
Category: | ಕನ್ನಡ |
Sub Category: | ಕಥಾ ಸಂಕಲನ |
Author: | ಡಾ.ಸುಮತಿ ಪಿ | Dr Sumathi P |
Publisher: | pustaka mane |
Language: | Kannada |
Number of pages : | |
Publication Year: | 2025 |
Weight | 400 |
ISBN | 919606474289-52 |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಗ್ರಾಮೀಣ ಪ್ರದೇಶದಿಂದ ಮೂಡಿ ಬಂದ ಸಾಹಿತ್ಯ ಲೋಕದ ದೈತ್ಯ ಶಕ್ತಿಯೇ ಡಾ. ಸುಮತಿಯವರು, 'ತುಂಬಿದ ಕೊಡ ತುಳುಕುವುದಿಲ್ಲ' ಎಂಬಂತೆ ಅತ್ಯಂತ ಸರಳ ಸಜ್ಜನಿಕೆಯ -ವ್ಯಕ್ತಿತ್ವ, ಅವರ ನಿರಂತರ ಪ್ರಯತ್ನ, ದೃಢ ನಿರ್ಧಾರಗಳಿಂದ ಅಸಾಧ್ಯವಾದುದನ್ನು -ಸಾಧ್ಯವಾಗಿಸಬಹುದೆಂದು ತೋರಿಸಿಕೊಟ್ಟವರು. ಅದರ್ಶ ಗೃಹಿಣಿಯಾಗಿ, ನೆಚ್ಚಿನ ಉಪನ್ಯಾಸಕಿಯಾಗಿ, ಎಲ್ಲಕ್ಕಿಂತ ಮಿಗಿಲಾಗಿ ಶಿಸ್ತು ಬದ್ಧ ಜೀವನವನ್ನು ತನ್ನದಾಗಿಸಿಕೊಂಡವರು -ಡಾ. ಸುಮತಿಯವರು. ಕನ್ನಡ ಸಾಹಿತ್ಯ ಲೋಕಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ. -'ನಿಲುಕದ ನಕ್ಷತ್ರ" ಇವರ ಆರನೆಯ ಕೃತಿಯಾಗಿದೆ. ಇದು 28 ಸಣ್ಣ ಕಥೆಗಳನ್ನು ಒಳಗೊಂಡಿದೆ. -ಎಲ್ಲಾ ಕಥೆಗಳಲ್ಲಿಯೂ ಇಂದಿನ ಸಮಾಜ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಕಾಣಬಹುದು. ತಂದೆ-ತಾಯಿ-ಮಕ್ಕಳ ಬಾಂಧವ್ಯ, ಪ್ರೀತಿ-ಪ್ರೇಮಗಳಲ್ಲಾಗುವ ಪ್ರಮಾದಗಳು, ಕುಡಿತದಿಂದಾಗುವ ದುಷ್ಪರಿಣಾಮಗಳು ಅತ್ಯಂತ ಸುಂದರವಾಗಿ ಮೂಡಿಬಂದಿವೆ.
ಹೊರ ನೋಟದಿಂದ ಯಾವ ವ್ಯಕ್ತಿಯ ವ್ಯಕ್ತಿತ್ವವನ್ನೂ ಅಳೆಯಬಾರದು - ಎಂಬುವುದು - ಆಪದ್ಭಾಂಧವ' ಕಥೆಯಲ್ಲಿ ನಿರೂಪಿತವಾಗಿದೆ. ಕಣ್ಣಾರೆ ಕಂಡರೂ ಪರಾಂಬರಿಸಿ ನೋಡಬೇಕು" ಎಂಬುವುದಕ್ಕೆ " ತಂಗಿಯ ಪ್ರೀತಿ" ಕಥೆ ಉತ್ತಮ ಉದಾಹರಣೆಯಾಗಿದೆ. -ಸಜ್ಜನರ ಸಹವಾಸದಿಂದ ಏನು ಲಾಭವಿದೆ? ಅಹಂಕಾರಕ್ಕೆ ಉದಾಸೀನವೇ ಮದ್ದು ಹೆಣ್ಣು -ಮಕ್ಕಳ ಪ್ರಾಮುಖ್ಯತೆ, ಸ್ತ್ರೀ ಶಿಕ್ಷಣ, ಏಪ್ರಿಲ್ ಫೂಲ್ ನ ಎಡವಟ್ಟು ಎಲ್ಲವೂ ಸಹಜವಾಗಿ ಕಥೆಗಳಲ್ಲಿ ಮೂಡಿ ಬಂದಿದೆ. "ವಿದಾಯ" ಕಥೆಯಲ್ಲಿ ಸೈನಿಕ ಮತ್ತು ಅವರ ಮಗಳ ಭಾವನೆಗಳು ಹೃದಯಸ್ಪರ್ಶಿಯಾಗಿವೆ.
ಒಟ್ಟಿನಲ್ಲಿ ಕನ್ನಡ ಸಾಹಿತ್ಯದಲ್ಲಿ ಏನೆಲ್ಲಾ ಪ್ರಾಕಾರಗಳಿವೆ ಅವುಗಳಲ್ಲೆಲ್ಲಾ ಕೈಯಾಡಿಸಿದ್ದಾರೆ. ಡಾ. ಸುಮತಿಯವರು. ಇವರ ಸಾಹಿತ್ಯ ಕೃಷಿ ಇನ್ನೂ ಎತ್ತರೆತ್ತರಕ್ಕೇರಲಿ. ಸದಾ ಕನ್ನಡಾಂಬೆಯ ಸೇವೆ ಸಲ್ಲಿಸುತ್ತಿರಲಿ. ಭಗವಂತನ ಆಶೀರ್ವಾದ ಸದಾ ಅವರಿಗಿರಲಿ- ಎಂಬ ಶುಭಭಾವನೆಯೊಂದಿಗೆ
ಮಾಲತಿ ವಸಂತರಾಜ್
ನಿವೃತ್ತ ಉಪನ್ಯಾಸಕಿ,
ಎಸ್. ವಿ. ಟಿ, ಪದವಿಪೂರ್ವ ಕಾಲೇಜು ಕಾರ್ಕಳ
ಡಾ.ಸುಮತಿ ಪಿ | Dr Sumathi P |
0 average based on 0 reviews.