
Category: | ಕನ್ನಡ |
Sub Category: | ಕವನಗಳು |
Author: | ಪುಷ್ಪಾ ಶಶಿಧರ್ | Pushpa Shashidhar |
Publisher: | ಎಚ್ ಎಸ್ ಆರ್ ಎ ಪ್ರಕಾಶನ | H S R A Prakashana |
Language: | Kannada |
Number of pages : | |
Publication Year: | 2025 |
Weight | 300 |
ISBN | |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಪುಷ್ಪ ಶಶಿಧರ್ರವರು "ನನಗೆ ನಾನೇ" ಎಂಬ ಚೊಚ್ಚಲ ಕವನಸಂಕಲನವನ್ನು ಹೊರತರುತ್ತಿರುವುದು ಖುಷಿಯ ವಿಚಾರ.
ವೃತ್ತಿಯಲ್ಲಿ ಮಾನವ ಸಂಪನ್ಮೂಲ ವಿಭಾಗ ಮುಖ್ಯಸ್ಥರಾಗಿ ಸದಾ ಕಂಪ್ಯೂಟರ್ ಮುಂದೆ ಕೂರುವ ಇವರು ಬಾಲ್ಯದಿಂದ ಬೆಸೆದು ಬಂದ ಕನ್ನಡ ಸಾಹಿತ್ಯದ ಸೆಳೆತ, ಕನ್ನಡದ ಪದಗಳ ಮೋಡಿಗೆ ಆರ್ಕಷಿತರಾಗಿ ಕೆಲವು ವರುಷಗಳಿಂದ ಕನ್ನಡ ಸಾಹಿತ್ಯದ ಬರವಣಿಗೆಯ ಕಡೆಗೆ ಮುಖ ಮಾಡಿರುವುದು ಹರ್ಷದಾಯಕ ವಿಚಾರ.
"ನನಗೆ ನಾನೇ" ಕವನಸಂಕಲನದಲ್ಲಿ ಮೂಡಿಬಂದಿರುವ ಸುಮಾರು 50 ಕವಿತೆಗಳ ಒಳ ತಿರುಳನ್ನು ಓದಲು ಹೊರಟಾಗ ಇವರ ಕವಿತೆಗಳಲ್ಲಿ ಪ್ರೀತಿ ಪ್ರೇಮ ವಿರಹದ ಸಾಲುಗಳಿಂತ, ಮನುಜನ ಜೀವನೋತ್ಸಾಹದ ಜೊತೆಯಲ್ಲಿ ಅಂತರಂಗದ ಮಿಡಿತದ ತಲ್ಲಣಗಳಿವೆ. ಮನೋಲ್ಲಾಸವಿದೆ. ಕನ್ನಡದ ಕಂಪನ್ನು ಎಲ್ಲಡೆ ಪಸರಿಸುವ ಒಳ್ಳೆಯ ಕವಯಿತ್ರಿ ನಾನಾಗಬೇಕೆಂದು ಹಂಬಲಿಸಿದ್ದೇ ಆದರೆ ಇತರರಿಗೆ ತನ್ನನ್ನು ತಾನು ಹೋಲಿಸಿಕೊಳ್ಳದೇ ನನ್ನ ಆತ್ಮಸಾಕ್ಷಿಗೆ ಒಪ್ಪುವಂತೆ ನನಗೆ ನಾನೇ ಆಗಿರುವೆ ಎಂದು ಹೇಳುವ ಸಾಲುಗಳು ಕವಯಿತ್ರಿಯ ಆತ್ಮಸ್ಥೆರ್ಯವನ್ನು ತಿಳಿಸುತ್ತದೆ ಮತ್ತು ಇಂದಿನ ಕವಿಗಳು/ಕವಯಿತ್ರಿಯರು ನಾವು ಕೂಡ ಬೇರೆಯವರಂತೆ ಬರೆಯಬೇಕು ಈ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು, ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಬೇಕೆಂದು ಬಯುಸುತ್ತಾರೆ. ಪ್ರತಿಯೊಬ್ಬ ಬರಹಗಾರರು ಕೂಡ ಬಹುಬೇಗ ಯಶಸ್ವಿಯಾಗಲು ಬಯಸದೇ ನಿರಂತರವಾದ ಓದು, ಪರಿಶ್ರಮದಿಂದ ಪ್ರಬುದ್ಧತೆಯ ಬರಹವನ್ನು ಬರೆಯುವುದು ರೂಢಿಸಿಕೊಳ್ಳಬೇಕು. ನಮ್ಮ ಬರಹ ನಮ್ಮ ಆತ್ಮ ತೃಪ್ತಿಗಾಗಿಯೇ ವಿನ: ಇನ್ನೊಬ್ಬರ ಮೆಚ್ಚುಗೆಯನ್ನು ಬಯಸಬಾರದೆಂದು ಹೇಳುವ ಸಾಲುಗಳು ಓದುಗನ ಗಮನ ಸೆಳೆಯುತ್ತವೆ.
ಶ್ರೀಮತಿ ಪುಷ್ಪ ಶಶಿಧರ್ರವರು ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಕವಿತೆಗಳನ್ನು ಸೊಗಸಾಗಿ ವಾಚನ ಮಾಡಿರುವುದನ್ನು ಕಂಡಿದ್ದೇನೆ ಇವರು ನಿರೂಪಕಿಯಾಗಿಯೂ ಕಾರ್ಯಕ್ರಮಗಳ ನಿರೂಪಣೆ ಮಾಡಿರುತ್ತಾರೆ. ಈಗ ಕನ್ನಡ ಸಾಹಿತ್ಯಲೋಕಕ್ಕೆ "ನನಗೆ ನಾನೇ" ಎಂಬ ಚೊಚ್ಚಲ ಕೃತಿಯನ್ನು ಲೋಕಾರ್ಪಣೆ ಮಾಡಲು ಸಿದ್ದರಾಗಿದ್ದಾರೆ. ಇವರ ಈ ಕೃತಿಯು ಇವರಿಗೆ ಯಶಸ್ಸನ್ನು ತಂದು ಕೊಡಲಿ. ಮುಂದೆ ಹತ್ತಾರು ಕೃತಿಗಳನ್ನು ಬರೆದು ಕನ್ನಡಮ್ಮನ ಮಡಿಲು ಸೇರಿಸಿ, ಕೀರ್ತಿ ಪ್ರಶಸ್ತಿ ಗೌರವಗಳಿಗೆ ಭಾಜನರಾಗಲಿ ಎಂದು ಶುಭ ಕೋರುವೆ..
ನಾರಾಯಣಸ್ವಾಮಿ (ನಾನಿ) ವಕೀಲರು ಮತ್ತು ಲೇಖಕರು ಬಂಡಹಳ್ಳಿ ಮಾಸ್ತಿ ಕೋಲಾರ ಜಿಲ್ಲೆ
ಪುಷ್ಪಾ ಶಶಿಧರ್ | Pushpa Shashidhar |
0 average based on 0 reviews.