Delivery between 2-8 Days
No returns accepted. Please refer our full policy
Your payments are 100% secure
ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ವಿಶ್ವದ ಕೋಟ್ಯಾಂತರ ಜನರನ್ನು ರಂಜಿಸುತ್ತಿರುವ ‘ಪದಬಂಧ’ ಜಗತ್ತಿನ ಎಲ್ಲ ಮ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿರುವ ಜನಪ್ರಿಯ ಅಂಕಣ. ಕನ್ನಡ ಪತ್ರಿಕೆಗಳಿಗೆ ಕಳೆದ ೩೨ ವರ್ಷಗಳಿಂದ ಪದಬಂಧ ಸಿದ್ಧಪಡಿಸುತ್ತಾ ಬಂದಿರುವ ಅ.ನಾ.ಪ್ರಹ್ಲಾದರಾವ್ ಇಲ್ಲಿಯವರೆವಿಗೂ ೪೨,೦೦೦ ಪದಬಂಧಗಳನ್ನು ರಚಿಸಿದ್ದಾರೆ. ಭಾರತದಲ್ಲಿಯೇ ಅತ್ಯಂತ ಹೆಚ್ಚು ಪದಬಂಧ ಬರೆದ ಹೆಗ್ಗಳಿಕೆಗೆ ಪಾತ್ರರಾಗಿ, ೨೦೧೫ ಹಾಗೂ ೨೦೧೬ನೆ ಸಾಲಿನಲ್ಲಿ ಲಿಮ್ಕಾ ದಾಖಲೆಗೆ ಸೇರುವ ಮೂಲಕ ಕನ್ನಡ ಭಾಷೆಯ ಮುಡಿಗೆ ಗರಿ ಸಿಕ್ಕಿಸಿದ್ದಾರೆ.
ಈ ಹಿಂದೆ ೨೦೦೮ರಲ್ಲಿ ‘ವಸಂತ ಪ್ರಕಾಶನ’ ಅ.ನಾ.ಪ್ರಹ್ಲಾದರಾವ್ ಅವರ ಐದು ‘ಪದಬಂಧ’ ಪುಸ್ತಕಗಳನ್ನು ಪ್ರಾಯೋಗಿಕ ಆಕಾರದಲ್ಲಿ ಪ್ರಕಟಿಸಿತು. ನಂತರ ‘ಪದಕ್ರೀಡೆ’ ಹಾಗೂ ‘ಪದವ್ಯೂಹ’ ಹೆಸರಿನ ಮತ್ತೆರಡು ‘ಪದಬಂಧ’ ಪುಸ್ತಕಗಳು ಪ್ರಕಟಗೊಂಡವು. ಇದೀಗ ಒಟ್ಟಿಗೆ ೫ ಪದಬಂಧ ಪುಸ್ತಕಗಳನ್ನು ವಸಂತ ಪ್ರಕಾಶನ ಹೊರತರುತ್ತಿದೆ. ‘ಪದಜಾಲ’ ‘ಪದಜಗ’ ‘ಪದರಂಗ’ ‘ಪದಸಂಪದ’ ಹಾಗೂ ‘ಪದವ್ಯೂಹ’ ಈ ಐದೂ ಪದಬಂಧ ಪುಸ್ತಕಗಳನ್ನು ಹೊರ ತರುವ ಮೂಲಕ ವಸಂತ ಪ್ರಕಾಶನ ಕನ್ನಡ ಸಾರಸ್ವತ ಲೋಕಕ್ಕೆ ಒಟ್ಟು ೧೨ ವೈವಿಧ್ಯಮಯ ಪದಬಂಧ ಪುಸ್ತಕಗಳನ್ನು ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
– ವೈ.ಜಿ.ಗಿರಿಶಾಸ್ತ್ರಿ
ಹಿರಿಯ ಪತ್ರಕರ್ತರು
A N PRAHALLADRAO |
0 average based on 0 reviews.