Delivery between 2-8 Days
No returns accepted. Please refer our full policy
Your payments are 100% secure
ಮರುಭೂಮಿಯ ರಾಜ್ಯವೊಂದರ ರಾಜನಿಗೆ ಒಮ್ಮೆ ಒಂಟೆಗಳೆಲ್ಲಾ ನಕ್ಕಂತೆ ಕನಸು ಬೀಳುತ್ತದೆ.
`ಒಂಟೆಗಳೇಕೆ ನಕ್ಕವು?’ ಎಂದು ರಾಜ ಪಂಡಿತರ ಸಭೆ ಕರೆದು ಕೇಳುತ್ತಾನೆ.
`ಒಂಟೆಗಳು ನಗುವುದಿಲ್ಲ, ನಗುವುದು ಮನುಷ್ಯರು ಮಾತ್ರಾ ದೊರೆಯೇ’ ಎಂದು ಪಂಡಿತರು ಹೇಳುತ್ತಾರೆ.
ರಾಜ, `ಹಾಗಾದರೆ ನನ್ನ ರಾಜ್ಯದಲ್ಲಿ ನನ್ನ ಪ್ರಜೆಗಳೆಲ್ಲರೂ ನಗುತ್ತಾರೆಯೇ?’ ಎಂದು ಅಚ್ಚರಿಯಿಂದ ಕೇಳುತ್ತಾನೆ.
ಅದಕ್ಕೆ ಪಂಡಿತರು, `ಮನುಷ್ಯರು ನಗುವುದು ಸಹಜ ಧರ್ಮ’ ಎಂದು ವಿವರಿಸುತ್ತಾರೆ.
ಮರುದಿನ ಮತ್ತೆ ಪಂಡಿತರ ಸಭೆ ಕರೆದ ರಾಜ, `ಕಳೆದ ರಾತ್ರಿ ನನಗೆ ಕನಸಲ್ಲಿ ಪ್ರಜೆಗಳೆಲ್ಲಾ ಅತ್ತಂತೆ ಕಾಣಿಸಿತು’ ಎಂದು ಹೇಳುತ್ತಾನೆ.
ಪಂಡಿತರು, `ಮನುಷ್ಯರು ಅಳುವುದೂ ಸಹಜಧರ್ಮ’ ಎಂದು ವಿವರಿಸುತ್ತಾರೆ.
ಮೂರನೇ ದಿನ ರಾಜ ಅದೇ ಪಂಡಿತರ ಸಭೆ ಕರೆದು `ನನಗೆ ಕನಸಲ್ಲಿ ಪ್ರಜೆಗಳೆಲ್ಲಾ ನಕ್ಕಂತೆಯೂ, ಒಂಟೆಗಳೆಲ್ಲಾ ಅತ್ತಂತೆಯೂ ಕನಸು ಬಿತ್ತು’ ಎಂದು ಹೇಳುತ್ತಾನೆ.
ಈಗ ಪಂಡಿತರು ರಾಜನಿಗೆ ಒಂದು ಸಲಹೆ ನೀಡುತ್ತಾರೆ, `ರಾಜನೇ ಮೊದಲು ನೀನು ನಗಲು ಕಲಿ. ನಂತರ ಅಳಲು ಕಲಿ. ನಗು ಮತ್ತು ಅಳುವನ್ನು ಧಿಕ್ಕರಿಸಿದ ನೀನು ರಾಜ್ಯವನ್ನು ಹೇಗೆ ಆಳುವೆ? ನೀನು ನಕ್ಕರೆ ಒಂಟೆಗಳು ನಗಲಾರವು, ನೀನು ಅತ್ತರೆ ಪ್ರಜೆಗಳು ಅಳಲಾರರು.’
ಈ ಪುಸ್ತಕ ಈ ಕಾಲದ ರಾಜ ಮತ್ತು ಪ್ರಜೆಗಳ ಕತೆಗಳ ಸಂಗ್ರಹ.
GOPALA KRISHNA KUNTANI |
0 average based on 0 reviews.