ದೂರದ ಬಾಂಬೆಯಲ್ಲಿ ದೀರ್ಘಕಾಲದಿಂದ ನೆಲೆಸಿದ್ದರೂ ಮಿತ್ರಾ ವೆಂಕಟರಾಜ ಅವರ ಭಾಷೆ ಒಂದಿಷ್ಟೂ ಬದಲಾಗಿಲ್ಲ. ಆಕರ್ಷಕ ಕಥನಶೈಲಿ ಅವರದು. ಬಿಟ್ಟು ಹೋಗಿರುವ ನೆಲದ ಬೇರುಗಳು ಇನ್ನೂ ಆಳಕ್ಕಿಳಿದಿವೆ. 'ಕುಂದಾಪ್ರ ಕನ್ನಡ'ದ ಕೆಲವು ಕಥೆಗಳೂ ಇಲ್ಲಿವೆ. ಇದು ಅವರ ನಾಲ್ಕನೆಯ ಕಥಾ ಸಂಕಲನ, ಮಿತ್ರಾರವರು ತಮ್ಮ ಕತೆಗಳಲ್ಲಿ ಅನ್ವೇಷಿಸುವ ವಿಷಯಗಳು, ಪಾತ್ರಗಳ ಸಾಮಾಜಿಕ ಕೌಟುಂಬಿಕ ನೆಲೆಗಳು ಮತ್ತು ಬದಲಾಗುವ ಸಾಮಾಜಿಕ ಪರಿವರ್ತನೆಯ ಪ್ರಭಾವಗಳು ಬೆರಗುಗೊಳಿಸುವಷ್ಟು ವೈವಿಧ್ಯಮಯ. ಸ್ತ್ರೀ ಪ್ರಧಾನ ಕಥೆಗಳು ಇಲ್ಲಿಯ ವಿಶೇಷ. ಕಥೆಗಳು ಮುಗಿದರೂ ಕಥಾವಸ್ತು ಮನಸ್ಸಿನಿಂದ ಮಾಸುವುದೇ ಇಲ್ಲ. ಅವರ ಕಥನಗಾರಿಕೆಯ ಶಕ್ತಿಯೇ ಅದು. ಹೊರ ರಾಜ್ಯದಲ್ಲಿ ನೆಲಸಿದ್ದರೂ ಕನ್ನಡ ಕಥಾಪ್ರಪಂಚವನ್ನು ವಿಸ್ತರಿಸುತ್ತಿರುವ ಕೆಲವೇ ಲೇಖಕಿಯರಲ್ಲಿ ಒಬ್ಬರು ಮಿತ್ರಾ ವೆಂಕಟರಾಜ ಅವರು
Category: | ಕನ್ನಡ |
Sub Category: | ಕಥಾ ಸಂಕಲನ |
Author: | ಮಿತ್ರಾ ವೆಂಕಟ್ರಾಜ |
Publisher: | ಅಂಕಿತ ಪುಸ್ತಕ |
Language: | |
Number of pages : | |
Publication Year: | |
Weight | |
ISBN | |
Book type | Paperback |
Delivery between 2-8 Days
No returns accepted. Please refer our full policy
Your payments are 100% secure
ಮಿತ್ರಾ ವೆಂಕಟ್ರಾಜ |
0 average based on 0 reviews.