಮಾಡಿದರೆ ಏನಾಗುತ್ತದೆ? ಈ ಪತ್ರವನ್ನು ಇಪ್ಪತ್ತೊಂದು ಜನಕ್ಕೆ ಕಳುಹಿಸಿ’ ಎನ್ನುತ್ತಿದ್ದವರು ಈಗಲೂ ಇದ್ದಾರೆಯೇ? ಗೋಡೆಗೆ ಹಚ್ಚುತ್ತಿದ್ದ ಸುಣ್ಣ ಎಲ್ಲಿ, ಅಮೆರಿಕಾದಲ್ಲಿ ಕಂಡುಹಿಡಿದಿರುವ ಅಚ್ಚಬಿಳಿ ಬಣ್ಣ ಎಲ್ಲಿ?
ದಕ್ಷಿಣ ಕೊಡಗಿನ ಶ್ರೀಮಂಗಲ ಎಂಬ ಪುಟ್ಟ ಊರಿನಲ್ಲಿ ದಶಕಗಳ ಹಿಂದೆ ಕಳೆದ ಬಾಲ್ಯವನ್ನು ನೆನಪಿಸಿಕೊಳ್ಳುತ್ತಲೇ ವಿಜ್ಞಾನ-ತಂತ್ರಜ್ಞಾನ ಜಗತ್ತಿನ ಇಂದಿನ ಬೆಳವಣಿಗೆಗಳನ್ನು ಪರಿಚಯಿಸುವ ಈ ಬರಹಗಳು ಕನ್ನಡ ವಿಜ್ಞಾನ ಸಾಹಿತ್ಯ ಲೋಕದಲ್ಲೊಂದು ವಿನೂತನ ಪ್ರಯೋಗ, ಇಲ್ಲಿನ ಬರಹಗಳನ್ನು ಓದುತ್ತಾ ಹೋದಂತೆ ನಿಮ್ಮೆದುರು ಹೊಸದೊಂದು ಜಗತ್ತೇ ತೆರೆದುಕೊಳ್ಳುತ್ತದೆ, ಮುಂದಿನ ರಜೆಯಲ್ಲಿ ಶ್ರೀಮಂಗಲವನ್ನೊಮ್ಮೆ ನೋಡಿ ಬರೋಣ ಎಂದೂ ಅನ್ನಿಸುತ್ತದೆ.
ಪುಸ್ತಕವನ್ನು ಈಗಾಗಲೇ ಕೈಗೆತ್ತಿಕೊಂಡಿದ್ದೀರಿ. ಇನ್ನೇಕೆ ತಡ, ಬನ್ನಿ, ಅಂದಿನ ನೆನಪುಗಳ ಜೊತೆಗೆ ಇಂದಿನ ತಂತ್ರಜ್ಞಾನದ ಈ ಜುಗಲ್ಬಂದಿಯನ್ನು ಆಸ್ವಾದಿಸಿ!
Srinidhi T G |
0 average based on 0 reviews.