
Category: | ಕನ್ನಡ |
Sub Category: | ವ್ಯಕ್ತಿತ್ವ ವಿಕಸನ |
Author: | ಗಿರೀಶ್ ಶ್ರೀಪಾದ ಮೇವುಂಡಿ | Girish Shreepaada Mevundi |
Publisher: | ಸಾವಣ್ಣ ಪ್ರಕಾಶನ | Sawanna Prakashana |
Language: | Kannada |
Number of pages : | 148 |
Publication Year: | 2025 |
Weight | 400 |
ISBN | 978-81-990526-2-8 |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಒಯಿಸಿಸ್
ಮಾನವನ ವಿಕಾಸದ ಹಾದಿಯಿಂದ ಹಿಡಿದು ಇತ್ತೀಚಿನ ಆಧುನಿಕತೆಯ ಪ್ರಗತಿಯ ಪಥವನ್ನು ಅವಲೋಕಿಸಿದಾಗ ಈ ಅಗಾಧವಾದ ಬೆಳವಣಿಗೆಯಿಂದ ಮೂಲತಃ ನಾವೆಲ್ಲರೂ ಬದುಕಲು ಅಗತ್ಯವಿರುವ ಮೂಲಭೂತ ಅವಶ್ಯಕತೆಗಳನ್ನು ಹೊಂದಿ ಈ ವಿಕಸಿತ ಬುದ್ದಿಯ ಪ್ರಭಾವದಿಂದ ಈ ಮೂಲಭೂತ ಅಗತ್ಯತೆಗಳಾಚೆ ಚಿಂತಿಸಿ ಇದರ ಪರಿಣಾಮವು ನಮ್ಮ ಬದುಕನ್ನು ಇನ್ನಷ್ಟು ಸರಳ ಹಾಗೂ ಸಂತೃಪ್ತಗೊಳಿಸಿ ತನ್ಮೂಲಕ ಹೆಚ್ಚಿನ ನೆಮ್ಮದಿಯಿಂದ ಕೂಡಿದ ಬದುಕನ್ನು ಸಂಭ್ರಮಿಸುವಂತಾಗಬೇಕಿತ್ತು! ಆದರೆ ಇಂದು ನಮ್ಮೆಲ್ಲರ ಬದುಕು ಇದಕ್ಕೆ ವ್ಯತಿರಿಕ್ತವಾದ ಮಾರ್ಗದಲ್ಲಿ ಸಾಗುತ್ತಿದೆ. ಒಂದುಕಡೆ ನಾಗರಿಕತೆ, ನೂತನ ತಂತ್ರಜ್ಞಾನ ಹಾಗೂ ಅನ್ವೇಷಣೆಗಳ ವಿಷಯದಲ್ಲಿ ಮಾನವ ಇತರೆ ಜೀವರಾಶಿಗಳ ಹೋಲಿಕೆಗೆ ಸಿಗದಷ್ಟು ಉಚ್ಚಾಯ ಸ್ಥಿತಿಯಲ್ಲಿದ್ದಾನೆ. ಇದಕ್ಕೆ ವ್ಯತಿರಿಕ್ತವಾಗಿ ಬಹುತೇಕರು ತಮ್ಮ ಬದುಕನ್ನು ಕಟ್ಟಿಕೊಳ್ಳುವ ಹೋರಾಟದಲ್ಲಿ ನಿರಾಶೆ-ಹತಾಶೆಗಳಿಂದ ಬಳಲುತ್ತಾ ಬದುಕೇ ಇಲ್ಲವೇನೋ ಎಂಬಂತೆ ಸಾಯುತ್ತಿದ್ದಾರೆ! ಇದಕ್ಕೆಲ್ಲಾ ಮೂಲ ಕಾರಣ ಈ ಬದುಕನ್ನು ಅರ್ಥಮಾಡಿಕೊಳ್ಳದೆ ಬದುಕಿನ ಉದ್ದೇಶ ಹಾಗೂ ಲಯ ತಿಳಿಯದೆ ಬತ್ತದ ಬಯಕೆಗಳೆಂಬ ಬಿಸಿಲುಕುದುರೆ ಏರಿ ಫಲವೆಂಬ ನೀರು ಹುಡುಕುತ್ತಾ ಹೊರಟು ಮರೀಚಿಕೆಯನ್ನು ಕಂಡಂತಾಗಿದೆ ನಮ್ಮೆಲ್ಲರ ಸ್ಥಿತಿ! ಈ ಹಿನ್ನೆಲೆಯಲ್ಲಿ ಸುಖ-ಶಾಂತಿ ಹಾಗೂ ನೆಮ್ಮದಿ-ಸಂತೃಪ್ತಿಗಳ ಕೊರತೆಯಿಂದ ಮರುಭೂಮಿಯಂತೆ ಬರಡಾದ ಬದುಕನ್ನು ನಿಷ್ಕರ್ಶಿಸಿ, ಬದುಕುವ ಬಗೆಯನ್ನು ಅರಿತು, ಬದುಕಿನ ನಿಯಮಗಳನ್ನು ಪಾಲಿಸುತ್ತಾ ಅದರ ಲಯದಂತೆ ನಮ್ಮ ಅರ್ಹತೆ ಹಾಗೂ ಯೋಗ್ಯತೆಯನ್ನು ವೃದ್ಧಿಸಿಕೊಂಡು ಬಯಸಿದ ಬದುಕನ್ನು ಪಡೆಯುವ ಹುಡುಕಾಟದಲ್ಲಿ ಸಿಗುವ ಸ್ಫೂರ್ತಿಯ ಚಿಲುಮೆಯೇ ಈ 'ಓಯಸಿಸ್.'
-ಗಿರೀಶ ಶ್ರೀಪಾದ ಮೇವುಂಡಿ
![]() |
ಗಿರೀಶ್ ಶ್ರೀಪಾದ ಮೇವುಂಡಿ | Girish Shreepaada Mevundi |
ಗಿರೀಶ್ ಶ್ರೀ ಮೇವುಂಡಿ ಉದ್ಯೋಗ: ಮೂಲತಃ ಗ್ರಾಮೀಣಾಭಿವೃದ್ಧಿ ಪಂಚಾಯತ ರಾಜ್ ಇಲಾಖೆಯ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಪ್ರಾದೇಶಿಕ ತರಬೇತಿ ಕೇಂದ್ರ ಧಾರವಾಡದಲ್ಲಿ ಆಡಳಿತ ಮತ್ತು ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಣ: ಎಂ.ಬಿ.ಎ. (ಗ್ರಾಮೀಣಾಭಿವೃದ್ಧಿ ನಿರ್ವಹಣೆ), ಎಂ.ಎ. (ಇತಿಹಾಸ) ಮತ್ತು ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಸ್ನಾತಕೋತ್ತರ ಡಿಪ್ಲೋಮಾ. ಹವ್ಯಾಸ: ಪುಸ್ತಕ ಓದುವುದು, ಪುಸ್ತಕ ಬರೆಯುವುದು, ಚಾರಣ, Read More... |
0 average based on 0 reviews.