| Category: | ಕನ್ನಡ |
| Sub Category: | ಕಾದಂಬರಿ |
| Author: | ನಾಗರಾಜ ರಾವ್ ಎಂ ವಿ | Nagaraja rao M V |
| Publisher: | pustaka mane |
| Language: | Kannada |
| Number of pages : | |
| Publication Year: | 2026 |
| Weight | 200 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ವಾಡೇಕರ್ ಗಡಗಡ ನಡುಗಿದ. ಹಣೆಯಲ್ಲಿ ಬೆವರು ಹನಿ ಸಾಲುಗಟ್ಟಿತು. ಪತ್ರದಲ್ಲಿ ಸ್ಪಷ್ಟವಾಗಿತ್ತು "ಹತ್ಯೆ.. ನನ್ನನ್ನು ಹತ್ಯೆ ಮಾಡಲಾಗಿದೆ. ನನ್ನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹೊತ್ತಿಸಿ ಹತ್ಯೆ ಮಾಡಿದರು. ನನ್ನ ಅತ್ತೆ ಮತ್ತು ನಾದಿನಿ ಪ್ರತ್ಯಕ್ಷ ವಾಗಿ ನನ್ನ ಮಾವ ಮತ್ತು ಗಂಡ ಇದರಲ್ಲಿ ಪರೋಕ್ಷವಾಗಿ ಸಹಕರಿಸಿದ್ದಾರೆ. ಎಲ್ಲರೂ ನನ್ನ ಸಾವಿಗೆ ಜವಾಬ್ದಾರರು."
ಕೈನಿಂದ ಜಾರಿದ ಪತ್ರ ಫ್ಯಾನಿನ ಗಾಳಿಗೆ ಸಿಕ್ಕಿ ಇಡೀ ಕ್ಯಾಬಿನ್ನಿನಲ್ಲಿ ಗರಗರ ಸುತ್ತತೊಡಗಿತು, ಇದುವರೆಗೆ ಹೀಗೆ ಪತ್ರ ಸುತ್ತುವುದನ್ನು ವಾಡೇಕರ್ ನೋಡಿರಲಿಲ್ಲ ತಕ್ಷಣ ಮೇಲೆದ್ದು ಅದನ್ನು ಹಿಡಿದುಕೊಂಡ.
* ಎದುರಿಗೆ ಏನೋ ಕರಗುತ್ತಿದೆ ಎನಿಸಿತು. ಹೊಗೆಯ ಮಧ್ಯೆ ವಿಲೀನವಾಗುತ್ತಿದೆ. ಚರ್ಮ, ಮಾಂಸ, ಅಸ್ತಿ ನಂಜರ ಬೂದಿ ಮತ್ತು ಕೊನೆಗೆ ಎಲ್ಲವೂ ಶೂನ್ಯ! ಅವನು ಗಡಗಡ ನಡುಗಿದ ಇಡೀ ದೃಶ್ಯ ತನ್ನ ಕಣ್ಣಿನ ಪಾಪೆಯಲ್ಲಿ ಇಳಿದು ಬಂದಂತೆ ಭಾಸವಾಗ ತೊಡಗಿತು.
ಕ್ಯಾಮರಾ ಮೇಲಿದ್ದ ಕಣ್ಣು ಪಕ್ಕಕ್ಕೆ ಚಲಿಸಿತು. ಎದುರಿಗೆ ಆ ಮೋಹಕ ಸೌಂದರ್ಯದ ಯುವತಿ ಇರಲಿಲ್ಲ. ಕೇವಲ ಮುಳ್ಳು ಪೊದೆ ಕರಗುತ್ತಿದ್ದ ಮೊಂಬತ್ತಿಯ ಬೆಳಕು ಮತ್ತು ಗಾಢಾಂಧಕಾರ!
ನಾಗರಾಜ ರಾವ್ ಎಂ ವಿ | Nagaraja rao M V |
|
ನಾಗರಾಜರಾವ್ ಎಂ ವಿ |
0 average based on 0 reviews.