
Category: | ಕನ್ನಡ |
Sub Category: | ಲೇಖನಗಳು, ಪ್ರಬಂಧಗಳು |
Author: | ಮನು ಗುರುಸ್ವಾಮಿ | Manu Guruswamy |
Publisher: | pustaka mane |
Language: | Kannada |
Number of pages : | |
Publication Year: | 2025 |
Weight | 400 |
ISBN | 91960647420945 |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
'ನಿನ್ನ ಇಚ್ಛೆಯಂತೆ ನಡೆವೆ' ಇದು ಮನು ಗುರುಸ್ವಾಮಿಯವರ ಮೊದಲ ಲೇಖನ ಸಂಕಲನ.
ಹೊಸಗನ್ನಡ ಸಾಹಿತ್ಯದಲ್ಲಿ ಕಾಣಸಿಗುವ ಅರ್ಥಪೂರ್ಣ ಕವಿತೆಗಳನ್ನು ಕುರಿತದ್ದು ಅಪೂರ್ವ ವಸ್ತು ವಿಷಯಗಳನ್ನು ಒಳಗೊಂಡಿರುವಂತದ್ದು,
ಹೊಸಗನ್ನಡ ಸಾಹಿತ್ಯ ಕಾಲಘಟ್ಟದಲ್ಲಿ ಕಾಣಸಿಗುವ ಪ್ರಮುಖ ಕವಿಗಳಾದ ಕುವೆಂಪು, ಬೇಂದ್ರೆ, ಕೆ.ಎಸ್ ನರಸಿಂಹಸ್ವಾಮಿ, ಡಿ.ವಿ.ಜಿ ಮೊದಲಾದವರು ತಮ್ಮ ಕವಿತೆಗಳ ಮೂಲಕ ಮಾನವನ ಜೀವನದ ನಾನಾ ಮಜಲುಗಳಿಗೆ ಮುನ್ನುಡಿ ಬರೆದಿದ್ದಾರೆ. ಹೊಸಗನ್ನಡ ಸಾಹಿತ್ಯದ ವಸ್ತುಗಳೇ ಹೀಗೆ; ಭಾವದ ಚಿಲುಮೆಯಲ್ಲಿ ಮುಳುಗಿಸುವ ಅಂತರ್ ಶಕ್ತಿಯನ್ನು ಒಳಗೊಂಡಿವೆಯೆಂದ ಮಾತ್ರಕ್ಕೆ ಅನ್ಯ ಸಾಹಿತ್ಯದಲ್ಲಿ ಇಲ್ಲಿ ಆಯ್ದುಕೊಂಡಿರುವ ವಸ್ತು ವಿಷಯಗಳಾದ ಬದುಕಿನ ಅನಿಶ್ಚಿತತೆ, ಜೀವನಪಾಠ, ಪ್ರೀತಿ-ಪ್ರೇಮ, ಮಮತೆ, ಬಡತನ, ಮಧ್ಯಮ ವರ್ಗದ ಸ್ಥಿತಿಗತಿಗಳು ಕಾಣಸಿಗುವುದೇ ಇಲ್ಲವೆಂದಲ್ಲ; ಕನ್ನಡ ಸಾಹಿತ್ಯವು ತನ್ನ ಸ್ವಂತಿಕೆಯನ್ನು ಮರೆತಿಲ್ಲವೆಂದರ್ಥ. ಈ ಮಣ್ಣಿನ ಸ್ವತ್ವವನ್ನು ಹೀರಿ ಬೆಳೆಯುವಲ್ಲಿ ಅದು ಹಿಂದೆ ಬಿದ್ದಿಲ್ಲವೆನ್ನುವುದರಲ್ಲಿ ಎರಡನೇ ಮಾತಿಲ್ಲವೆಂಬುದು ಲೇಖಕರ ನಿಲುವು.
ಕನ್ನಡ ಕವಿಗಳ ಸುಪ್ರಸಿದ್ಧ ಕವಿತೆಗಳನ್ನು ವಿವರಿಸುವ ಮೂಲಕ ಕವಿತಾ ಲೋಕದೊಳಗೆ ವಿಹರಿಸುವ ಮನು ಅವರು ಈ ನಾಡಿನ ಯುವಜನತೆ ಸೇರಿದಂತೆ ಕನ್ನಡಿಗರೆದೆಯಲ್ಲಿ ಪುಳಕ ಹುಟ್ಟಿಸುವಂತೆ ಈ ಲೇಖನಗಳನ್ನು ರಚಿಸಿ ವಿಶ್ಲೇಷಿಸಿದ್ದಾರೆ.
ಬದುಕಿನ ಬವಣೆಯೇ ಪ್ರೀತಿ; ಮಮತೆಯ ಜ್ಯೋತಿ, ಕಷ್ಟ-ಸುಖಗಳೊಳಗಿಹುದು ಆರತಿಯೆಂಬ ಮಾತು ಸಾಮಾನ್ಯವಾದರೂ ಮಮತೆಯ ರೂಪಕವಾಗಿ ಇಲ್ಲಿ ಜ್ಯೋತಿ ಬೆಳಗುತ್ತದೆ.
ಅದು ಕೇವಲ ಜ್ಯೋತಿಯಲ್ಲ, ಅನಂತ ಅರ್ಥಗಳಾರತಿ ಎಂದು ಬಣ್ಣಿಸುವುದು ಇಲ್ಲಿ ನನ್ನ ಕಾರ್ಯವಲ್ಲ ಪ್ರೀತಿ, ಜ್ಯೋತಿ, ಬದುಕಿನ ಅನನ್ಯತೆ, ಬವಣೆ, ಜೀವನದ ನಶ್ವರತೆಯನ್ನು ಕಟ್ಟಿಕೊಡುವ ಕವಿತೆಗಳನ್ನು ಮನು ಅವರು ಎತ್ತಿಹಿಡಿದು ನಮ್ಮಓದುವ ಗೀಳಿಗೆ ಸ್ಪೂರ್ತಿಯನ್ನು ನೀಡಿದ್ದಾರೆ.
ಮುನ್ನುಡಿಯಿಂದ - ಚೈತ್ರಾ. ಎಂ, ಕೆ ಆರ್ ನಗರ
ಮನು ಗುರುಸ್ವಾಮಿ | Manu Guruswamy |
0 average based on 0 reviews.